ನವದೆಹಲಿ: ಚೀನಾದಿಂದ (China) ಭಾರೀ ಬೇಡಿಕೆಯಿದ್ದರೂ, ಭಾರತಕ್ಕೆ (India) ತೈಲವನ್ನು ಮಾರಾಟ ಮಾಡಲು ರಷ್ಯಾ (Russia) ಒಲವು ತೋರುತ್ತಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ತೈಲವನ್ನು (Crude Oil) ಭಾರತಕ್ಕೆ ಮಾರಾಟ ಮಾಡುತ್ತಿದೆ.
ಭಾರತವು ವರ್ಷದ ಹಿಂದೆ ರಷ್ಯಾದ ತೈಲವನ್ನು ಖರೀದಿಸಿರಲಿಲ್ಲ. ಆದರೆ ಯುಎಸ್ ಮತ್ತು ಯುರೋಪಿಯನ್ ಒಕ್ಕೂಟವು ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಿದ ನಂತರ ಭಾರತಕ್ಕೆ ನಿರ್ಣಾಯಕ ಮಾರುಕಟ್ಟೆಯಾಗಿದೆ. ಫೆಬ್ರವರಿಯಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ ಸುಮಾರು 18 ಲಕ್ಷ ಬ್ಯಾರಲ್ ತೈಲವನ್ನು ಆಮದು ಮಾಡಿಕೊಂಡಿದೆ. ಇದನ್ನೂ ಓದಿ: ಬದಲಾಯಿತು ಲುಕ್ – ತಲೆ ಕೂದಲು, ಗಡ್ಡ ಟ್ರೀಮ್ ಮಾಡಿದ ರಾಹುಲ್ ಗಾಂಧಿ
Advertisement
Advertisement
ಅಂತೆಯೇ ಚೀನಾ ಕೂಡ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಕೋವಿಡ್ ಶೂನ್ಯ ನೀತಿಗಳನ್ನು ಕೈಬಿಟ್ಟ ಚೀನಾ ಈಗ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸಬಹುದು. ಆದರೂ ರಷ್ಯಾಗೆ ಭಾರತೀಯ ಮಾರುಕಟ್ಟೆ ಮೇಲೆ ಹೆಚ್ಚಿನ ಒಲವು ಇದೆ.
Advertisement
ಕಳೆದ ತಿಂಗಳು, ಚೀನಾಕ್ಕೆ ರಷ್ಯಾ ದಿನಕ್ಕೆ 23 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ರಫ್ತು ಮಾಡಿದೆ. ಸಾಂಕ್ರಾಮಿಕ ಸಮಯದಲ್ಲಿ ವಿಧಿಸಲಾಗಿದ್ದ ಪ್ರಯಾಣ ನಿರ್ಬಂಧಗಳು ತೆರವಾಗಿದೆ. ಹೀಗಾಗಿ ಏಷ್ಯಾದ ದೈತ್ಯ (ಚೀನಾ) ತೈಲ ಬೇಡಿಕೆಯು ಈ ವರ್ಷದಲ್ಲಿ ದಿನಕ್ಕೆ ಸುಮಾರು 9,00,000 ಬ್ಯಾರೆಲ್‌ಗಳಷ್ಟು ಹೆಚ್ಚಾಗಬಹುದು. ಇದನ್ನೂ ಓದಿ: ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ರಾಜೀನಾಮೆ – ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಮಂತ್ರಿ ಸ್ಥಾನ?
Advertisement
ಭಾರತದ ಮಾರುಕಟ್ಟೆ ಮೇಲೆ ರಷ್ಯಾಗೆ ಒಲವೇಕೆ?
ಭಾರತಕ್ಕೆ ತೈಲ ರಫ್ತು ರಷ್ಯಾಗೆ ಹೆಚ್ಚು ಲಾಭದಾಯಕವಾಗಿದೆ. ರಷ್ಯಾದ ಪಶ್ಚಿಮ ಬಂದರುಗಳಿಂದ ಭಾರತವನ್ನು ತಲುಪಲು ಟ್ಯಾಂಕರ್ ಸರಾಸರಿ 35 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಚೀನಾಕ್ಕೆ 40 ರಿಂದ 45 ದಿನಗಳು ಬೇಕಾಗುತ್ತದೆ ಹೀಗಾಗಿ ಚೀನಾದ ಬೇಡಿಕೆಯಲ್ಲಿ ಹೆಚ್ಚಳ ಕಂಡರೂ ಭಾರತಕ್ಕೆ ರಷ್ಯಾ ಎಷ್ಟು ಸಾಧ್ಯವೋ ಅಷ್ಟು ತೈಲ ಮಾರಾಟವನ್ನು ಮುಂದುವರಿಸಲಿದೆ.
ಚೀನಾ ತಮ್ಮದೇ ಆದ ಶಿಪ್ಪಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಚೀನಾ ರಿಫೈನರಿಗಳು ರಷ್ಯಾದಿಂದ ತೈಲ ಆಮದು ಮಾಡಿಕೊಂಡು, ಸಂಸ್ಕರಿಸಿ ಮಾರಾಟ ಮಾಡುತ್ತದೆ. ಇದರಿಂದ ರಷ್ಯಾ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುವುದಿಲ್ಲ. ಆದರೆ ಭಾರತದಲ್ಲಿ ತೈಲ ಸಂಸ್ಕರಣಾ ಕಂಪನಿಗಳು ಖಾಸಗಿಯದ್ದಾಗಿವೆ. ರಷ್ಯಾ ಹೆಚ್ಚಿನ ಆದಾಯ ಗಳಿಸಲು ಭಾರತದ ಮಾರುಕಟ್ಟೆ ಸಹಕಾರಿಯಾಗಿದೆ.