ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖುಷಿಯಲಿದ್ದಾಗ ಜಾಲಿಯೋ ಜಾಲಿ. ಅಭಿಮಾನಿಗಳು ಕಾರ್ಯಕರ್ತರ ಮೊಗದಲ್ಲಂತೂ ಹೌದು ಹುಲಿಯಾ ಎಂಬ ಸಂಭ್ರಮ ಇರುತ್ತದೆ. ಆದರೆ ಸಿದ್ದರಾಮಯ್ಯಗೆ ಸಿಟ್ಟು ನೆತ್ತಿಗೇರಿದರೆ ಅಕ್ಕ-ಪಕ್ಕ, ಎದುರಿಗಿದ್ದವರೆಲ್ಲ ಮಾರುದ್ದ ದೂರ ನಿಲ್ಲುತ್ತಾರೆ. ಕೋಪ ಇಳಿಯುವ ತನಕ ಕೈ ಕಟ್ಟಿ ಸುಮ್ಮನೆ ನಿಲ್ಲುತ್ತಾರೆ. ಇವತ್ತು ಕೂಡ ಅದೇ ಸೀನ್ ನಡೆದಿದೆ.
Advertisement
ಇದು ಒಂದು ಬೊಕ್ಕೆ ಕೋಪದ ಕಥೆ. ಅಷ್ಟಕ್ಕೂ ಆ ಬೊಕ್ಕೆ ಕೋಪದ ಕಥೆ ನಡೆದಿದ್ದು ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ. ಸಿದ್ದರಾಮಯ್ಯ ಅವರಿಗೆ ಆ ಒಂದೇ ಒಂದು ಬೊಕ್ಕೆ ಕೋಪ ನೆತ್ತಿಗೇರುವಂತೆ ಮಾಡಿತ್ತು ಅಂದರೆ ನೀವು ನಂಬಲ್ಲ ಅನ್ಸುತ್ತೆ. ಆದರೆ ಅದು ಸತ್ಯ. ಇದನ್ನೂ ಓದಿ: RSS ಬಗ್ಗೆ ಸಿದ್ದರಾಮಯ್ಯಗೆ 1 ಪರ್ಸೆಂಟ್ ಅಷ್ಟೂ ಗೊತ್ತಿಲ್ಲ: ಎಸ್.ಟಿ.ಸೋಮಶೇಖರ್ ತಿರುಗೇಟು
Advertisement
Advertisement
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚನ್ನರಾಯಪಟ್ಟಣ ಪ್ರವಾಸಕ್ಕೆ ತೆರಳುವ ಮುನ್ನ ಸರ್ಕಾರಿ ನಿವಾಸದಲ್ಲಿ ಬೆಂಬಲಿಗರು ಮುತ್ತಿಕೊಂಡಿದ್ದರು. ಆಗ ಚಿತ್ರದುರ್ಗದಿಂದ ಆಗಮಿಸಿದ ಮುಖಂಡನೊಬ್ಬ ಬೊಕ್ಕೆಯನ್ನು ಕೊಟ್ಟಾಗ ಸ್ವೀಕರಿಸಿದ ಸಿದ್ದರಾಮಯ್ಯ ಸುಮ್ಮನಿದ್ದರು. ಆದರೆ ಅದೇ ಬೊಕ್ಕೆಯನ್ನು ಇನ್ನೊಬ್ಬ ಮುಖಂಡ ಎರಡನೇ ಬಾರಿ ಕೊಟ್ಟಾಗಲೂ ಸ್ವೀಕರಿಸಿದ್ದಾರೆ. ಆದರೆ ಮೂರನೇ ಬಾರಿ ಅದೇ ಬೊಕ್ಕೆಯನ್ನು ಇನ್ನೊಬ್ಬ ಮುಖಂಡ ಕೊಡಲು ಹೋದಾಗ ಸಿದ್ದರಾಮಯ್ಯ ಕೋಪ ನೆತ್ತಿಗೇರಿದೆ. ಕೊಟ್ಟದನ್ನೇ ಎಷ್ಟು ಸಲ ಕೊಡುತ್ತೀರಾ.. ಹೋಗಿ ಅತ್ಲಾಗೆ ಅಂತಾ ಗದರಿ ಬೊಕ್ಕೆಯನ್ನು ಬಿಸಾಕಿದ್ದಾರೆ. ಆಗ ಸಿದ್ದರಾಮಯ್ಯ ಕೋಪತಾಪ ಕಂಡ ಬೆಂಬಲಿಗರು ಸೈಲೆಂಟ್ ಆಗಿ ದೂರ ನಿಂತಿದ್ದಾರೆ. ಬಿಸಾಕಿದ ಬೊಕ್ಕೆಯನ್ನು ಮತ್ತೆ ಎತ್ತಿಕೊಂಡ ಸಿದ್ದರಾಮಯ್ಯ ಬೆಂಬಲಿಗ ಕೈ ಕಟ್ಟಿ ನಿಂತು ಸಾರಿ ಕೇಳಿದ್ದಾರೆ. ಬಳಿಕ ಸಿದ್ದರಾಮಯ್ಯ ಕಾರನ್ನು ಹತ್ತಿ ಯಾರನ್ನೂ ಮಾತಾಡಿಸಿದೆ ತೆರಳಿದರು. ಇದನ್ನೂ ಓದಿ: ಬಿಜೆಪಿಗೆ ತಾಕತ್ತಿದ್ದರೆ SDPIನ್ನು ನಿಷೇಧ ಮಾಡಲಿ: ದಿನೇಶ್ ಗುಂಡೂರಾವ್
Advertisement
ಅಂದಹಾಗೆ ಸಿದ್ದರಾಮಯ್ಯ ಒಳ್ಳೆ ಮೂಡ್‍ನಲ್ಲಿ ಇದ್ದರೆ ಎಲ್ಲರಿಗೂ ಅಪರಂಜಿ, ಮೂಡ್ ಸರಿ ಇಲ್ಲದಿದ್ದರೆ ಹತ್ತಿರನೂ ಸುಳಿಯಲ್ಲ ಗುಲಗಂಜಿ. ಈ ಸತ್ಯ ಬಹುತೇಕ ಆಪ್ತರು, ಬೆಂಬಲಿಗರು ಚೆನ್ನಾಗಿ ಗೊತ್ತಿದೆ. ಆ ಕಾರಣಕ್ಕೆ ಸಿದ್ದರಾಮಯ್ಯ ಕೋಪ ನೆತ್ತಿಗೇರಿದಾಗ ಸೈಲೈಂಟ್ ಆಗುತ್ತಾರೆ, ಕೋಪ ಇಳಿದ ಮೇಲೆ ಅಣ್ಣ.. ಬಾಸು ಅಂತಾ ತಳ್ಳಾಡಿಕೊಂಡು ಸಿದ್ದರಾಮಯ್ಯ ಬಳಿ ಹೋಗುತ್ತಾರೆ.