ಲಕ್ನೋ: ನಾನೊಬ್ಬ ಹಿಂದೂವಾಗಿದ್ದು, ನಾನು ಈದ್ ಹಬ್ಬವನ್ನು ಆಚರಣೆ ಮಾಡುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸಮಾಜವಾದಿ ಪಕ್ಷವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ನಾನೊಬ್ಬ ಅಪ್ಪಟ ಹಿಂದೂ. ಹೀಗಾಗಿ ನಾನು ಯಾಕೆ ಈದ್ ಆಚರಣೆ ಮಾಡಬೇಕು. ನನಗೆ ನನ್ನ ಧರ್ಮದ ಮೇಲೆ ಹೆಮ್ಮೆ, ಗೌರವವಿರುವಾಗ ನಾನ್ಯಾಕೆ ಇತರ ಧರ್ಮದ ಹಬ್ಬಗಳನ್ನು ಆಚರಿಸಲಿ?. ನಾನು ಪ್ರಾರ್ಥನೆ ಮಾಡಲು ಜನಿವಾರಧಾರಿಯೂ ಅಲ್ಲ. ಮಂಡಿಯೂರಿ ಪ್ರಾರ್ಥನೆ ಸಲ್ಲಿಸುವವನೂ ಅಲ್ಲ. ಹಾಗೆಯೇ ಟೋಪಿ ಧರಿಸುವವನೂ(ಮುಸ್ಲಿಂ ಟೋಪಿ) ಅಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!
Advertisement
ನಾನು ಸಮಾಜವಾದಿ ಪಕ್ಷಗಳಂತೆ ಅಲ್ಲ. ಹಿಂದೂ ಧರ್ಮದವನೆಂಬ ಹೆಮ್ಮೆ ನನಗಿದೆ. ಹೀಗಾಗಿ ಈದ್ ಆಚರಣೆ ಮಾಡುವ ಉದ್ದೇಶವಿಲ್ಲ. ಆದರೆ ಈ ಆಚರಣೆಗೆ ನನ್ನ ಸಂಪೂರ್ಣ ಸಹಕಾರ ಇದೆ. ಈ ಶಾಂತಿಯುತವಾಗಿ ಹಬ್ಬದ ಆಚರಣೆ ಸಂಬಂಧವಾಗಿ ಯಾವುದೇ ಅಹಿತರ ಘಟನೆ ನಡೆಯದಂತೆ ರಾಜ್ಯದಲ್ಲಿ ಭದ್ರತೆ ಒದಗಿಸುತ್ತೇನೆ ಎಂದು ಹೇಳಿದ್ದಾರೆ.
Advertisement
ಈ ಹಿಂದೆ ಯೋಗಿ ಅವರು, ಹೋಳಿ ಹಬ್ಬ ವರ್ಷಕ್ಕೊಮ್ಮೆ ಬರುವ ಕಾರಣ ಅದಕ್ಕೆ ಗೌರವ ಕೊಡಬೇಕು. ಆದ್ರೆ ನಮಾಜ್, ಪ್ರಾರ್ಥನೆ ಪ್ರತೀ ದಿನವೂ ನಡೆಯುತ್ತದೆ. ಹೀಗಾಗಿ ನಮಾಜ್ ಅವಧಿಯನ್ನು ಬದಲಿಸಬೇಕೆಂದು ಹೇಳಿದ್ದರು. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು
Advertisement
ಯೋಗಿ ಸೂಚನೆ ಮೇರೆಗೆ ಹೋಳಿ ಪ್ರಯುಕ್ತ ಇಮಾಮ್ ಎ ಈದ್ಗಾ ಮೌಲಾನಾ ಖಲೀದ್ ರಶೀದ್ ಫಿರಂಗಿ ಮಾಹ್ಲಿ ಅವರು ವಿವಿಧ ಮಸೀದಿಗಳ ಇಮಾಮರಿಗೆ, ವಿಶೇಷವಾಗಿ ಕೋಮು ಸೂಕ್ಷ್ಮ ಮಸೀದಿಗಳ ಇಮಾಮಗೆ, ಶುಕ್ರವಾರದ ಪ್ರಾರ್ಥನೆಯನ್ನು ಅರ್ಧಗಂಟೆಯಿಂದ ಒಂದು ಗಂಟೆಯ ವರೆಗೆ ಮುಂದಕ್ಕೆ ಹಾಕುವಂತೆ ಕೇಳಿಕೊಂಡಿದ್ದರು.
Advertisement
ಹಿಂದೆ ಹೋಳಿ ವೇಳೆ ನಮಾಜ್ ಸಮಯದಲ್ಲಿ ಮಸೀದಿಗೆ ಪ್ರಾರ್ಥನೆಗೆ ತೆರಳುತ್ತಿದ್ದ ಮುಸ್ಲಿಮರ ಮೇಲೆ ಬಣ್ಣವನ್ನು ಎರಚುತ್ತಿದ್ದರು. ಇದರಿಂದಾಗಿ ಕೋಮು ಗಲಾಟೆ ಸೃಷ್ಟಿಯಾಗುತಿತ್ತು. ಗಲಾಟೆ ನಡೆಯದೆ ಇರಲು ಕೋಮು ಸೂಕ್ಷ್ಮ ಪ್ರದೇಶದಲ್ಲಿ ನಮಾಜ್ ಸಮಯವನ್ನು ಬದಲಾವಣೆ ಮಾಡಿ ಸಹಕಾರ ನೀಡಿದ್ದರು.