ದುಬೈ: ಅರಬ್ ನಾಡಿನಲ್ಲಿ ನಡೆಯುತ್ತಿರುವ ಐಪಿಎಲ್‍ನ ಮೊದಲ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಎಂದಿನ ಕೆಂಪು, ಕಪ್ಪು ಜೆರ್ಸಿ ಬಿಟ್ಟು ಈ ಬಾರಿ ತಿಳಿ ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದಾರೆ. ಈ ತಿಳಿ ನೀಲಿ ಜೆರ್ಸಿ ಧರಿಸಿದ ಹಿಂದೆ ಆರ್ಸಿಬಿ ಮಹತ್ವದ ಗುರಿ ಹೊಂದಿದೆ.
Advertisement
ಆರ್ಸಿಬಿ ಪಿಪಿಇ ಕಿಟ್‍ನಂಥ ತಿಳಿ ನೀಲಿ ಬಣ್ಣದ ಈ ಜೆರ್ಸಿಯೊಂದಿಗೆ ಕೆಕೆಆರ್ ವಿರುದ್ಧ ಕಣ್ಣಕ್ಕಿಳಿದು ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಿದೆ. ಇದಲ್ಲದೆ ಪಂದ್ಯದ ಬಳಿಕ ಎಲ್ಲಾ ಆಟಗಾರರ ಜೆರ್ಸಿಯನ್ನು ಹರಾಜು ಹಾಕಲಾಗುತ್ತಿದ್ದು, ಇದರಿಂದ ಬಂದ ಹಣವನ್ನು ಭಾರತದಲ್ಲಿ ಕೊರೊನಾ ಲಸಿಕೆ ನೀಡಲು ಆರ್ಸಿಬಿ ಫ್ರಾಂಚೈಸ್ ಮುಂದಾಗಿದೆ. ಈ ಮೂಲಕ ಸಮಾಜಸೇವೆಗೆ ತಮ್ಮ ಒಂದು ಪಂದ್ಯವನ್ನು ಮೀಸಲಿಟ್ಟಿದೆ.
Advertisement
Advertisement
ಈ ಹಿಂದೆ ಆರ್‍ಸಿಬಿ ತಂಡ ಪರಿಸರ ಜಾಗೃತಿಗಾಗಿ 1 ಪಂದ್ಯದಲ್ಲಿ ಹಸಿರು ಜೆರ್ಸಿತೊಟ್ಟು ಆಡುತ್ತಿತ್ತು. ಆದರೆ ಈ ಬಾರಿ ಹಸಿರು ಬಣ್ಣದ ಬದಲಾಗಿ ತಿಳಿ ನೀಲಿ ಬಣ್ಣದ ವಸ್ತ್ರದೊಂದಿಗೆ ಇಳಿದಿದೆ. ಇದನ್ನೂ ಓದಿ: ಆರ್ಸಿಬಿಯಿಂದ ಹೀನಾಯ ಪ್ರದರ್ಶನ – ಕೆಕೆಆರ್ಗೆ 9 ವಿಕೆಟ್‍ಗಳ ಭರ್ಜರಿ ಜಯ
Advertisement