ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಇದೀಗ ವೈಯಕ್ತಿಕ ಟ್ವಿಟ್ಟರ್ ಖಾತೆಯನ್ನು ಆರಂಭಿಸಿದ್ದಾರೆ. ನನ್ನ ಅನಿಸಿಕೆ ಅಭಿಪ್ರಾಯಗಳನ್ನು ನಿಮ್ಮೊಂದಿಗೆ ಮತ್ತಷ್ಟು ಆತ್ಮೀಯವಾಗಿ ಹಂಚಿಕೊಳ್ಳುವ ಉದ್ದೇಶದಿಂದ ನನ್ನ ವೈಯಕ್ತಿಕ ಟ್ವಿಟರ್ ಖಾತೆಗೆ ಚಾಲನೆ ನೀಡುತ್ತಿದ್ದೇನೆ ಸಿಎಂ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಸಕ್ರಿಯರಾಗಿರುವ ಎಲ್ಲರಿಗೂ ನನ್ನ ನಮಸ್ಕಾರಗಳು. ನಿಮ್ಮೊಂದಿಗೆ ನನ್ನ ಒಡನಾಟವನ್ನು ಮತ್ತಷ್ಟು ಹೆಚ್ಚಿಸಲು ನಾನು @siddaramaiah ವೈಯಕ್ತಿಕ ಟ್ವಿಟ್ಟರ್ ಖಾತೆಯನ್ನು ಆರಂಭಿಸಿದ್ದೇನೆ. ಮೂಲಕ ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಜೊತೆಜೊತೆಯಾಗಿ ಕೈಜೋಡಿಸೋಣ ಮತ್ತು ರಚನಾತ್ಮಕವಾಗಿ ಸಂವಾದಿಸೋಣ ಎಂದು ಹೇಳಿದ್ದಾರೆ.
Advertisement
ಈ ಕಾರಣಕ್ಕೆ ಖಾತೆ ಆರಂಭ?
@CMofKarnataka ಖಾತೆಯಲ್ಲಿ ಸಿದ್ದರಾಮಯ್ಯನವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋ, ಸರ್ಕಾರದ ಯೋಜನೆಯ ವಿವರಗಳ ಜೊತೆ ಪ್ರತಿಪಕ್ಷಗಳಿಗೆ ಮಾಡಿದ್ದ ಟೀಕೆಗಳು ಪ್ರಕಟವಾಗುತಿತ್ತು. ಮುಖ್ಯಮಂತ್ರಿ ಅವರ ಅಧಿಕೃತ ಖಾತೆಯಿಂದ ಬರುತ್ತಿದ್ದ ಟ್ವೀಟ್ ಗಳಿಗೆ ವಿರೋಧ ವ್ಯಕ್ತವಾಗಿತ್ತು. ಸಾಂವಿಧಾನಿಕ ಹುದ್ದೆ ಏರಿದ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ಹೇಳಲು ಬೇಕಾದರೆ ವೈಯಕ್ತಿಕ ಟ್ವಿಟ್ಟರ್ ಖಾತೆ ಬಳಸಲಿ, @CMofKarnataka ಖಾತೆಯ ಮೂಲಕ ಪ್ರತಿಪಕ್ಷಗಳ ದೂಷಣೆ ಸಲ್ಲದು ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಸಿಎಂ ವೈಯಕ್ತಿಕ ಟ್ವಿಟ್ಟರ್ ಖಾತೆಯನ್ನು ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಮುಖ್ಯಮಂತ್ರಿಗಳೆ ಈ tweeter account ಸರಕಾರದೊ? ಅಥವಾ ಕಾಂಗ್ರೆಸ್ ಪಕ್ಷದ್ದಾ?
— PRAMOD SHET (@shetpramodp) August 2, 2017
Advertisement
ಅಧಿಕೃತ ಮುಖ್ಯಮಂತ್ರಿ ಖಾತೆಯನ್ನು ಕಾಂಗ್ರೆಸ್ ಖಾತೆಯಾಗಿ ದುರ್ಬಳಕೆ ಮಾಡ್ತಾಯಿರುವುದನ್ನ ಮೊದಲು ನಿಲ್ಲಿಸಿ.ನಿಮ್ಮ ಕೊಳ್ಳೆ ಹೊಡೆದ ಹಣವೆಲ್ಲ ಖಜಾನೆ ಸೇರಿತು ಎಂಬ ಹತಾಷವೇ?
— Ramapriya Sampathkumaran???????????? (@ramapriya1989) August 3, 2017
Advertisement
ಆತ್ಮೀಯರೇ, ನನ್ನ ವೈಯಕ್ತಿಕ ಟ್ವಿಟರ್ ಖಾತೆ ಇದೀಗ ನಿಮ್ಮ ಮುಂದೆ ಅನಾವರಣಗೊಂಡಿದೆ. ನಿಮ್ಮ ಮುಂದೆ ಈ ಸಂದರ್ಭದಲ್ಲಿ ನನ್ನ ಭಾವನೆಗಳನ್ನು ಹಂಚಿಕೊಳ್ಳ ಬಯಸುತ್ತೇನೆ: pic.twitter.com/BYndM7FlzV
— Siddaramaiah (@siddaramaiah) August 17, 2017
ರಚನಾತ್ಮಕ ಚರ್ಚೆ, ಚಿಂತನೆಗಳು ಪ್ರಜಾಪ್ರಭುತ್ವದ ಜೀವಾಳ. ಚಿಂತನಶೀಲತೆಯನ್ನು ಉಳಿಸಿ, ಹಸಿ ಸುಳ್ಳುಗಳನ್ನು ಹತ್ತಿಕಿದಾಗ ಮಾತ್ರ ಪ್ರಜಾಪ್ರಭುತ್ವ ಚಲನಶೀಲವಾಗುತ್ತದೆ.
— Siddaramaiah (@siddaramaiah) August 17, 2017
ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಮಾತು-ಕೃತಿ, ನುಡಿ-ನಡೆಯಲ್ಲಿ ಒಮ್ಮತ ಕಾಯ್ದುಕೊಂಡಾಗ ಮಾತ್ರ ನಮ್ಮನ್ನು ಆರಿಸಿ ಕಳುಹಿಸಿದ ಜನತೆ ಹರಸುತ್ತಾರೆ. #ನುಡಿದಂತೆನಡೆಯೋಣ
— Siddaramaiah (@siddaramaiah) August 17, 2017
I invite you all to connect with me here, as I reach out to you today not as your CM, but as Siddaramaiah – a rooted and proud Kannadiga.
— Siddaramaiah (@siddaramaiah) August 17, 2017