ಮುಂಬೈ: ಪ್ರತಿಷ್ಠಿತ ಐಪಿಎಲ್ (IPL) ಟೂರ್ನಿ 16 ಆವೃತ್ತಿ ಕಳೆದರೂ ಆರ್‌ಸಿಬಿ (RCB) ಒಂದು ಬಾರಿಯೂ ಐಪಿಎಲ್ ಟ್ರೋಫಿ ಗೆಲ್ಲಲು ಏಕೆ ಸಾಧ್ಯವಾಗಿಲ್ಲ? ಎನ್ನುವ ಪ್ರಶ್ನೆಗೆ ಆರ್‌ಸಿಬಿ ತಂಡದ ಮಾಜಿ ಆಟಗಾರ ಯಜುವೇಂದ್ರ ಚಾಹಲ್ (Yuzvendra Chahal) ತಂಡ ಕೈಬಿಟ್ಟ ನಂತರ ಪ್ರಾಮಾಣಿಕ ಉತ್ತರ ಕೊಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಚಾಹಲ್, ಆರ್‌ಸಿಬಿ ಬಹುತೇಕ ಸೀಸನ್‌ಗಳಲ್ಲಿ ಅತ್ಯುತ್ತಮ ತಂಡವಾಗಿತ್ತು. ಆದರೂ ಒಮ್ಮೆಯೂ ಟ್ರೋಫಿ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ. ಕಳೆದ 8 ವರ್ಷಗಳಿಂದ ನಾನೂ ಆ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಲ್ಕರಾಝ್‌ಗೆ ಚೊಚ್ಚಲ ವಿಂಬಲ್ಡನ್ ಕಿರೀಟ – ಸೋಲಿಸಿದ ಆಟಗಾರನನ್ನೇ ಬಾಯ್ತುಂಬ ಹೊಗಳಿದ ದಿಗ್ಗಜ ಜೊಕೊವಿಕ್!
Advertisement
Advertisement
2021ರಲ್ಲಿ ಆವೃತ್ತಿಯ ನಂತರ ಆರ್‌ಸಿಬಿ ತಂಡದಿಂದ ಚಾಹಲ್ ಅವರನ್ನ ಕೈಬಿಡಲಾಯಿತು. ಈ ಕುರಿತು ಸಂದರ್ಶನದಲ್ಲಿ ಮಾತನಾಡುವಾಗ 2016ರ ಆವೃತ್ತಿ ಐಪಿಎಲ್ ಟೂರ್ನಿಯನ್ನ ನೆನಪಿಸಿಕೊಂಡಿದ್ದಾರೆ. ಅಂದು ಆರ್‌ಸಿಬಿ ತಂಡ ಸನ್ ರೈಸರ್ಸ್ ಹೈದರಾಬಾದ್‌ನೊಂದಿಗೆ ಫೈನಲ್‌ನಲ್ಲಿ ಎದುರಾಗಿತ್ತು. ಗೆಲ್ಲುವ ಸನಿಹಕ್ಕೆ ಬಂದು 8 ರನ್‌ಗಳಿಂದ ಸೋತು ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಆರ್‌ಸಿಬಿ ಕ್ರಿಸ್‌ಗೇಲ್, ಕೆ.ಎಲ್ ರಾಹುಲ್, ಎ.ಬಿ.ಡಿ ವಿಲಿಯರ್ಸ್, ಶೇನ್ ವಾಟ್ಸನ್‌ರಂತಹ ಬಲಿಷ್ಠ ಬ್ಯಾಟಿಂಗ್ ಪಡೆಯನ್ನ ಹೊಂದಿತ್ತು. ನಾನೂ ಕೂಡ ಆ ಸೀಸನ್‌ನಲ್ಲಿ ಮೊದಲ ಬಾರಿಗೆ ಪರ್ಪಲ್ ಕ್ಯಾಪ್ ಗಳಿಸಿದ್ದೆ. ಆದರೂ ಟ್ರೋಫಿ ಗೆಲ್ಲೋದಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
Advertisement
Advertisement
ಲೀಗ್‌ನಲ್ಲಿ, ಸೆಮಿಫೈನಲ್‌ನಲ್ಲಿ ಗೆದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಆಡುವಾ ಹೈದರಾಬಾದ್ ವಿರುದ್ಧ 8 ರನ್‌ಗಳಿಂದ ಸೋತು ನಿರಾಸೆ ಅನುಭವಿಸಿದ್ದೆವು. ಅದು ನಮಗೆ ಭಾರೀ ನೋವನ್ನು ಉಂಟು ಮಾಡಿತ್ತು. ಆದ್ರೆ ಪ್ರತಿ ಬಾರಿ ಸೋತಾಗಲೂ ಮುಂದಿನ ವರ್ಷ ನಾವು ವಿಭಿನ್ನವಾಗಿ ಏನು ಮಾಡಬಹುದು ಎಂಬುದರ ಕುರಿತು ಮಾತುಕತೆ ನಡೆಯುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: RCB ಕೈಬಿಡುವಾಗ ಒಂದೂ ಮಾತು ಕೂಡ ಹೇಳಲಿಲ್ಲ – ಬೇಸರ ಹಂಚಿಕೊಂಡ ಚಾಹಲ್
ಈ ಹಿಂದಿನ ಸೀಸನ್ ವೊಂದರಲ್ಲಿ ಸತತ 6 ಪಂದ್ಯಗಳಲ್ಲಿ ಸೋತಿದ್ದೆವು. 7ನೇ ಪಂದ್ಯ ಗೆದ್ದಾಗ ಪ್ರಶಸ್ತಿಯನ್ನೇ ಗೆದ್ದಷ್ಟು ಸಂತಸದಿಂದ ಸಂಭ್ರಮಿಸಿದ್ದೆವು. ಆದ್ರೆ ಈ ಬಾರಿ ರಾಜಸ್ತಾನ ರಾಯಲ್ಸ್ ತಂಡ ಅತ್ಯುತ್ತಮವಾಗಿತ್ತು. ಆದ್ರೂ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ನಮ್ಮ ಕೈಯಲ್ಲಿ ಇಲ್ಲದ ವಿಷಯಗಳ ಬಗ್ಗೆ ನಾವು ಯೋಚಿಸುವುದೂ ಇಲ್ಲ ಎಂದು ತೀಕ್ಷ್ಣವಾಗಿ ನುಡಿದಿದ್ದಾರೆ.
Web Stories