ಹಿಂದೂಗಳ ಭಾವನೆ ಕೆಣಕಿದಾಗ ಸುಮ್ಮನಿರಬೇಕಾ – ಭಜರಂಗದಳ ಗುಡುಗು

Public TV
2 Min Read
bajrang dal

ಶಿವಮೊಗ್ಗ: ಮುಸ್ಲಿಮರ (Muslims) ಭಾವನೆಗಳಿಗೆ ಧಕ್ಕೆಯಾದಾಗ ಹತ್ಯೆಯಾಗುತ್ತದೆ. ಆದ್ರೆ ಹಿಂದೂಗಳ (Hindu) ಭಾವನೆ ಕೆಣಕಿದಾಗ ಮಾತ್ರ ಸುಮ್ಮನಿರಬೇಕಾ? ಎಂದು ಭಜರಂಗದಳದ (Bajrang Dal) ಪ್ರಾಂತ ಸಂಯೋಜಕ ಕೆ.ಆರ್ ಸುನೀಲ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಭಜರಂಗದಳದ ವತಿಯಿಂದ ಶಿವಮೊಗ್ಗದಲ್ಲಿ (Shivamogga) ಬೃಹತ್ ಶೌರ್ಯಯಾತ್ರೆ ನಡೆಯಿತು. ಈ ವೇಳೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸುನೀಲ್ ಮಾತನಾಡುತ್ತಾ, ಭಜರಂಗದಳ ಲವ್ ಜಿಹಾದ್ (Love Jihad) ಎಂದು ಹೇಳಿದಾಗ ಸಮಾಜ ಅದನ್ನು ಒಪ್ಪಲಿಲ್ಲ. ಪ್ರೀತಿ-ಪ್ರೇಮದ ವಿರೋಧಿ ಎಂದು ದೂರಿತು. ಆದರೀಗ ಹಿಂದೂ ಹೆಣ್ಣು ಮಕ್ಕಳನ್ನ ಬಳಸಿಕೊಂಡು, ಇಸ್ಲಾಮೀಕರಣಕ್ಕೆ ಸಂಚು ಮಾಡಲಾಗುತ್ತಿದೆ. ಕಳೆದ ಕೆಲವೇ ವರ್ಷಗಳಲ್ಲಿ 26 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಹೇಳಿದ್ದಾರೆ.

Love JIhad

ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಆದಾಗ ಹತ್ಯೆಗಳು ನಡೆಯುತ್ತವೆ. ಆದ್ರೆ ಹಿಂದೂಗಳ ಭಾವನೆಯನ್ನ ಕೆಣಕಿದಾಗ ಸುಮ್ಮನಿರಬೇಕಾ? ಮುಂದಿನ ದಿನಗಳಲ್ಲಿ ಜಿಹಾದಿಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ವಿವಾಹಿತ ಮಹಿಳೆಯ ಖಾಸಗಿ ವೀಡಿಯೋ ಇಟ್ಕೊಂಡು ದೈಹಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದ ಕಾಮುಕ ಅರೆಸ್ಟ್

ಅಲ್ಲದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 3 ಲಕ್ಷ ಜನರ ಬಲಿದಾನವಾಗಿದೆ. ಘೋರಿಯಿಂದ (ಬಾಬ್ರಿ ಮಸೀದಿ) (Babri Masjid) ಹಿಡಿದು ಈವರೆಗೂ ಹಿಂದೂ ಧರ್ಮವನ್ನ ಮುಗಿಸುವ ಎಲ್ಲ ಪ್ರಯತ್ನ ನಡೆಯಿತು. ಇಸ್ಲಾಂ ಆಕ್ರಮಣ ಮಾಡಿದ ಕಡೆ ಎಲ್ಲಾ ಸಂಸ್ಕೃತಿ ನಾಶವಾಯಿತು. ಆದ್ರೆ ಭಾರತದಲ್ಲಿ ಹಿಂದೂ ಧರ್ಮ ಉಳಿದುಕೊಂಡಿದೆ. ಶಿವಾಜಿ, ರಾಣಾ ಪ್ರತಾಪ್, ಝಾನ್ಸಿರಾಣಿ ಅವರಂತಹ ವೀರ ಪುರುಷ-ಮಹಿಳೆಯರು ಹಿಂದೂ ಧರ್ಮದ ರಕ್ಷಣೆ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹಿಟ್‌ ಆಂಡ್‌ ರನ್‌ ಕೇಸ್‌ – ಪರಾರಿಯಾಗಿದ್ದ ಟೆಕ್ಕಿ ಬಂಧನ

