ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಬಂಧಿಸಲು ತೆರಳಿದಾಗ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಪೊಲೀಸ್ ಅಧಿಕಾರಿಗೆ ಬುದ್ಧಿವಾದ ಹೇಳಿರುವ ವಿಚಾರ ಮೂಲಗಳಿಂದ ಸಿಕ್ಕಿದೆ.
ಚಾಮರಾಜಪೇಟೆಯ ಹಾಯ್ ಬೆಂಗಳೂರು ಕಚೇರಿಯಲ್ಲಿ ಶುಕ್ರವಾರ ರವಿ ಬೆಳಗೆರೆ ಇದ್ದಾರೆ ಎಂದು ತಿಳಿದು ಬೆಳಗ್ಗೆ ಪೊಲೀಸರು ತೆರಳಿದ್ದಾರೆ. ಈ ವೇಳೆ ಬೆಳಗೆರೆ ನಿದ್ರೆ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ( ಇದನ್ನೂ ಓದಿ: ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ: ಬೆಳಗೆರೆ ಪೋಸ್ಟ್ ಸುತ್ತ ಅನುಮಾನದ ಹುತ್ತ )
Advertisement
ಈ ವೇಳೆ ಪೊಲೀಸರೊಂದಿಗೆ ವಿಚಾರಣೆಗೆ ಸರಿಯಾಗಿ ಸ್ಪಂದಿಸದ ಅವರು, ನಾನೇನು ಓಡಿ ಹೋಗುವುದಿಲ್ಲ. ಬಂದು ವಿಚಾರಣೆ ಮಾಡಿ. ಅದೃಷ್ಟ ಚೆನ್ನಾಗಿಲ್ಲ ನೀವು ನನ್ನನ್ನು ಹಿಡಿದುಕೊಂಡಿದ್ದೀರಿ, ಬಂಧಿಸ್ತೀನಿ ಅಂತ ಹೇಳ್ತೀರಿ. ಮೊದಲೇ ನನಗೆ ಹುಷಾರಿಲ್ಲ. ನನ್ನನ್ನು ಬಂಧಿಸಿ ಜಡ್ಜ್ ಮನೆಗೆ ಕರೆದುಕೊಂಡು ಹೋದರೂ ಜಾಮೀನು ಸಿಕ್ಕುತ್ತೆ. ಅನಾರೋಗ್ಯ ಕಾರಣದಿಂದ ಜಾಮೀನು ಕೊಡುತ್ತಾರೆ. ಸುಮ್ನೆ ಯಾಕೆ ರಿಸ್ಕ್ ತಗೆದುಕೊಳ್ಳುತ್ತಿದ್ದೀರಿ. ಕೊಲ್ಲೊದಕ್ಕೆ ಹೇಳಿರಬಹುದು ಕೊಂದಿಲ್ಲ ಅಲ್ವಾ? ಜಾಮೀನಿನ ಮೇಲೆ ವಿಚಾರಣೆ ಮಾಡಿ. ಸುಮ್ನೆ ಹಿಂಸೆ ತಗೋ ಬೇಡಿ. ನನ್ನ ಪಾಡಿಗೆ ನನ್ನ ಬಿಡಿ ಎಂದು ಅಧಿಕಾರಿಗಳಿಗೆ ಬುದ್ಧಿವಾದ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ( ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಬಳಿಕ ಅಂದು ರವಿ ಬೆಳಗೆರೆ ಹೇಳಿದ್ದು ಹೀಗೆ )
Advertisement
( ಇದನ್ನೂ ಓದಿ: ರವಿ ಬೆಳಗೆರೆ ಅಫಿಡವಿಟ್ಟಿನಲ್ಲಿ ಏನಿದೆ? )
Advertisement
Advertisement