ಮದುವೆಯ ಧಾರೆ ಶಾಸ್ತ್ರ ನಡೆಯುವಾಗ ಕಡಿಮೆ ಮೇಕಪ್‌ನಲ್ಲಿ ರಶ್ಮಿಕಾ ಮಂದಣ್ಣ(Rashmmika Mandanna) ಕಂಗೊಳಿಸಿದ್ದರು. ಇದು ಬ್ರೈಡಲ್ ಮೇಕಪ್‌ಗೆ(Bridal Makeup) ತದ್ವಿರುದ್ಧವಾಗಿತ್ತು. ಫೌಂಡೇಶನ್ ರಹಿತ, ಗಾಢ ಐಶ್ಯಾಡೋ ಇಲ್ಲದೇ ಕಾಜಲ್ ತಾಕಿಸದೆ ಸರಳವಾಗಿತ್ತು ರಶ್ಮಿಕಾ ಲುಕ್.
ಈಗ ವಧು ರಶ್ಮಿಕಾಗೆ ಅಷ್ಟೊಂದು ಸಾಮಾನ್ಯ , ಸರಳ ಲುಕ್ ಟಚ್ ಕೊಟ್ಟಿದ್ದು ಯಾಕೆ ಎನ್ನುವುದರ ಕುರಿತು ಮೇಕಪ್ ಆರ್ಟಿಸ್ಟ್ ತನ್ವಿ ಚೆಂಬೂರ್ಕರ್ ಸಂದರ್ಶವೊಂದರಲ್ಲಿ ಎಲ್ಲಾ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮದುವೆ ಹಿಂದಿನ ದಿನ ಸಂಗೀತ ಕಾರ್ಯಕ್ರಮ ಇತ್ತು. ಮರುದಿನ ಮದುವೆ ಶಾಸ್ತ್ರಕ್ಕೆ ಹೆಚ್ಚಿನ ಸಮಯ ಸಿಗಲಿಲ್ಲ. ಹೀಗಾಗಿ ಕೇವಲ 40 ನಿಮಿಷದಲ್ಲಿ ಮೇಕಪ್ ಹೇರ್‌ಸ್ಟೈಲ್ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್

ರಶ್ಮಿಕಾ ಅವರ ಕಣ್ಣುಗಳಿಗೆ ಮೇಕಪ್ ಅಗತ್ಯ ಇರಲಿಲ್ಲ. ಐಲ್ಯಾಶಸ್ ಹಾಗೂ ತಾಮ್ರ ಬಣ್ಣದ ಮಿನಿಮಲ್ ಐಶ್ಯಾಡೋ ಹಾಕಲಾಗಿತ್ತು. ಗಾಢ ಬೆಳಕಿನಲ್ಲಿ ರಶ್ಮಿಕಾ ಮುಖವೊಡ್ಡುವ ಕಾರಣಕ್ಕೆ ಫೌಂಡೇಶನ್ ರಹಿತವಾಗಿ ಮೇಕಪ್ ಮಾಡಲಾಗಿತ್ತು. ಸಂಪೂರ್ಣವಾಗಿ ಒಂದೂವರೆ ಗಂಟೆಯೊಳಗೆ ತಯಾರಾಗಿ ಮದುವೆ ಮಂಟಪಕ್ಕೆ ರಶ್ಮಿಕಾ ಬಂದಿದ್ದರು.
ಕೇವಲ ಮಾಯಿಶ್ಚರೈಸರ್, ಸನ್‌ಸ್ಕ್ರೀನ್ ಕ್ರೀಂ, ಹೈಲೈಟರ್ ಹಾಕಲಾಗಿತ್ತು. ತುಟಿಗೆ ತೆಳು ಗುಲಾಬಿ ಬಣ್ಣದ ನ್ಯೂಡ್ ಲಿಪ್‌ಸ್ಟಿಕ್ ಬಳಕೆ ಮಾಡಿದ್ದು ಇನ್ನಷ್ಟು ಸರಳವಾಗಿ ಕಾಣುತ್ತಿತ್ತು. ಮುಖ್ಯವಾಗಿ ಮದುವೆಯಲ್ಲಿ ರಶ್ಮಿಕಾ ಧರಿಸಿದ್ದ ಆಭರಣ, ಸೀರೆ ಎಲ್ಲವೂ ಗಾಢವಾಗಿದ್ದ ಕಾರಣ ಮೇಕಪ್ ಸರಳವಾಗಿದರೆ ಹಿತವಾಗಿರುತ್ತೆ ಎಂದಿದ್ದಾರೆ ತನ್ವಿ.
ಗಾಢ ಬಟ್ಟೆ ಒಡವೆ ಹಾಕಿಕೊಂಡ ಮಾತ್ರಕ್ಕೆ ಗಾಢ ಮೇಕಪ್ ಮಾಡುವ ಟ್ರೆಂಡ್ ಇರುವಾಗ ಹಲವರು ಅನುಸರಿಸುವ ಕಾಲನಲ್ಲಿ ಇದೀಗ ಕಾಂಟ್ರಾಸ್ಟ್ ಎನ್ನುವಂತೆ ಮಿನಿಮಲ್ ಮೇಕಪ್ ಸ್ಟೈಲ್ ಟ್ರೆಂಡ್‌ಗೆ ಬಂದಿದೆ. ವಧುವಿಗೆ ಮೇಕಪ್ ಮಾಡುವಾಗ ಸಮಯ, ಸುತ್ತಲಿನ ವಾತಾವರಣ ಹಾಗೂ ವಧು ಧರಿಸುವ ಬಟ್ಟೆ, ಒಡವೆಯೂ ಮುಖ್ಯವಾಗಿರುತ್ತದೆ ಎನ್ನುವುದನ್ನು ರಶ್ಮಿಕಾ ವಧುವಾಗಿ ತೋರಿಸಿದ್ದಾರೆ.
ಉದಯಪುರದಲ್ಲಿ ರಶ್ಮಿಕಾ- ವಿಜಯ್ ದೇವರಕೊಂಡ (Rashmmika Mandanna-Vijay Deverakonda) ಮದುವೆ ಫೆ.26 ರಂದು ನಡೆದಿತ್ತು.

