ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಸರತ್ಕಲ್ ನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ದೀಪಕ್ ರಾವ್ ಮನೆಗೆ ಇಂದು ದ.ಕ ಜಿಲ್ಲೆಯ ಸುರತ್ಕಲ್ ಶಾಸಕ ಮೊಯ್ದೀನ್ ಬಾವಾ ಭೇಟಿ ನೀಟಿದ್ರು.
ಬಾವಾ ಅವರು ದೀಪಕ್ ಮನೆಗೆ ಭೇಟಿ ನೀಡುತ್ತಿದ್ದಂತೆಯೇ ಮೃತನ ಕುಟುಂಬಸ್ಥರು, ನಿನ್ನೆ, ಮೊನ್ನೆ ಎಲ್ಲಿದ್ರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ದೀಪಕ್ ಅವರ ತಾಯಿ ಪ್ರೇಮಾ ರಾವ್, ಮಗನನ್ನು ಕೊಂದವರಿಗೆ ಹೀಗೆಯೇ ಶಿಕ್ಷೆಯಾಗಬೇಕು. ಅವರಿಗೆ ಯಾರೂ ರಕ್ಷಣೆ ಕೊಡಬಾರದು ಅಂತ ಒತ್ತಾಯಿಸಿ ಶಾಸಕರ ಎದುರು ಕಣ್ಣೀರು ಹಾಕಿದ್ರು. ಈ ವೇಳೆ ದೀಪಕ್ ತಾಯಿಗೆ ಸಾಂತ್ವಾನ ಹೇಳಿದ ಬಾವಾ, ಭಗವಂತನಲ್ಲಿ ನಿಮ್ಮ ಕುಟಂಬಕ್ಕೆ ಪ್ರಾರ್ಥನೆ ಮಾಡುತ್ತೇನೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ನಾನು ಮಸೀದಿಯಲ್ಲಿ ನಮಾಜ್ ಸಂದರ್ಭ ಬೇಡುತ್ತೇನೆ. ದೀಪಕ್ ಕೊಲೆಯ ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಅಂದ್ರು.
Advertisement
Advertisement
ಚೆಕ್ ನಿರಾಕರಣೆ: ಸಾಂತ್ವಾನ ಹೇಳಿದ ಬಳಿಕ ಬಾವಾ ಅವರು ದೀಪಕ್ ತಾಯಿಗೆ ಒತ್ತಾಯಪೂರ್ವಕವಾಗಿ ಚೆಕ್ ನೀಡಲು ಮುಂದಾದ್ರು. ಈ ವೇಳೆ ಪ್ರೇಮಾ ಅವರು ಚೆಕ್ ಬೇಡವೇ ಬೇಡ ಎಂದು ದೂರ ತಳ್ಳಿದ್ರು.
Advertisement
ಈ ಸಂದರ್ಭದಲ್ಲಿ ನೆರೆದಿದ್ದ ದೀಪಕ್ ಕುಟುಂಬಸ್ಥರು ಹಾಗೂ ಸ್ಥಳೀಯರು ಶಾಸಕ ಅವರಿಗೆ ಬೈಗುಳದ ಸುರಿಮಳೆಗೈದ್ರು. ಅಲ್ಲದೇ ನಂತ್ರ ಮನೆಯಿಂದ ಹೊರ ಕಳುಹಿಸಿದ್ರು. ಶಾಸಕರ ಜೊತೆ ದಕ್ಷಿಣ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕೂಡ ಆಗಮಿಸಿದ್ದರು.
Advertisement
https://www.youtube.com/watch?v=TmFE1kqWa2w