ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ (Loksabha And Vidhanasabha Election) ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡುವ ಮೂಲಕ ಪಂಚರಾಜ್ಯ ಚುನಾವಣೆಗೂ ಮುನ್ನ ಬಿಜೆಪಿ ಮಹಿಳಾ ಮತದಾರರನ್ನು ಸಳೆಯುವ ಪ್ರಯತ್ನ ಮಾಡಿದೆ. ಈ ಪ್ರಯತ್ನ ಯಶಸ್ವಿಯಾಗಲಿದೆಯೇ ಎನ್ನುವ ಅಂಶ ಈ ಬಾರಿ ರಾಜಸ್ಥಾನ ಚುನಾವಣೆಯ ಫಲಿತಾಂಶದಲ್ಲಿ ತಿಳಿದು ಬರಲಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ (Congress) ಮತ್ತು ಬಿಜೆಪಿ ನೇರಾನೇರ ಹೋರಾಟ ನಡೆಸುತ್ತಿದ್ದು, ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ. ಕಾಂಗ್ರೆಸ್ ತನ್ನ ಗ್ಯಾರಂಟಿ ಅಸ್ತ್ರಗಳ ಮೂಲಕ ಮಹಿಳೆಯರನ್ನು ಸೆಳೆಯುವ ಪ್ರಯತ್ನ ಮಾಡಿದರೆ ಬಿಜೆಪಿ ಪ್ರಮುಖ ಮಹಿಳಾ ನಾಯಕರಿಗೆ ಟಿಕೆಟ್ ನೀಡುವ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದೆ.
Advertisement
Advertisement
ಬಿಜೆಪಿ (BJP) ಸಂಸದೆ ದಿಯಾ ಕುಮಾರಿ (Dia Kumari) ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಮೂಲಕ ಮಹಿಳೆಯರಿಗೆ ದೊಡ್ಡ ಸಂದೇಶ ನೀಡಲು ಪ್ರಯತ್ನಿಸಿದೆ. ವಿದ್ಯಾಧರ್ ನಗರ ಕ್ಷೇತ್ರದಿಂದ ದಿಯಾ ಕುಮಾರಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದ್ದು, ಬಿಜೆಪಿಯ ಪ್ರಬಲ ಕ್ಷೇತ್ರವೆಂದು ಪರಿಗಣಿಸಲಾಗಿದೆ. ರಾಜಸ್ಥಾನದಾದ್ಯಂತ ಪ್ರಚಾರಕ್ಕೆ ದಿಯಾ ಕುಮಾರಿ ಮುಂದಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದು ಮಹಿಳೆಯರು ಮತ್ತು ರಜಪೂತರ ಮೇಲೆ ಪರಿಣಾಮ ಬೀರಲಿದೆ. ಇದನ್ನೂ ಓದಿ: ಸಚಿವರಿಂದ ನನಗೆ ಕಿರುಕುಳ – ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣು
Advertisement
Advertisement
ಮಹಿಳೆಯರಿಗೆ ಆದ್ಯತೆ ಯಾಕೆ?: ಕಾಂಗ್ರೆಸ್ ಮತ್ತು ಬಿಜೆಪಿ ಮಹಿಳೆಯರಿಗೆ ಆದ್ಯತೆ ನೀಡಲು ಕಾರಣ ಮಹಿಳಾ ಮತದಾರರ ಪ್ರಮಾಣ, ರಾಜಸ್ಥಾನದಲ್ಲಿ 60 ರಿಂದ 99 ವರ್ಷದೊಳಗಿನ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. 60 ರಿಂದ 69 ವರ್ಷದೊಳಗಿನ ಮತದಾರರಲ್ಲಿ ಪುರುಷ ಮತದಾರರ ಸಂಖ್ಯೆ 2617332 ಇದ್ದರೇ ಮಹಿಳಾ ಮತದಾರರ ಸಂಖ್ಯೆ 2619051 ಇದೆ.
