ಬೆಂಗಳೂರು: ಮುಂದಿನ 6-7 ತಿಂಗಳಲ್ಲಿ ಹೆಬ್ಬಾಳ ಫ್ಲೈಓವರ್ (Hebbala Flyover) ಅಗಲೀಕರಣ ಕಾರ್ಯ ಮುಕ್ತಾಯವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ತಿಳಿಸಿದರು.
ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಒಂದೂವರೆ ವರ್ಷದಿಂದ ಕೆಲಸ ನಡೆಯುತ್ತಿದೆ. 6-7 ತಿಂಗಳಲ್ಲಿ ಮುಗಿಸೋದಾಗಿ ಹೇಳಿದರು. ಬಿಜೆಪಿ ಇದ್ದಾಗ 4 ವರ್ಷ ನಯಾಪೈಸಾ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ಹೆಬ್ಬಾಳ ಫ್ಲೈಓವರ್ ಕೆಲಸ ವೇಗವಾಗಿ ಮಾಡುತ್ತಿದ್ದೇವೆ. ಕಳೆದ ಒಂದು ವರ್ಷದಲ್ಲಿ ಅಗಲೀಕರಣ ವೇಗವಾಗಿ ನಡೆದಿದೆ. ಇಂದು ಕೂಡ ನಡೆಯುತ್ತಿದೆ. 6-7 ತಿಂಗಳಲ್ಲಿ ಹೆಬ್ಬಾಳ ಫ್ಲೈಓವರ್ ಅಗಲೀಕರಣ ಮುಕ್ತಾಯವಾಗುತ್ತದೆ ಎಂದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಗ್ಯಾರಂಟಿಗಳ ಪರಿಷ್ಕರಣೆ ಆಗಲ್ಲ: ಬಸವರಾಜ ರಾಯರೆಡ್ಡಿ
Advertisement
Advertisement
ಬಿಜೆಪಿ ಕೆಲಸ ಮಾಡಲಿಲ್ಲ. ನಾವು ಮಾತು ಕೊಟ್ಟಂತೆ ಕೆಲಸ ಮಾಡುತ್ತಿದ್ದೇವೆ. ಡಿಸಿಎಂ ಕೆಲಸ ಶುರು ಮಾಡಿಸಿದ್ದಾರೆ. ನಮ್ಮ ಮಾತಿನ ಮೇಲೆ ನನ್ನ ಜವಾಬ್ದಾರಿ ಇದೆ ಎಂದು ಬಿಜೆಪಿಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ಸಕಲೇಶಪುರದಲ್ಲಿ ಹಳಿ ಮೇಲೆ ಮತ್ತೆ ಭೂಕುಸಿತ – ರೈಲು ಸಂಚಾರ ಮತ್ತೆ ಸ್ಥಗಿತ
Advertisement