ಬೆಂಗಳೂರು: ತಮಿಳು, ಬಂಗಾಳಿ ಭಾಷೆಯನ್ನು ಕಲಿಯುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಿಎಂ ಸಿದ್ದರಾಮಯ್ಯ ಕನ್ನಡವನ್ನು ಕಲಿಯುದಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ಸಿದ್ದರಾಮಯ್ಯನವರು ವೈಯಕ್ತಿಕ ಖಾತೆಯಿಂದ ಟ್ವೀಟ್ ಮಾಡಿ ಕನ್ನಡ ಕಲಿಯುವುದಿಲ್ವಾ ಅಮಿತ್ ಶಾ ಅವರೆ ಎಂದು ಪ್ರಶ್ನಿಸಿದ್ದಾರೆ.
Advertisement
ಈ ಪ್ರಶ್ನೆಗೆ ಪರ ಮತ್ತು ವಿರೋಧ ಟ್ವೀಟ್‍ಗಳನ್ನು ಮಾಡಿ ಜನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
Advertisement
ಶಾ ತಮಿಳು, ಬಂಗಾಳಿ ಕಲಿಯುತ್ತಿರುವುದು ಯಾಕೆ?
ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಮತ ಗೆಲ್ಲಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಣತಂತ್ರ ಹೂಡಿದ್ದಾರೆ. ಈ ಎರಡು ಕಡೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲೆಂದೇ ಅಮಿತ್ ಶಾ ತಮಿಳು ಹಾಗೂ ಬಂಗಾಳಿ ಭಾಷೆಗಳನ್ನು ಕಲಿಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement
ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತದ ಬಳಿಕ ಮೋದಿ, ಅಮಿತ್ ಶಾ ಹೊಸ ಟಾರ್ಗೆಟ್ ಇದು
Advertisement
ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಲ ಕಡಿಮೆ ಇದ್ದು, ಪ್ರತಿ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಜಯಗಳಿಸಿದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಎಡಪಕ್ಷಗಳು ಜಯಗಳಿಸುತ್ತಿವೆ. ಹೀಗಾಗಿ ಈ ಎರಡು ರಾಜ್ಯಗಳಲ್ಲಿ ಕಮಲ ಅರಳಿಸಲು ಈಗ ಬಿಜೆಪಿಯ ಚುನಾವಣಾ ಚಾಣಕ್ಯ ಸಿದ್ಧತೆ ನಡೆಸುತ್ತಿದ್ದಾರೆ. ತವರು ರಾಜ್ಯವನ್ನು ಮತ್ತೊಮ್ಮೆ ಗೆಲ್ಲುವ ರಣತಂತ್ರದ ನಡುವೆಯೂ `ಭಾಷಾ’ ಅಧ್ಯಯನದಲ್ಲಿ ಅಮಿತ್ ಶಾ ಬ್ಯುಸಿಯಾಗಿರುವುದು ಇದೀಗ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಈ ಎರಡು ರಾಜ್ಯಗಳಲ್ಲಿ ಮಾತೃಭಾಷೆಯಲ್ಲೇ ಜನರೊಂದಿಗೆ ವ್ಯವಹರಿಸಿದ್ರೆ ಚುನಾವಣೆಗೆ ಲಾಭ ಎನ್ನುವ ನಿಟ್ಟಿನಲ್ಲಿ ಶಾ ಈ ತೀರ್ಮಾನಕ್ಕೆ ಬಂದಿದ್ದಾರೆ. ಇಷ್ಟು ಮಾತ್ರವಲ್ಲದೇ ಶಾ ಅಸ್ಸಾಂ, ಮಣಿಪುರ ಭಾಷೆಯನ್ನೂ ಕರಗತ ಮಾಡಿಕೊಳ್ಳುತ್ತಿದ್ದಾರಂತೆ. ಒಟ್ಟಿನಲ್ಲಿ ಗುಜರಾತ್ ಚುನಾವಣೆಯ ಬ್ಯುಸಿ ನಡುವೆಯೂ ದಕ್ಷಿಣದತ್ತ ಅಮಿತ್ ಶಾ ಕಣ್ಣು ಹಾಕಿದ್ದಾರೆ.
ಈಗಾಗಲೇ ಶಾ ಅವರಿಗೆ ತಮಿಳು, ಬೆಂಗಾಳಿ, ಅಸ್ಸಾಂ ಹಾಗೂ ಮಣಿಪುರಿ ಭಾಷೆಗಳನ್ನು ಕಲಿಸಲು ವೃತ್ತಿಪರ ಶಿಕ್ಷಕರು ಆಯ್ಕೆಯಾಗಿದ್ದು, ಶಾ ತಮ್ಮ ಭಾಷಾ ಕಲಿಕೆಯನ್ನು ಮುಂದುವರಿಸಿದ್ದಾರೆ. ಕಳೆದ ಒಂದು ವರ್ಷದಿಂದ ನಿರಂತರ ತರಗತಿಗಳು ನಡೆಯುತ್ತಿವೆ. ಸದ್ಯಕ್ಕೆ ಶಾ ಎರಡೂ ಭಾಷೆಗಳಲ್ಲಿ ಮಾತನಾಡುವಷ್ಟು ಕಲಿತಿದ್ದಾರೆ. ಆದರೆ ನಿರರ್ಗಳವಾಗಿ ಮಾತನಾಡಲು ಮತ್ತಷ್ಟು ಅಧ್ಯಯನದ ಅಗತ್ಯವಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಒಟ್ಟಿನಲ್ಲಿ ತಮಿಳುನಾಡು ಹಾಗೂ ಬಂಗಾಳ ರಾಜ್ಯದಲ್ಲೂ ಗೆದ್ದು, ಬಿಜೆಪಿ ಒಂದು ಪ್ರಬಲ ಪಕ್ಷವಾಗಿ ಹೊರಹೊಮ್ಮಲು ಅಮಿತ್ ಶಾ ಈ ಉಪಾಯ ಹೂಡಿದ್ದಾರೆ. ಆಯಾ ರಾಜ್ಯದ ಭಾಷೆಯಲ್ಲೇ ಜನರೊಂದಿಗೆ ಮಾತನಾಡಿದ್ರೆ ಮಾತ್ರ ಜನ ಇನ್ನೂ ತಮ್ಮೊಂದಿಗೆ ಹತ್ತಿರವಾಗುತ್ತಾರೆ. ಹೀಗೆ ಮಾಡಿದ್ದಲ್ಲಿ ತಮ್ಮ ಪಕ್ಷಕ್ಕೆ ಜನ ಮತ ನೀಡಬಹುದೆಂಬ ಉದ್ದೇಶ ಅವರದ್ದಾಗಿದೆ.
ಕನ್ನಡ ಕಲಿಯೋದಿಲ್ವಾ @AmitShah ರವರೆ?
Won’t you learn Kannada? https://t.co/rxTA08E3RC
— Siddaramaiah (@siddaramaiah) November 21, 2017
Wanna bet bro?
Congress isn't coming back.
— lel (@u_w_u99) November 21, 2017
ರಾಗಾ ಮತ್ತು ಸೋಗಾ ಕನ್ನಡ ಗೊತ್ತಿರೋ ಸೌಟುಗಳ
— Manu (@manukumarsmk) November 21, 2017
He thought bjp has strong leaders in Karnataka so no need to learn kannada
But reality is????????????
— Manu E Gowda (@MEGowdaB) November 21, 2017
ಕಾಂಗ್ರೆಸ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಕಲಿಸೋದಕ್ಕೆ ಹೇಳಿ. ಜೊತೆಗೆ ಆಲೂಗಡ್ಡಯಿಂದ ಚಿನ್ನ ಮಾಡೋ ಮಶೀನನ್ನೂ ಕೊಡಿಸಿ..
— Manu (@manukumarsmk) November 21, 2017
ಸರ್ ಸರಿಯಾಗಿ ಪಂಚ್ ಕೊಟ್ಟಿದಿರ ಶಾ ಗೆ.
ಹಾಗೆ ಇವರನ್ನ ಸ್ವಲ್ಪ ನೋಡಿ ಸರ್ ಕನ್ನಡದವರಾಗಿ ಬೆಳಗಾವಿಯಲ್ಲಿ ಮರಾಠಿಯಲ್ಲಿ ಪ್ರಚಾರ ಮಾಡಿದ್ದಾರೆ ಏನಾದರೂ ಬುದ್ದಿ ಹೇಳ್ತೀರಾ ಸರ್ ಇವ್ರಿಗೆ ಒಂದು ಸಲಾ ಕನ್ನಡ ಕ್ಲಾಸ್ ತಗೊಳಿ ಸರ್ ಆಗ ಬುದ್ದಿ ಬರತ್ತೆ ಇವ್ರಿಗೆ pic.twitter.com/9qjnsSrRLy
— Sambhavami_Yuge_Yuge (@Anadinidhana) November 21, 2017
https://twitter.com/winner2008/status/932995532326240256
https://twitter.com/kanwarlalbolo/status/932983862317039616
ಕರ್ನಾಟಕದಲ್ಲಿ ಬಿಜೆಪಿ ಬರೋದಿಲ್ಲ ಅನ್ನೋ ಕಾರಣಕ್ಕೆ ಕನ್ನಡ ಕಲಿಯೋದನ್ನ ಬಿಟ್ಟಿದ್ದಾರೆ.
— Shashidhar.JDS YLB (@GanigerK) November 21, 2017
ಅಮಿತ್ ಶಾ ತಮಿಳ್ ಕಲಿತಾರಂತೆ ಅಂದಾಗಲು, ಬಿ.ಜೆ.ಪಿಗೆ ಹೆಚ್ಚು ಸೀಟ್ ಕೊಟ್ಟ ಕರ್ನಾಟಕದ ಬಿ.ಜೆ.ಪಿ ಅವರಿಗೆ ಬೇಸರ ಆಗಲ್ಲ ನೋಡಿ. ಶಿವ ಶಿವ.
— vijaya kumar (@vijayakls) November 21, 2017
ಅವರ ಆಟ ಇಲ್ಲಿ ನಡಿಯಲ್ಲಾ ಅನ್ನೋದು ಅವರಿಗೂ ಗೊತ್ತಾದಂತಿದೆ ಪಾಪ…
ಅವರು ಕಲಿಯುವುದು ಬೇಡ… ರಾಜ್ಯನ ಲೂಟಿ ಮಾಡಿ ಜೈಲಿಗೆ ಹೋಗಿ ಮತ್ತೇ ರಾಜ್ಯಕ್ಕೆ ಕಳಂಕ ತರುವುದೂ ಬೇಡ…
ಏನಾದರು ಮಾಡಿಕೊಳ್ಳಲಿ ಬಿಡಿ ಸಾರ್…
— Srinivas Sri² (@Srinivas557123) November 21, 2017