ವಾಷಿಂಗ್ಟನ್: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ವಿರುದ್ಧ ಅಮೆರಿಕ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೂ ಅಮೆರಿಕ ಹಲವಾರ ಆಪಾದನೆಗಳನ್ನು ಹೊರಿಸಿದೆ. ಈಗ ಅಮೆರಿಕ, ಪುಟಿನ್ ಅವರ ಇಬ್ಬರು ಹೆಣ್ಣುಮಕ್ಕಳನ್ನು ಗುರಿಯಾಗಿಸಿ ನಿರ್ಬಂಧಗಳನ್ನು ಹೇರಿದೆ.
ಪುಟಿನ್ ಅವರ ಮಗಳು ಕ್ಯಾಥರಿನಾ ವ್ಲಾಡಿಮಿರೊವ್ನಾ ಟಿಖೋನೊವಾ ಅವರು ಟೆಕ್ ಎಕ್ಸಿಕ್ಯೂಟಿವ್ ಆಗಿದ್ದಾರೆ. ರಷ್ಯಾದ ಸರ್ಕಾರ ಮತ್ತು ಅದರ ರಕ್ಷಣಾ ಉದ್ಯಮವನ್ನು ಬೆಂಬಲಿಸುತ್ತಾರೆ ಎಂಬ ಕಾರಣಕ್ಕೆ ಅವರ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದನ್ನೂ ಓದಿ: ಉಕ್ರೇನ್ ಯುದ್ಧದ ನಡುವೆಯೇ ಮುರಿದು ಬಿತ್ತು ಪುಟಿನ್ ಮಗಳ ಮದುವೆ!
Advertisement
Advertisement
ಪುಟಿನ್ ಅವರ ಇನ್ನೊಬ್ಬ ಮಗಳು ಮಾರಿಯಾ ವ್ಲಾಡಿಮಿರೊವ್ನಾ ವೊರೊಂಟ್ಸೊವಾ ಅವರು ಜೆನೆಟಿಕ್ಸ್ ಸಂಶೋಧನೆಗೆ ಕ್ರೆಮ್ಲಿನ್‌ನಿಂದ ಶತಕೋಟಿ ಡಾಲರ್‌ಗಳನ್ನು ಪಡೆದ ಸರ್ಕಾರಿ-ಹಣಕಾಸಿನ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ಅಮೆರಿಕ ತಿಳಿಸಿದೆ.
Advertisement
ಪುಟಿನ್ ಮತ್ತು ಅವರ ಅನೇಕ ಆಪ್ತರು ತಮ್ಮ ಸಂಪತ್ತನ್ನು ಮರೆಮಾಚಿದ್ದಾರೆ. ಪುಟಿನ್ ಅವರ ಅನೇಕ ಆಸ್ತಿಗಳನ್ನು ಕುಟುಂಬ ಸದಸ್ಯರೊಂದಿಗೆ ಮರೆಮಾಚಲಾಗಿದೆ. ಅದಕ್ಕಾಗಿಯೇ ನಾವು ಅವರನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ವ್ಲಾಡಿಮಿರ್ ಪುಟಿನ್ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?
Advertisement
29 ವರ್ಷದ ಕ್ಯಾಥರಿನಾ, ಅಧ್ಯಕ್ಷ ಪುಟಿನ್ ಅವರ ದೀರ್ಘಕಾಲದ ಸ್ನೇಹಿತ ನಿಕೊಲಾಯ್ ಶಮಾಲೋವ್ ಅವರ ಮಗ ಕಿರಿಲ್ ಶಮಾಲೋವ್ ಅವರ ಸಂಗಾತಿಯಾಗಿದ್ದಾರೆ. ಶ್ಯಾಮಲೊವ್ ಸೀನಿಯರ್ ಬ್ಯಾಂಕ್ ರೊಸ್ಸಿಯಾದಲ್ಲಿ ಇವರು ಷೇರುದಾರರಾಗಿದ್ದಾರೆ. ರಷ್ಯಾದ ಗಣ್ಯರ ವೈಯಕ್ತಿಕ ಬ್ಯಾಂಕ್ ಇದಾಗಿದೆ ಎಂದು ಅಮೆರಿಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.