– ದಕ್ಷಿಣ ಭಾರತವನ್ನು ಕೇಂದ್ರ ಸರ್ಕಾರ ಬೇರೆ ರೀತಿ ನೋಡುತ್ತಿದೆ
– ಮೋದಿ ಸರ್ಕಾರದಿಂದ 43 ಲಕ್ಷ ಕೋಟಿ ಲೂಟಿ
ಬೆಂಗಳೂರು: ದಕ್ಷಿಣ ಭಾರತವನ್ನು(South India) ಕೇಂದ್ರ ಸರ್ಕಾರ ಬೇರೆ ರೀತಿ ನೋಡುತ್ತಿದೆ. ಭಾರತಕ್ಕೆ ಬಂದ ತೈಲ ಟ್ಯಾಂಕರ್ ಗುಜರಾತಿಗೆ(Gujarat) ಯಾಕೆ ಹೋಗಬೇಕಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರಶ್ನಿಸಿ ಸಿಟ್ಟು ಹೊರಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಜರಾತಿಗೆ ಯಾಕೆ ತೈಲ ಟ್ಯಾಂಕರ್ ಹೋಗಿದ್ದು? ಕರ್ನಾಟಕ, ಕೇರಳ, ತಮಿಳುನಾಡಿಗೆ ನೀಡಬೇಕಿತ್ತಲ್ಲ. ದಕ್ಷಿಣ ಭಾರತದಲ್ಲಿ ಅವರ ಸರ್ಕಾರ ಇಲ್ಲ ಎಂಬ ಕಾರಣಕ್ಕೆ ಉತ್ತರ ಭಾರತಕ್ಕೆ (North India) ನೀಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೇಂದ್ರದ ನಿರ್ಧಾರದಿಂದ ಇಂದು ಒಂದೇ ದಿನ ರಿಲಯನ್ಸ್ ಮಾರುಕಟ್ಟೆ ಮೌಲ್ಯ 87 ಸಾವಿರ ಕೋಟಿ ಕುಸಿತ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನ ದಿನೇ ದಿನೇ ದುಸ್ತರವಾಗುತ್ತಿದ್ದರೂ, ಅದರ ಬಗ್ಗೆ ಕಿಂಚಿತ್ತೂ ಯೋಚಿಸದೆ ಅಧಿಕಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವು ಜನತೆಗೆ ದ್ರೋಹ ಎಸಗುತ್ತಿದೆ. ಈ ಕುರಿತು ಇಂದು ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಮಾನ್ಯ… https://t.co/eQ76AYfZH3
— DK Shivakumar (@DKShivakumar) March 27, 2026
ಕೇಂದ್ರ ಸರ್ಕಾರ ದಕ್ಷಿಣ ಭಾರತಕ್ಕೆ ತೈಲ ಟ್ಯಾಂಕರ್ ಸಿಲಿಂಡರ್ ಪೂರೈಕೆ ನೀಡಬೇಕಿತ್ತು. ನಾವಿಲ್ಲಿ ಹೊಟೇಲುಗಳಲ್ಲಿ ಅಡುಗೆ ಮನೆಗಳಲ್ಲಿ ಒಲೆ ಹೊತ್ತಿಸುವುದಕ್ಕೂ ಒದ್ದಾಡುತ್ತಿದ್ದೇವೆ. ದಕ್ಷಿಣ ಭಾರತವನ್ನು ಬೇರೆ ರೀತಿ ನೋಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭಾರತ 40 ದೇಶಗಳಿಂದ ಹೇಗೆ ತೈಲ ಆಮದು ಮಾಡಿಕೊಳ್ತಿದೆ? ಎಲ್ಲಿ ಸಂಗ್ರಹಿಸುತ್ತಿದೆ?
ಸುಂಕ ಕಡಿಮೆ ಮಾಡಿದ್ದರಿಂದ ರಾಜ್ಯದ ಜನತೆಗೆ ನಯಾ ಪೈಸೆಯೂ ಲಾಭ ಇಲ್ಲ. ಗ್ರಾಹಕರಿಂದ ಸಂಗ್ರಹಿಸಿದ್ದ ಹಣವನ್ನು ಕಂಪನಿಗಳಿಗೆ ಸರ್ಕಾರ ನೀಡುತ್ತಿದೆ ಎಂದು ಕಿಡಿಕಾರಿದರು.

