ಲಕ್ನೋ: ತನ್ನ ಪತ್ನಿಯನ್ನು ಬ್ಲಾಕ್ ಮೇಲ್ ಮಾಡಲು ಪತಿಯೊಬ್ಬ ಫಸ್ಟ್ ನೈಟ್‍ನಲ್ಲಿ ಪತ್ನಿಯ ಅಶ್ಲೀಲ ಫೋಟೋ ತೆಗೆದು ಅದನ್ನು ಫೇಸ್‍ಬುಕ್‍ನಲ್ಲಿ ಹಾಕಿದ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.
ವರದಿಗಳ ಪ್ರಕಾರ ಮಹಿಳೆ 2 ತಿಂಗಳ ಹಿಂದೆ ಮದುವೆಯಾಗಿದ್ದಳು. ಆದರೆ ಪತಿ ಹಾಗೂ ಆತನ ಕುಟುಂಬದವರು ವರದಕ್ಷಿಣೆಯಿಂದ ತೃಪ್ತಿಯಾಗಿರಲಿಲ್ಲ. ಹಾಗಾಗಿ ಪತಿ ಬ್ಲಾಕ್‍ಮೇಲ್ ಮಾಡಲು ತನ್ನ ಫಸ್ಟ್ ನೈಟ್‍ನಲ್ಲಿ ಪತ್ನಿಯ ಅಶ್ಲೀಲ ಫೋಟೋಗಳನ್ನು ತೆಗೆದಿದ್ದಾನೆ.
ಪತಿ ತನ್ನ ಫಸ್ಟ್ ನೈಟ್‍ನಲ್ಲಿ ಕಿಟಕಿಯಲ್ಲಿ ಮೊಬೈಲ್ ಬಚ್ಚಿಟ್ಟು ಪತ್ನಿಯ ಅಶ್ಲೀಲ ಫೋಟೋ ತೆಗೆದಿದ್ದಾನೆ. ನಂತರ ಆ ಫೋಟೋಗಳನ್ನು ಪತ್ನಿಗೆ ತೋರಿಸಿ ಆಕೆಯನ್ನು ಬ್ಲಾಕ್‍ಮೇಲ್ ಮಾಡಿ ಆಕೆಯನ್ನು ಮನೆಯಿಂದ ಹೊರ ಹಾಕಲು ಪ್ಲಾನ್ ಮಾಡಿದ್ದನು.
ಫಸ್ಟ್ ನೈಟ್ ಮರುದಿನ ಪತಿ ಮತ್ತಷ್ಟು ವರದಕ್ಷಿಣೆ ತರಲು ಪತ್ನಿಗೆ ಹೇಳಿದ್ದನು. ಅಲ್ಲದೇ ತಮ್ಮ ವಿರುದ್ಧ ಪೊಲೀಸರ ಹತ್ತಿರ ದೂರು ನೀಡಿದ್ದರೆ, ಈ ಅಶ್ಲೀಲ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವುದ್ದಾಗಿ ಬೆದರಿಕೆ ಹಾಕಿದ್ದನು.
ತನ್ನ ಪತಿ ಬ್ಲಾಕ್‍ಮೇಲ್ ಮಾಡುತ್ತಿರುವ ವಿಷಯವನ್ನು ಮಹಿಳೆ ತನ್ನ ತಂದೆಯ ಬಳಿ ಹಂಚಿಕೊಂಡಿದ್ದಳು. ಇದನ್ನು ಕೇಳಿ ಮಹಿಳೆ ತಂದೆ ಕೂಡ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಸದ್ಯ ಮಹಿಳೆ ಈಗ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಾಳೆ.
ಮಹಿಳೆ ತನ್ನ ಗಂಡನ ಮನೆಯವರಿಗಾಗಿ ಒಂದೂವರೆ ತಿಂಗಳು ಕಾಯುತ್ತಿದ್ದಳು. ಆದರೆ ಅವರು ಯಾವುದೇ ಪ್ರತಿಕ್ರಿಯೇ ನೀಡದೇ ಇದ್ದಾಗ ಪರಿವಾರ ಕೇಂದ್ರಕ್ಕೆ ಹೋಗಿ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಪತಿ ಫೇಸ್‍ಬುಕ್‍ನಲ್ಲಿ ತನ್ನ ಪತ್ನಿಯ ಅಶ್ಲೀಲ ಫೋಟೋ ಹಾಕಿ, ನಿಂದಿಸಿ ಪೋಸ್ಟ್ ಮಾಡಿದ್ದಾನೆ.
ಸದ್ಯ ಮಹಿಳೆ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದು, ಅವರು ಪ್ರಕರಣದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಆಶ್ವಾಸನೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews