Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಾಂಗ್ಲಾದೇಶ ಮೇಲಿನ ಸುಂಕ ಶೇ.19ಕ್ಕೆ ಇಳಿಸಿದ ಅಮೆರಿಕ – ಭಾರತಕ್ಕೆ ಆತಂಕ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಬಾಂಗ್ಲಾದೇಶ ಮೇಲಿನ ಸುಂಕ ಶೇ.19ಕ್ಕೆ ಇಳಿಸಿದ ಅಮೆರಿಕ – ಭಾರತಕ್ಕೆ ಆತಂಕ

Latest

ಬಾಂಗ್ಲಾದೇಶ ಮೇಲಿನ ಸುಂಕ ಶೇ.19ಕ್ಕೆ ಇಳಿಸಿದ ಅಮೆರಿಕ – ಭಾರತಕ್ಕೆ ಆತಂಕ

Public TV
Last updated: February 17, 2026 3:45 pm
Public TV
Share
5 Min Read
America Bangladesh Tariff
SHARE

ಭಾರತ-ಬಾಂಗ್ಲಾದೇಶ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಘೋಷಣೆಯಾಗಿದ್ದು, ಢಾಕಾದ ಕೆಲವು ಜವಳಿ ಉಡುಪುಗಳ ಮೇಲೆ ಸುಂಕ ವಿನಾಯಿತಿ ನೀಡುವುದಾಗಿ ಅಮೆರಿಕ ಭರವಸೆ ನೀಡಿದೆ. ಭಾರತದ ಸರಕುಗಳ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಕೆ ಮಾಡಿದ್ದ ಅಮೆರಿಕ, ಇದೀಗ ಬಾಂಗ್ಲದೇಶ ಉತ್ಪನ್ನಗಳ ಮೇಲಿನ ಅಮೆರಿಕದ ʼಪರಸ್ಪರ ಸುಂಕʼವನ್ನು ಶೇ. 20ರಿಂದ ಶೇ. 19ಕ್ಕೆ ಇಳಿಸಿದೆ. ಹಾಗಿದ್ರೆ ಸುಂಕ ಇಳಿಕೆಯಿಂದ ಬಾಂಗ್ಲಾದೇಶಕ್ಕೇನು ಲಾಭ? ಭಾರತದ ಮೇಲೆ ಪರಿಣಾಮವೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ಬಾಂಗ್ಲಾದೇಶಕ್ಕೆ ಅಮೆರಿಕ ಬಂಪರ್:‌
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಳೆದ ವರ್ಷ ಬಾಂಗ್ಲಾದೇಶ ಸರಕುಗಳ ಮೇಲೆ ಶೇ. 37ರಷ್ಟು ಸುಂಕ ವಿಧಿಸಿದ್ದರು. ಆದರೆ ಆಗಸ್ಟ್‌ 2025ರಲ್ಲಿ ಅಂತಿಮವಾಗಿ ಬಾಂಗ್ಲಾದೇಶ ಉತ್ಪನ್ನಗಳ ಸುಂಕ ದರವನ್ನು ಶೇ. 20ಕ್ಕೆ ಇಳಿಸಿದರು. ಇದೀಗ ಈ ಸುಂಕ ದರ ಶೇ. 19ಕ್ಕೆ ಇಳಿಕೆಯಾಗಿದೆ. ಬಾಂಗ್ಲಾದೇಶಕ್ಕೆ ಅಮೆರಿಕ ನೀಡಿದ ವ್ಯಾಪಾರ ಕೊಡುಗೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದ ಬಳಿಕ ಬಾಂಗ್ಲಾದೇಶದ ಮೇಲೆ ಶೇ.19ರಷ್ಟು ಸುಂಕ ವಿಧಿಸಲಾಗಿದ್ದು, ಅಮೆರಿಕದ ವಸ್ತುಗಳಿಂದ ತಯಾರಿಸಿದ ಕೆಲವು ಜವಳಿ ಮತ್ತು ಉಡುಪುಗಳಿಗೆ ಸುಂಕ ವಿನಾಯಿತಿ ನೀಡಲಾಗಿದೆ ಎಂದು ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ತಿಳಿಸಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು​, ಅಮೆರಿಕ ಉತ್ಪಾದಿಸಿದ ಹತ್ತಿ ಮತ್ತು ನಾರು ಬಳಕೆಯಿಂದ ತಯಾರಾದ ಬಾಂಗ್ಲಾದೇಶದ ಜವಳಿ ಮತ್ತು ಉಡುಪು ಸರಕುಗಳಿಗೆ ಶೂನ್ಯ ಸುಂಕ ವಿಧಿಸಲಾಗಿದೆ ಎಂದಿದ್ದಾರೆ. ಕಳೆದ ವರ್ಷದ ಏಪ್ರಿಲ್‌ನಿಂದ ನಡೆಯುತ್ತಿದ್ದ ಒಂಬತ್ತು ತಿಂಗಳ ಮಾತುಕತೆಗಳ ನಂತರ ಈ ಒಪ್ಪಂದಕ್ಕೆ ಬರಲಾಗಿದೆ.

ವಾಷಿಂಗ್ಟನ್‌ನಲ್ಲಿ ವಾಣಿಜ್ಯ ಸಲಹೆಗಾರ ಶೇಖ್ ಬಶೀರ್ ಉದ್ದೀನ್ ಮತ್ತು ಯುಎಸ್ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಜೇಮಿಸನ್ ಗ್ರೀರ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಪರಸ್ಪರ ಸುಂಕ ಕಡಿತವು ನಮ್ಮ ರಫ್ತುದಾರರಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಆದರೆ ಬಾಂಗ್ಲಾದೇಶದ ನಿರ್ದಿಷ್ಟ ಜವಳಿ ಮತ್ತು ಉಡುಪು ರಪ್ತಿನ ಮೇಲೆ ಶೂನ್ಯ ಪ್ರತಿಸುಂಕವು ನಮ್ಮ ಉಡುಪು ವಲಯಕ್ಕೆ ಗಣನೀಯ ಹೆಚ್ಚುವರಿ ಉತ್ತೇಜನವನ್ನು ನೀಡುತ್ತದೆ ಎಂದು ಬಾಂಗ್ಲಾದೇಶದ ಮುಖ್ಯ ಸಮಾಲೋಚಕರಾಗಿದ್ದ ಎನ್‌ಎಸ್ಎ ರೆಹಮಾನ್ ತಿಳಿಸಿದ್ದಾರೆ.

ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕ, ಅಮೆರಿಕ-ಬಾಂಗ್ಲಾದೇಶ ಪರಸ್ಪರ ವ್ಯಾಪಾರ ಒಪ್ಪಂದವು ಅಮೆರಿಕದ ರೈತರು ಮತ್ತು ಉತ್ಪಾದಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಸೋಯಾಬೀನ್ ಮತ್ತು ಜೋಳದಿಂದ ಹಿಡಿದು ನಾಗರಿಕ ವಿಮಾನ ಮತ್ತು ಮೋಟಾರು ವಾಹನಗಳವರೆಗೆ ಅಮೆರಿಕದ ರಫಿನ ಮೇಲೆ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಲಿದೆ ಎಂದು ಹೇಳಿದೆ.

ಒಪ್ಪಂದದಲ್ಲಿ ಹತ್ತಿಯ ಹೊರತಾಗಿ ಅಮೆರಿಕದಿಂದ ಗೋಧಿ, ಸೋಯಾಬೀನ್ ಮತ್ತು ಎಲ್‌ಎನ್‌ಜಿ ಆಮದು ಮಾಡಿಕೊಳ್ಳಲಾವುದು. ಇ-ಕಾಮರ್ಸ್ ಮೇಲೆ ಸುಂಕ ವಿಧಿಸುವುದನ್ನು ತಡೆಯುವುದು, ಅಮೆರಿಕ ಕಡ್ಡಾಯಗೊಳಿಸಿದ ಬೌದ್ಧಿಕ ಆಸ್ತಿ ಹಕ್ಕುಗಳ ಮಾನದಂಡಗಳನ್ನು ಅನುಸರಣೆ ಹಾಗೂ ವಿಶ್ವ ವ್ಯಾಪಾರ ಸಂಸ್ಥೆಯನ್ನು ಸುಧಾರಿಸುವ ಅಮೆರಿಕದ ಪ್ರಸ್ತಾಪಗಳನ್ನು ಬೆಂಬಲಿಸುವ ನಿಬಂಧನೆಗಳನ್ನು ಒಪ್ಪಂದ ಒಳಗೊಂಡಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಪ್ಪಂದದ ಪ್ರಮುಖ ಅಂಶಗಳೇನು?
-ಅಮೆರಿಕದ ನಿಯಮಾವಳಿಗಳಿಗೆ ಅನುಗುಣವಾಗಿರುವ ವಾಹನಗಳು ಮತ್ತು ಅಮೆರಿಕ ಸರ್ಕಾರದಿಂದ ಅನುಮೋದಿಸಲ್ಪಟ್ಟ ಔಷಧಗಳಿಗೆ ಬಾಂಗ್ಲಾದೇಶ ಮಾರುಕಟ್ಟೆ ಮುಕ್ತವಾಗಲಿದೆ.
-ಮುಂದಿನ 15 ವರ್ಷಗಳಲ್ಲಿ ಅಮೆರಿಕದಿಂದ 15 ಶತಕೋಟಿ ಡಾಲರ್ ಮೌಲ್ಯದ ಇಂಧನ ಮತ್ತು 3.5 ಶತಕೋಟಿ ಡಾಲರ್ ಮೌಲ್ಯದ ಕೃಷಿ ಉತ್ಪನ್ನಗಳ ಖರೀದಿಗೆ ಬಾಂಗ್ಲಾ ಮುಂದಾಗಿದೆ.
-ಬಾಂಗ್ಲಾದೇಶವು ಅಮೆರಿಕದ ಬೋಯಿಂಗ್ ಕಂಪನಿಯಿಂದ ವಿಮಾನಗಳನ್ನು ಖರೀದಿಸುವ ಸಾಧ್ಯತೆಯೂ ಇದೆ.

ಬಾಂಗ್ಲಾದೇಶಕ್ಕೇನು ಲಾಭ?
ಈ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಅಮೆರಿಕದ ಹೈನು ಉತ್ಪನ್ನಗಳಾದ ಡೈರಿ, ಗೋಮಾಂಸ ಮತ್ತು ಕುಕ್ಕುಟೋದ್ಯಮ (ಕೋಳಿ ಸಾಕಾಣಿಕೆ) ವಲಯಗಳಿಗೆ ಬಾಂಗ್ಲಾ ತನ್ನ ದೇಶದಲ್ಲಿ ಮುಕ್ತ ಮಾರುಕಟ್ಟೆ ಅವಕಾಶ ನೀಡಿದೆ. ಅಲ್ಲದೆ, ಅಮೆರಿಕದಿಂದ ಹತ್ತಿ ಮತ್ತು ನೂಲನ್ನು ಆಮದು ಮಾಡಿಕೊಂಡು ತಯಾರಿಸಿದ ಬಟ್ಟೆಗಳನ್ನು ಅಮೆರಿಕ್ಕಕೆ ರಫ್ತು ಮಾಡಿದರೆ, ಅಂತಹ ಸರಕುಗಳ ಮೇಲೆ ವಿಧಿಸುವ ಸುಂಕವನ್ನು ಶೂನ್ಯಗೊಳಿಸಿದೆ. ಇದು ಬಾಂಗ್ಲಾದ ಸಿದ್ಧ ಉಡುಪು ಉದ್ಯಮಕ್ಕೆ ದೊಡ್ಡ ವರವಾಗಲಿದೆ.

ಬಾಂಗ್ಲಾದೇಶ ಬ್ಯಾಂಕ್ ಮತ್ತು ರಾಷ್ಟ್ರೀಯ ಕಂದಾಯ ಮಂಡಳಿಯ ಪ್ರಕಾರ, ಬಾಂಗ್ಲಾದೇಶವು 2024ರಲ್ಲಿ ಸುಮಾರು 8.4 ಬಿಲಿಯನ್ ಅಮೆರಿಕನ್‌ ಡಾಲರ್‌ ಮೌಲ್ಯದ ಸರಕುಗಳನ್ನು ಅಮೆರಿಕಕ್ಕೆ ರಫ್ತು ಮಾಡಿತು. ಅಮೆರಿಕದ ಫ್ರೂಟ್ ಆಫ್ ದಿ ಲೂಮ್‌, ಲೆವಿ ಸ್ಟ್ರಾಸ್‌ ಮತ್ತು ವಿಎಫ್ ಕಾರ್ಪ್‌ನಂತಹ ಕಂಪನಿಗಳು,ಬಾಂಗ್ಲಾದೇಶದಿಂದ ಜವಳಿ ಉತ್ಪನ್ನಗಳನ್ನು ಪಡೆಯುತ್ತವೆ.

ಬಾಂಗ್ಲಾದೇಶ ರಫ್ತು ಉತ್ತೇಜನ ಬ್ಯೂರೋ ಪ್ರಕಾರ, ಅಮೆರಿಕ ಬಾಂಗ್ಲಾದೇಶದ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿದೆ. ಬಾಂಗ್ಲಾದೇಶದ ರಫ್ತಿನಲ್ಲಿ ಜವಳಿ ಮತ್ತು ಉಡುಪು ಉತ್ಪಾದನೆಯು ಸುಮಾರು 80% ಇದೆ. 2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದ ಕ್ರಾಂತಿಯಿಂದ ಉದ್ಯಮ ತೀವ್ರ ಹಾನಿಗೊಳಗಾದ ನಂತರ ಈಗ ಪುನರ್ನಿರ್ಮಾಣಗೊಳ್ಳುತ್ತಿದೆ. ಈ ಒಪ್ಪಂದವು ಉದ್ಯಮಕ್ಕೆ ಪುನಶ್ಚೇತನ ನೀಡುವ ನಿರೀಕ್ಷೆಯಿದೆ.

ಬಾಂಗ್ಲಾದೇಶದಲ್ಲಿ ಉತ್ಪಾದನೆಯಾಗುವ ಜವಳಿ ಮತ್ತು ಉಡುಪಿನ ಶೇ. 80ರಷ್ಟು ಹೊರದೇಶಗಳಿಗೆ ರಫ್ತಾಗುತ್ತದೆ. 2024ರಲ್ಲಿ ಭುಗಿಲೆದ್ದ ವಿದ್ಯಾರ್ಥಿ ದಂಗೆಯಲ್ಲಿ ಜವಳಿ ಉದ್ಯಮ ತೀವ್ರವಾಗಿ ಹಾನಿಗೊಳಗಾಗಿತ್ತು. ಇದೀಗ ಉದ್ಯಮ ಪುನಶ್ಚೇತನದ ಹಾದಿ ಹಿಡಿದಿದ್ದು, ಅಮೆರಿಕದ ಸುಂಕ ಇಳಿಕೆ ಮತ್ತಷ್ಟು ಚೈತನ್ಯ ನೀಡಲಿದೆ ಎಂದು ಅಂದಾಜಿಸಲಾಗಿದೆ.

ಭಾರತಕ್ಕೆ ಆತಂಕ:
ಬಾಂಗ್ಲಾ ಜವಳಿ ಉತ್ಪನ್ನಗಳಿಗೆ ಅಮೆರಿಕ ಶೂನ್ಯ ಸುಂಕ ವಿಧಿಸಿರುವ ಕಾರಣ ಭಾರತದ ಉತ್ಪನ್ನಗಳಿಗಿಂತ ಬಾಂಗ್ಲಾದ ಉತ್ಪನ್ನಗಳು ಅಗ್ಗವಾಗಲಿವೆ. ಬಾಂಗ್ಲಾವು ಭಾರತೀಯ ಹತ್ತಿಯ ಅತಿದೊಡ್ಡ ಗ್ರಾಹಕವಾಗಿತ್ತು. ಆದರೆ ಶೂನ್ಯ ಸುಂಕದ ಲಾಭಪಡೆಯಲು ಬಾಂಗ್ಲಾವು ಈಗ ಭಾರತದ ಬದಲು ಅಮೆರಿಕದಿಂದ ಹತ್ತಿ ಆಮದು ಮಾಡಿಕೊಳ್ಳಲು ಮುಂದಾಗಬಹುದು. ಇದು ಭಾರತದ ಹತ್ತಿ ಬೆಳೆಗಾರರು ದೊಡ್ಡ ನಷ್ಟ ಉಂಟುಮಾಡಲಿದೆ. ಭಾರತದ ಸೂರತ್, ಪಾಣಿಪತ್ ಉದ್ಯಮಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಎದುರಿಸಬೇಕಾಗುತ್ತದೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ಅಮೆರಿಕದ ಪರವಾಗಿ ಹೆಚ್ಚು ಒಲವು ತೋರಿದೆ. ಭಾರತ ಮುಂದಿನ ಐದು ವರ್ಷಗಳಲ್ಲಿ 500 ಶತಕೋಟಿ ಡಾಲರ್ ನಷ್ಟು ಖರೀದಿಯ ಭರವಸೆ ನೀಡಿದೆ. ಭಾರತ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹೆಚ್ಚಿನ ವಸ್ತುಗಳ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಿದ್ದರೂ, ಅಮೆರಿಕ ಭಾರತೀಯ ಸರಕುಗಳ ಮೇಲೆ ಶೇ.18ರಷ್ಟು ಸುಂಕವನ್ನು ವಿಧಿಸುತ್ತಲೇ ಇದೆ. ಭಾರತೀಯ ಜವಳಿ ಮೇಲಿನ ಅಮೆರಿಕದ ಸುಂಕವು ಬಾಂಗ್ಲಾದೇಶಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆಯಿದ್ದರೂ, ಹೊಸ ಒಪ್ಪಂದವು ಬಾಂಗ್ಲಾದೇಶಕ್ಕೆ ಸುಂಕ-ರಹಿತ ಅವಕಾಶವನ್ನು ನೀಡುತ್ತದೆ. ಇದು ಭಾರತದ ಹಿಂದಿನ ಸುಂಕದ ಪ್ರಯೋಜನವನ್ನು ತಟಸ್ಥಗೊಳಿಸುವುದಲ್ಲದೆ, ಬಾಂಗ್ಲಾದೇಶಕ್ಕೆ ಹೋಲಿಸಿದರೆ ಭಾರತೀಯ ಜವಳಿ ಕ್ಷೇತ್ರ ರಫ್ತು ವೆಚ್ಚವನ್ನು ಭರಿಸಬೇಕಾಗುತ್ತದೆ.

ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಬಾಂಗ್ಲಾದೇಶಕ್ಕೆ ವಿಸ್ತರಿಸಿದಂತೆಯೇ ಭಾರತವು ಜವಳಿ ಉತ್ಪನ್ನಗಳಿಗೆ ಶೂನ್ಯ ಸುಂಕ ಪ್ರಯೋಜನ ಪಡೆಯುವ ಸಾಧ್ಯತೆಯಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಆದರೆ ಭಾರತ – ಅಮೆರಿಕ ಒಪ್ಪಂದದ ಜಂಟಿ ಹೇಳಿಕೆಯಾಗಲಿ ಅಥವಾ ಶ್ವೇತಭವನ ಫ್ಯಾಕ್ಟ್‌ಶೀಟ್ ಆಗಲಿ ಈ ಷರತ್ತನ್ನ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.

TAGGED:americabangladeshdonald trumpindiaTariffUS-Bangladesh Trade Deal
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories

You Might Also Like

GBA Election
Bengaluru City

ಜಿಬಿಎ ಚುನಾವಣೆಗೆ ಭರ್ಜರಿ ಸಿದ್ಧತೆ – 369 ಕ್ಷೇತಕ್ಕೆ 900 ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

Public TV
By Public TV
10 minutes ago
rahul gandhi
Bengaluru City

ಕರ್ನಾಟಕ ಬಿಜೆಪಿ ವಿರುದ್ಧ 40% ಕಮೀಷನ್‌ ಜಾಹೀರಾತು – ರಾಹುಲ್‌ಗೆ ರಿಲೀಫ್‌, ವಿಚಾರಣೆಯೇ ರದ್ದು

Public TV
By Public TV
8 hours ago
Ramanagar Arrest
Districts

16.8 ಲಕ್ಷ ಮೌಲ್ಯದ 120 ಗ್ರಾಂ ಚಿನ್ನದ ಗಟ್ಟಿ ಕಳ್ಳತನ – ಇಬ್ಬರು ಅರೆಸ್ಟ್

Public TV
By Public TV
9 hours ago
Fire breaks out at bike garage more than 8 bikes burnt Ilkal Bagalkote
Bagalkot

ಬೈಕ್ ಗ್ಯಾರೇಜ್‌ಗೆ ಬೆಂಕಿ- 8ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಭಸ್ಮ

Public TV
By Public TV
9 hours ago
IMRAN KHAN
Cricket

ಕಪಿಲ್, ಸುನಿಲ್ ಗವಾಸ್ಕರ್ ಸೇರಿ 14 ಕ್ರಿಕೆಟ್ ದಿಗ್ಗಜರಿಂದ ಪಾಕ್‌ಗೆ ಪತ್ರ – ಇಮ್ರಾನ್‌ಗೆ ವೈದ್ಯಕೀಯ ಸೇವೆ ನೀಡುವಂತೆ ಮನವಿ

Public TV
By Public TV
10 hours ago
IAF Rafale main
Bengaluru City

ಭಾರತದಲ್ಲೇ ತಯಾರಾಗಲಿದೆ ರಫೇಲ್‌ ಹ್ಯಾಮರ್‌ – ಈ ಕ್ಷಿಪಣಿಯ ವಿಶೇಷತೆ ಏನು?

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?