Ayodhya Ram Mandir Temple

ವಿಹೆಚ್‌ಪಿ (VHP) ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಮುಸ್ಲಿಮರು ಈ ದೇಶವನ್ನ ಮಾತ್ರ ಲೂಟಿ ಮಾಡಲಿಲ್ಲ. ಬಾಬರ್‌ನಂತಹವರು ದೇಶದ ಶ್ರದ್ಧಾ ಕೇಂದ್ರಗಳು, ಸಂಸ್ಕೃತಿಯನ್ನೂ ನಾಶ ಮಾಡುವ ಕೆಲಸ ಮಾಡಿದ್ರು. ದೇಶಕ್ಕಾಗಿ, ಮಂದಿರ, ಸಂಸ್ಕೃತಿ ರಕ್ಷಣೆಗೆ ಸಾವಿರಾರು ತರುಣರು ಪ್ರಾಣ ತೆತ್ತಿದ್ದಾರೆ. ಸ್ವಾತಂತ್ರ್ತ ಬಂದ ಸಂದರ್ಭದಲ್ಲಿ ಅಂದಿನ ರಾಜಕಾರಣಿಗಳು ಸರಿ ಮಾಡುವ ಪ್ರಯತ್ನ ಮಾಡಲಿಲ್ಲ. ನಂತರದ ಕಾಲಘಟ್ಟದಲ್ಲಿ ಭಜರಂಗದಳ ಅಸ್ತಿತ್ವಕ್ಕೆ ಬಂದಿತ್ತು. 1992ರ ಡಿಸೆಂಬರ್ 6 ರಂದು ಕಳಂಕಿತ ಕಟ್ಟಡವನ್ನು (ಬಾಬ್ರಿ ಮಸೀದಿ) ಕೆಡವಲಾಯಿತು. ನಮ್ಮ ಸ್ವಾಭಿಮಾನ, ಶೌರ್ಯವನ್ನು ಮೆರೆದ ಆ ದಿನ ಗೀತ ಜಯಂತಿ ಕೂಡ ಇತ್ತು ಎಂದು ಹೇಳಿದ್ದಾರೆ.

Babri Masjid

ಮತಾಂತರ ತಡೆ, ಗೋ ರಕ್ಷಣೆ, ಸಂಸ್ಕೃತಿ ರಕ್ಷಣೆಗೆ ಭಜರಂಗದಳದ ಕಾರ್ಯಕರ್ತರು ನಿರಂತರವಾಗಿ ಕೆಲಸ ಮಾಡ್ತಿದ್ದಾರೆ. ಈ ನಿಟ್ಟಿನಲ್ಲಿ ಹಿಂದೂ ಧರ್ಮಕ್ಕೆ ದ್ರೋಹ ಮಾಡುವವರಿಗೆ ಎಚ್ಚರಿಕೆ ನೀಡಲು ಶೌರ್ಯ ಯಾತ್ರೆ ಮಾಡಿದ್ದೇವೆ. ಶಿವಮೊಗ್ಗದಂತಹ ನಗರದಲ್ಲೂ ದೇಶ ವಿರೋಧಿ ಕೃತ್ಯ ಮಾಡ್ತಾರೆ. ಅಂತಹ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುವವರು ನಮ್ಮ ನಡುವೆ ಇದ್ದಾರೆ. ಎಲ್ಲಿ ಸ್ಫೋಟ ಆದ್ರೂ ವೋಟಿಗಾಗಿ ಓಲೈಕೆ ಮಾಡ್ತಾರೆ. ಇಂತಹ ದೇಶ ವಿರೋಧಿಗಳಿಗೆಲ್ಲಾ ಭಜರಂಗದಳ ಶೌರ್ಯ ಯಾತ್ರೆಯ ಮೂಲಕ ಎಚ್ಚರಿಕೆ ಕೊಡುತ್ತಿದೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *