– ಈ ಸೋಲನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ
– ಮುಂದಿನ ಚುನಾವಣೆಗೆ ಅತಿಯಾದ ಆತ್ಮವಿಶ್ವಾಸ ಬೇಡ
– ಈ ನಿಟ್ಟಿನಲ್ಲಿ ನಾವು 2018ರ ಚುನಾವಣೆಗೆ ತಯಾರಾಗುತ್ತೇವೆ
ರವೀಶ್ ಎಚ್.ಎಸ್.
ಮೈಸೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಸೋಲಿನ ಬಗ್ಗೆ ರಾಜ್ಯ ಬಿಜೆಪಿ, ಹೈಕಮಾಂಡ್‍ಗೆ ವರದಿ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಎರಡೂ ಕ್ಷೇತ್ರಗಳ ಸೋಲಿನ ಬಗ್ಗೆ ವರದಿಯನ್ನು ರವಾನಿಸಿದ್ದಾರೆ.
Advertisement
ಈ ವರದಿಯ ಸಂಪೂರ್ಣ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಇದರಲ್ಲಿ ಕ್ಷೇತ್ರದ ಎಲ್ಲಾ ಮಾಹಿತಿಗಳನ್ನು ನೀಡಿದ್ದಾರೆ.
Advertisement
ವರದಿಯಲ್ಲೇನಿದೆ..?: ನಾವು ಸೋತಿದ್ದೇವೆ, ಆದ್ರೆ ನಮ್ಮ ಶೇಕಡಾವಾರು ಮತ ಗಳಿಕೆ ಹೆಚ್ಚಾಗಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಎರಡೂ ಕ್ಷೇತ್ರಗಳು ನಮ್ಮದ್ದಲ್ಲ. ಇವು ಕಾಂಗ್ರೆಸ್ ಭದ್ರಕೋಟೆ ಕ್ಷೇತ್ರಗಳು. ರಾಜ್ಯದಲ್ಲಿ ಸರ್ಕಾರವೂ ಕಾಂಗ್ರೆಸ್‍ನವರದ್ದೇ ಇತ್ತು. ಹಾಗಾಗಿ ನಾವು ಸೋತಿದ್ದೇವೆ. ಆದರೆ, ನಂಜನಗೂಡಿನಲ್ಲಿ ಶೇಕಡಾವಾರು ಮತ ಹೆಚ್ಚಾಗಿದೆ. 2013ರಲ್ಲಿ ಬಿಜೆಪಿ ಶೇಕಡಾವಾರು ಮತ 25.05% ಇತ್ತು, ಈಗ ಬಿಜೆಪಿ 41.50 ಶೇಕಡಾವಾರು ಮತ ಪಡೆದಿದೆ.
Advertisement
ಗುಂಡ್ಲುಪೇಟೆಯಲ್ಲೂ ಬಿಜೆಪಿಗೆ ಶೇಕಡಾವಾರು ಮತ ಹೆಚ್ಚಾಗಿದೆ. 2013ರಲ್ಲಿ ಕೆಜೆಪಿ+ಬಿಜೆಪಿ ಶೇಕಡಾವಾರು ಮತ 42.05% ಇತ್ತು, ಈಗ ಬಿಜೆಪಿ ಶೇಕಡಾವಾರು 45.37% ಮತ ಪಡೆದಿದೆ. ಹಾಗಾಗಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಸಾಧನೆ ಉತ್ತಮವಾಗಿದೆ. ಕರ್ನಾಟಕದ ಹಳೇ ಮೈಸೂರು ಭಾಗದಲ್ಲಿ ನಮ್ಮ ಪಕ್ಷ ಪ್ರಬಲವಾಗ್ತಿದೆ. ಹಾಗಾಗಿ ಈ ಎರಡು ಕ್ಷೇತ್ರಗಳ ಸೋಲಿನಿಂದ ಬಿಜೆಪಿಗೆ ಯಾವುದೇ ನಷ್ಟ ಆಗಿಲ್ಲ.
Advertisement
ರಾಜ್ಯ ಬಿಜೆಪಿಯ ಎಲ್ಲ ನಾಯಕರ ಸಂಘಟಿತ ಪ್ರಚಾರ ಕೂಡ ಈ ಚುನಾವಣೆಯಲ್ಲಿತ್ತು. ಈ ಸೋಲನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ. ಆದ್ರೆ ಮುಂದಿನ ಚುನಾವಣೆಗೆ ಅತಿಯಾದ ಆತ್ಮವಿಶ್ವಾಸ ಬೇಡ ಎಂಬ ಸಂದೇಶ ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ನಾವು 2018ರ ಚುನಾವಣೆಗೆ ತಯಾರಾಗುತ್ತೇವೆ ಎಂದು ಬಿಎಸ್‍ವೈ ಅಮಿತ್ ಶಾ ಅವರಿಗೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಗುಂಡ್ಲುಪೇಟೆಯಲ್ಲಿ ಈ ಬಾರಿ ಯಾರಿಗೆ ಎಷ್ಟು ವೋಟ್ ಬಿದ್ದಿದೆ? ಕಳೆದ ಬಾರಿ ಯಾರಿಗೆ ಎಷ್ಟು ಬಿದ್ದಿತ್ತು? https://t.co/2tIQA2D6pw #gundlupet #byelection pic.twitter.com/4Io9FeBKTf
— PublicTV (@publictvnews) April 13, 2017
ಗೆದ್ದದ್ದು ಕಾಂಗ್ರೆಸ್ಸಲ್ಲ, ಹಣದ ಹೊಳೆ: ಜಗದೀಶ್ ಶೆಟ್ಟರ್ ವಿಶ್ಲೇಷಣೆhttps://t.co/anZGyzHxfc#Karnataka #bypolls #Congress #JagadishShettar #BJP pic.twitter.com/m0xC32ryn9
— PublicTV (@publictvnews) April 13, 2017
ನಾವು ಅಭ್ಯರ್ಥಿಗಳನ್ನು ಹಾಕದೇ ಇರುವುದು ಕಾಂಗ್ರೆಸ್‍ಗೆ ವರವಾಗಿದೆ: ಹೆಚ್‍ಡಿಕೆ https://t.co/TpHqikNoaf @hd_kumaraswamy #Gundlupete #Nanjanagud pic.twitter.com/MfNfRQmN6M
— PublicTV (@publictvnews) April 13, 2017
ಉಪ ಚುನಾವಣೆಯಲ್ಲಿ ಗೆದ್ದ ತಕ್ಷಣ ರಾಜ್ಯದ ಜನ ಕಾಂಗ್ರೆಸ್ ಪರ ಇದ್ದಾರೆ ಅಂತೇನಲ್ಲ: ಬಿಎಸ್‍ವೈhttps://t.co/xARxMbokWO#Bengaluru @BSYBJP @KPCCofficial pic.twitter.com/gGYYKkv1Ld
— PublicTV (@publictvnews) April 13, 2017
ಕಾಂಗ್ರೆಸ್ ಬಿಟ್ಟು ಹೋದವರಿಗೆ ಈ ಗೆಲುವು ತಕ್ಕ ಉತ್ತರ ನೀಡಿದೆ: ಪರಮೇಶ್ವರ್ https://t.co/BHERYbYL1q#Nanjangud #Gundlupet #congress @KPCCofficial pic.twitter.com/ojcjaY9Sg0
— PublicTV (@publictvnews) April 13, 2017