ವಯಸ್ಸು ಹೆಚ್ಚಾದಂತೆ ಮಹಿಳಾ ಮತದಾರರ ಸಂಖ್ಯೆಯೂ ಹೆಚ್ಚುತ್ತಿದೆ. 70 ರಿಂದ 79 ವರ್ಷದೊಳಗಿನ ಪುರುಷ ಮತದಾರರು 1220726 ಮತ್ತು ಮಹಿಳಾ ಮತದಾರರು 1413173 ಇದ್ದಾರೆ. 80 ರಿಂದ 89 ವರ್ಷದೊಳಗಿನ ಪುರುಷ ಮತದಾರರ ಸಂಖ್ಯೆ 373931 ಮತ್ತು ಮಹಿಳಾ ಮತದಾರರ ಸಂಖ್ಯೆ 580011. 90 ರಿಂದ 99 ರ ವಯೋಮಾನದವರಲ್ಲಿ ಮಹಿಳಾ ಮತದಾರರು ಮತ್ತು ಪುರುಷ ಮತದಾರರ ಸಂಖ್ಯೆಯಲ್ಲಿ ದೊಡ್ಡ ವ್ಯತ್ಯಾಸ ಕಂಡುಬರುತ್ತದೆ. ಈ ವಯೋಮಾನದ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಸುಮಾರು 3 ಪಟ್ಟು ಹೆಚ್ಚಿದೆ. 90 ರಿಂದ 99 ವರ್ಷದೊಳಗಿನ ಪುರುಷ ಮತದಾರರ ಸಂಖ್ಯೆ 59 ಸಾವಿರವಾಗಿದ್ದರೆ, ಮಹಿಳಾ ಮತದಾರರ ಸಂಖ್ಯೆ 1 ಲಕ್ಷ 43 ಸಾವಿರಕ್ಕೂ ಹೆಚ್ಚಿದೆ.
ಈ ಹಿನ್ನಲೆ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಈ ವರ್ಷದ ಬಜೆಟ್‍ನಿಂದಲೇ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದರು. ಈ ಬಾರಿ ಅವರ ಪ್ರಚಾರದ ಪೋಸ್ಟರ್‍ಗಳ ಬಣ್ಣವನ್ನು ಮಹಿಳಾ ಥೀಮ್‍ನಲ್ಲಿಯೂ ಗುಲಾಬಿ ಇರಿಸಲಾಗಿದೆ. ಯೋಜನೆಗಳ ಕುರಿತು ಮಾತನಾಡಿದ ಅವರು, ಉಳಿತಾಯ ಪರಿಹಾರ ಹೆಚ್ಚಳ, ಹಣದುಬ್ಬರ ಪರಿಹಾರ, ಸ್ಮಾರ್ಟ್ ಫೋನ್, ವಿದ್ಯುತ್ ಸಿಲಿಂಡರ್, ಉಚಿತ ಪಡಿತರ, ಉಚಿತ ವಿದ್ಯುತ್ ಮುಂತಾದ ಯೋಜನೆಗಳನ್ನು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗುತ್ತಿದೆ. ಸುಮಾರು 1.90 ಕೋಟಿ ಮಹಿಳೆಯರೂ ಈ ಯೋಜನೆಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಬಿಜೆಪಿ ವಿರುದ್ಧದ ಪ್ರಚಾರದಲ್ಲಿ ಕಾಂಗ್ರೆಸ್ ಕೂಡ ಹಣದುಬ್ಬರವನ್ನು ದೊಡ್ಡ ವಿಷಯವನ್ನಾಗಿ ಮಾಡಿದೆ. ಹೀಗಾಗಿ ಈ ಬಾರಿ ಮಹಿಳೆಯರ ಬೆಂಬಲ ಸಿಗಲಿದೆ ಎಂದು ಅವರು ಆಶಿಸಿದ್ದಾರೆ.
Web Stories