ಮೈಸೂರು: ಒಂದು ವರ್ಷದಲ್ಲಿ 100 ಯೂನಿಟ್ ವಿದ್ಯುತ್ (200 Unit Electricity) ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು. ಇದು ದುರುಪಯೋಗ ಅಲ್ವಾ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದರು.
ಮೈಸೂರಿನ ವರುಣಾ ಕ್ಷೇತ್ರದಲ್ಲಿ (Varuna Constituency) ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ಯಾರಂಟಿ (Congress Guarantee) ಯೋಜನೆಗಳಿಗೆ ಖರ್ಚಾಗುವ ಹಣ 59 ಸಾವಿರ ಕೋಟಿ ರೂ., ಉಳಿದ ಅವಧಿಗೆ ಬೇಕಾಗಿರುವ ಹಣ 41 ಸಾವಿರ ಕೋಟಿ ರೂ. ಪ್ರಧಾನಿ ಮೋದಿ (Narendra Modi) ಅವರು ಗ್ಯಾರಂಟಿ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ, ರಾಜ್ಯ ದಿವಾಳಿಯಾಗುತ್ತೆ ಅಂತಾ ಹೇಳಿದ್ರು. ಬದಲಾಗಿ ಕೈ ಜೋಡಿಸುವ ಮಾತನ್ನಾಡಬೇಕಿತ್ತು ಎಂದು ಹೇಳಿದರು. ಇದನ್ನೂ ಓದಿ: ನನಗೆ ಜೀರೊ ಟ್ರಾಫಿಕ್ ಯಾಕೆ ಕೊಟ್ರಿ – ಪೊಲೀಸ್ ಆಯುಕ್ತರ ಮೇಲೆ ಸಿಎಂ ಗರಂ
Advertisement
Advertisement
ಎಲ್ಲರೂ 200 ಯೂನಿಟ್ ಫ್ರೀ ಕೊಡಿ ಅಂತಿದ್ದಾರೆ. ಯಾರು 190, 180, 70 ಯೂನಿಟ್ ಬಳಸುತ್ತಾರೋ ಅವೆಲ್ಲರಿಗೂ ಉಚಿತ ಇದೆ. ಅದಕ್ಕೆ ಒಂದು ವರ್ಷದ ಆವೇರೆಜ್ ತೆಗೆದುಕೊಳ್ಳಲು ಹೇಳಿದ್ದೇನೆ. ಅದರ ಜೊತೆಗೆ ಶೇ.10 ಹೆಚ್ಚುವರಿ ಫ್ರೀ ಇರುತ್ತೆ. ಒಂದು ವರ್ಷದಲ್ಲಿ 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು? ಇದು ದುರುಪಯೋಗ ಅಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಟೈಗರ್ ವಿನೋದ್ ಪ್ರಭಾಕರ್, ಸೌಂದರ್ಯ ಜಯಮಾಲಾ ಭೇಟಿ; ಬಾಲ್ಯದ ದಿನಗಳಿಗೆ ಜಾರಿದ ಅಣ್ಣ-ತಂಗಿ
Advertisement
Advertisement
ಗೃಹಲಕ್ಷ್ಮಿ ಯೋಜನೆ ಕುರಿತು ಮಾತನಾಡಿ, ಕರ್ನಾಟಕದಲ್ಲಿ ಸುಮಾರು 1 ಕೋಟಿ 28 ಲಕ್ಷ ಕುಟುಂಬಗಳಿದ್ದು, ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡುತ್ತೇವೆ. ಅತ್ತೆ ಯಜಮಾನಿಯಾದ್ರೆ ಅತ್ತೆಗೆ, ಸೊಸೆ ಯಜಮಾನಿಯಾದ್ರೆ ಸೊಸೆಗೆ ಕೊಡುತ್ತೇವೆ. ಅದರಲ್ಲಿ IT, GST ಟ್ಯಾಕ್ಸ್ ನೋಂದಣಿ ಮಾಡಿಸಿರುವವರಿಗೆ ಇಲ್ಲ ಎಂದು ಹೇಳಿದರು.
ಜುಲೈ 1 ರಿಂದ ಅನ್ನಭಾಗ್ಯ ಜಾರಿ: ಜುಲೈ 1 ರಿಂದಲೇ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬರಲಿದೆ ಎಂದ ಸಿಎಂ ರಸಗೊಬ್ಬರದ ದರ ನಾವು ನಿಗದಿ ಮಾಡಲ್ಲ, ಮೋದಿ ಸರ್ಕಾರ ಮಾಡೋದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿಯೂ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಆಗ ಎಲ್ಲಾ ಬೆಲೆಗಳನ್ನ ಕಡಿಮೆ ಮಾಡುತ್ತೇವೆ ಎಂದು ಭರವಸೆ ನೀಡಿದರು.