ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಆಟ ಆಡುವ 11 ರ ಬಳಗದಲ್ಲಿ ಸ್ಥಾನ ಪಡೆದಿಲ್ಲ.
ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ತಂಡ ಇಂದು ಮೂರು ಬದಲಾವಣೆಯೊಂದಿಗೆ ಕಣಕ್ಕೆ ಇಳಿದಿದೆ. ಇಂಗ್ಲೆಂಡ್ ಆಲ್‌ರೌಂಡರ್ ವಿಲ್ ಜಾಕ್ಸ್ ಮತ್ತು ಕೇರಳದ ಸ್ಪಿನ್ ಬೌಲರ್ ವಿಘ್ನೇಶ್ ಪುತೂರ್ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಿಂದ ಬ್ಯಾನ್ ಮಾಡಿ – ರಿಯಾನ್ ಪರಾಗ್ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
#MI‘s Opening Bowlers 🆚 #KKR‘s Opening Batters
And it’s the @mipaltan‘s bowlers who win the opening act 💙#KKR 25/2 after 3 overs.
Updates ▶ https://t.co/iEwchzEpDk#TATAIPL | #MIvKKR pic.twitter.com/eoundLJeE5
— IndianPremierLeague (@IPL) March 31, 2025
ವಿಲ್ ಜಾಕ್ಸ್ ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀರ್ ರೆಹಮಾನ್ ಜಾಗದಲ್ಲಿ ಸ್ಥಾನ ಪಡೆದರೆ ಜಾರ್ಖಂಡ್‌ನ ರಾಬಿನ್ ಮಿಂಜ್ ಜಾಗದಲ್ಲಿ ವಿಘ್ನೇಶ್‌ಗೆ ಸ್ಥಾನ ಸಿಕ್ಕಿದೆ.
ಪಂಜಾಬ್‌ನ ಎಡಗೈ ಸ್ಪಿನ್ನರ್ ಅಶ್ವನಿ ಕುಮಾರ್ ಮೊದಲ ಬಾರಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದು ಆಂಧ್ರದ ವೇಗದ ಬೌಲರ್ ಸತ್ಯನಾರಾಯಣ ರಾಜು ಜಾಗ ತುಂಬಿದ್ದಾರೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್ ಮಾಡಿದವರಿಗೆ ಚಳಿ ಬಿಡಿಸಿದ ನಟಿ
ಅಚ್ಚರಿ ಏನೆಂದರೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರನ್ನು ತಂಡದ 11 ರ ಬಳಗದಲ್ಲಿ ಆಯ್ಕೆ ಮಾಡಿಲ್ಲ. ಕೋಲ್ಕತ್ತಾ ಪರ ರೋಹಿತ್ 1070 ರನ್ ಹೊಡೆದಿದ್ದಾರೆ. ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯದಿದ್ದರೂ ರೋಹಿತ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿದಿದ್ದಾರೆ.