ಚೆನ್ನೈ: ಇಲ್ಲಿನ ಚೆಪಾಕ್ ಮೈದಾನದಲ್ಲಿ ಶುಕ್ರವಾರ ನಡೆದ ಸಿಎಸ್‌ಕೆ vs ಕೆಕೆಆರ್ ನಡುವಿನ ಪಂದ್ಯದಲ್ಲಿ ಕ್ಯಾಪ್ಟನ್ ಎಂ.ಎಸ್ ಧೋನಿ (MS Dhoni) ಅವರ ಎಲ್‌ಬಿಡ್‌ಬ್ಲ್ಯೂ ಔಟ್ (LBW Out) ತೀರ್ಪು ಈಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಪರ-ವಿರೋಧ ಚರ್ಚೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಗಳೂ ಕೇಳಿಬಂದಿವೆ.
ಹೌದು. ಕೋಲ್ಕತ್ತಾ ನೈಟ್‌ರೈಡರ್ಸ್ (KKR) ವಿರುದ್ಧ ಶುಕ್ರವಾರ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಚೆನ್ನೈ ಕೆಡ್ಡ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿತು. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ತವರು ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ಸೋಲು ಹಾಗೂ ಸತತ 5ನೇ ಸೋಲು ಅನುಭವಿಸಿದ ಕೆಟ್ಟ ದಾಖಲೆಗೆ ಸಿಎಸ್‌ಕೆ ಪಾತ್ರವಾಯಿತು. ಆದ್ರೆ ಈ ಪಂದ್ಯದಲ್ಲಿ ಎಂ.ಎಸ್ ಧೋನಿ ಅವರ ಎಲ್‌ಬಿಡಬ್ಲ್ಯೂ ಔಟ್ ತೀರ್ಪು ಈಗ ವಿವಾದ ಎಬ್ಬಿಸಿದೆ.
🚨 CSK LOSE 5 CONSECUTIVE MATCHES FOR THE FIRST TIME IN IPL HISTORY. 🚨
– KKR chase down 104 in just 10.1 overs. pic.twitter.com/t6gb3jVMGj
— Mufaddal Vohra (@mufaddal_vohra) April 11, 2025
ಹೌದು, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಧೋನಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದರು. ಸುನೀಲ್ ನರೈನ್ ಅವರ ಎಸೆತದಲ್ಲಿ ಎಲ್‌ಬಿಡಬ್ಲೂ ವಿಕೆಟ್ ಒಪ್ಪಿಸಿದರು. ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಧೋನಿ ತಕ್ಷಣವೇ 3ನೇ ಅಂಪೈರ್ ರಿವ್ಯೂ ಪಡೆದುಕೊಂಡರು. ಅಲ್ಟ್ರಾಎಡ್ಜ್‌ನಲ್ಲಿ ಸಣ್ಣ ಸ್ಪೈಕ್‌ಗಳು ಕಂಡುಬಂದರೂ, 3ನೇ ಅಂಪೈರ್ ಔಟ್ (Third Umpire) ಎಂದೇ ತೀರ್ಪು ನೀಡಿದರು.
ಅಲ್ಟ್ರಾ ಎಡ್ಜ್‌ನಲ್ಲಿ ಕಂಡುಬಂದಂತೆ ಚೆಂಡು ಧೋನಿ ಅವರ ಪ್ಯಾಡ್‌ಗೆ ಬಡಿಯುವುದಕ್ಕೂ ಮುನ್ನ ಕೊಂಚ ಬ್ಯಾಟ್‌ಗೆ ತಗುಲಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಕಾಮೆಂಟೇಟರ್ ಆಕಾಶ್ ಚೋಪ್ರಾ ಸಹ ಎರಡು ಮೂರು ಬಾರಿ ಇದನ್ನ ಹೇಳಿದ್ದರು. ಧೋನಿ ಅವರದ್ದು ನಾಟೌಟ್ ಆಗಿತ್ತು. 3ನೇ ಅಂಪೈರ್ ಈ ಸ್ಟ್ರೈಕ್‌ಗಳನ್ನು ಗುರುತಿಸಿಯೂ ಔಟ್ ಎಂದು ತೀರ್ಪು ನೀಡಿದ್ದು ಹೇಗೆ? ಎಂಬೆಲ್ಲಾ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕೇಳಲಾಗುತ್ತಿದೆ.
ಇನ್ನೂ ಕೆಲವರು ಐಪಿಎಲ್ ಪಂದ್ಯಗಳು ಮೊದಲೇ ಫಿಕ್ಸ್ ಆಗಿರುತ್ತವೆ ಎಂಬುದಕ್ಕೆ ಧೋನಿ ಅವರ ವಿವಾದಾತ್ಮಕ ಔಟ್ ತೀರ್ಪು ಸಾಕ್ಷಿ ಎಂದು ಕೆಲವರು ಟೀಕಿಸಿದ್ರೆ, ಇನ್ನೂ ಕೆಲವರು ಆನ್‌ಫೀಲ್ಡ್ ಮತ್ತು ಟಿವಿ ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.