ವಿಜಯಪುರ: ನಮ್ಮ ಗ್ಯಾರಂಟಿಗಳು ನಡೆಯಲ್ಲ ಎಂದರೆ ಮೋದಿ ಯಾಕೆ ಗ್ಯಾರಂಟಿಗಳನ್ನು ಕಾಪಿ ಮಾಡ್ಬೇಕು ಎಂದು ಸಚಿವ ಎಂ.ಬಿ ಪಾಟೀಲ್ (MB Patil) ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕಿಯಿಸಿದ ಅವರು, ನಮ್ಮ ಗ್ಯಾರಂಟಿಗಳನ್ನು ಮೋದಿ ಕಾಪಿ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ನಡೆಯಲ್ಲ ಎಂದರೆ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡುತ್ತಿರೋದು ಯಾಕೆ? ಬಡವರಿಗೆ, ಮಹಿಳೆಯರಿಗೆ ಸಶಕ್ತರನ್ನಾಗಿ ಮಾಡಲು ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಅವುಗಳು ಮುಂದುವರಿಯಲಿವೆ, ಅಭಿವೃದ್ಧಿ ಕೂಡ ಆಗಲಿದೆ ಕಿಡಿಕಾರಿದರು.ಇದನ್ನೂ ಓದಿ:
Advertisement
Advertisement
ಕೆಲ ತಿಂಗಳಿನಿಂದ ಗೃಹಲಕ್ಷ್ಮೀ ಹಣ ಪಾವತಿ ಇಲ್ಲ ಎಂಬ ವಿಚಾರವಾಗಿ, ಈ ಕುರಿತು ಚರ್ಚೆ ಮಾಡಲಾಗುತ್ತದೆ. ಗೃಹಲಕ್ಷ್ಕೀ ಯೋಜನೆಯನ್ನು ಉಳ್ಳವರು ತೆಗೆದುಕೊಳ್ಳಬಾರದು, ಬಡವರಿಗೆ ಹೋಗಬೇಕು. ಬಡವರು ಉಳಿದರೆ ಅವರಿಗೂ ಸಿಗಬೇಕು, ಆದರೆ ಶ್ರೀಮಂತರು, ಉಳ್ಳವರು ತಾವೇ ಬಿಟ್ಟು ಹೋಗಬೇಕು. ಇಲ್ಲವಾದರೆ ಸರ್ಕಾರ ಶ್ರೀಮಂತರನ್ನು ಗೃಹಲಕ್ಷ್ಮೀ ಯೋಜನೆಯಿಂದ ತೆಗೆದುಹಾಕಬೇಕು ಎಂದರು.
Advertisement
ಜಾತಿ ಗಣತಿ ವಿಚಾರವಾಗಿ, ಇದಕ್ಕೆ ಯಾರ ವಿರೋಧ ಇಲ್ಲ. ಯಾವುದೇ ಜಾತಿಗಳ ಜನರಿಗೆ ಅನ್ಯಾಯ ಆಗಬಾರದು. ಯಾರೇ ಇರಲಿ ಅನ್ಯಾಯ ಆಗಬಾರದು. ನಮ್ಮಲ್ಲಿಯೂ ಗೊಂದಲಗಳಿವೆ. ನಮ್ಮ ಉಪ ಪಂಗಡಗಳು ಹಿಂದೂ ಸಾದರ, ಹಿಂದೂ ಬಣಜಿಗ ಹಾಗೂ ಇತರೆ ಕೆಲಜಾತಿಯವರು 2ಎ ಬರೆಯಿಸಿದ್ದಾರೆ. ಜಾತಿಗಣತಿ ಕುರಿತ ನಾವು ರಿಪೋರ್ಟ್ ನೋಡಿಲ್ಲ. ನೋಡಿದ ಬಳಿಕ ಮಾತನಾಡಬೇಕು ಎಂದು ಹೇಳಿದರು.
Advertisement
ರಾಜ್ಯದಲ್ಲಿ ಗುತ್ತಿಗೆದಾರರ ಬಾಕಿ ಹಣ ವಿಚಾರವಾಗಿ ಮಾತನಾಡಿ, ಅನಧಿಕೃತವಾಗಿ ಗುತ್ತಿಗೆ ನೀಡಿದ್ದಾರೆ. ಅದಕ್ಕೆ ಕಾಂಗ್ರೆಸ್ ಕಾರಣ ಅಲ್ಲ. ಬಜೆಟ್ ಇಲ್ಲದೆ ಟೆಂಡರ್ ಕರೆದು ಕಮೀಷನ್ ಹೊಡೆದು ಹೋಗಿದ್ದಾರೆ. ಅವರ ಪಾಪದ ಕೊಡ ನಾವು ಹೊರುತ್ತಿದ್ದೇವೆ. ನೂರು ರೂಪಾಯಿ ಅನುದಾನ ಇದ್ದರೆ, ಸಾವಿರ ರೂಪಾಯಿಯಷ್ಟು ಟೆಂಡರ್ ಕೊಟ್ಟಿದ್ದಾರೆ. ಇನ್ನೂ ಮೆಡಿಕಲ್ ಇಲಾಖೆಯಲ್ಲಿ ದೊಡ್ಡ ಹಗರಣ ಆಗಿದೆ. ಬಜೆಟ್‌ಗಿಂತ ಹೆಚ್ಚಿಗೆ ಕಾಮಗಾರಿ ಕೊಟ್ಟಿದ್ದು ಯಾರು? ಒಂದು ಲಕ್ಷ ಕೋಟಿ ಹಣದ ಕಾಮಗಾರಿ ಟೆಂಡರ್ ಕರೆದಿದ್ದವರು ಯಾರು? ಟೆಂಡರ್ ಕರೆದು ಕಮೀಷನ್ ಪಡೆದು ಹೋಗಿದ್ದಾರೆ. ಅಕ್ರಮವಾಗಿ ಕಾನೂನು ಬಾಹಿರವಾಗಿ ಸಚಿವ ಸಂಪುಟದ ಅನುಮೋದನೆ ಪಡೆಯದೇ ಟೆಂಡರ್ ಕರೆದು ಕಮೀಷನ್ ಪಡೆದಿದ್ದಾರೆಂದು ಆರೋಪಿಸಿ, ಪರೋಕ್ಷವಾಗಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಇದನ್ನೂ ಓದಿ