-ರೆಡ್ಡಿ ಎಸ್ಕೇಪ್ ಆಗುವಂತೆ ಮಾಡಿದ್ರಾ ಪೊಲೀಸರು?
ಬೆಂಗಳೂರು: ಅಂಬಿಡೆಂಟ್ ಕಂಪನಿಯ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ತಲೆಮರೆಸಿಕೊಂಡಿದ್ದಾರೆ. ಎಲ್ಲಾ ಮಾಹಿತಿಗಳಿದ್ದರೂ ಸಿಸಿಬಿ ಅಧಿಕಾರಿಗಳು ಜನಾರ್ದನ ರೆಡ್ಡಿಯನ್ನು ಈ ಮೊದಲೇ ಯಾಕೆ ಬಂಧಿಸಲಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಜನಾರ್ದನ ರೆಡ್ಡಿಯನ್ನು ಊರು ಬಿಡಿಸಲು ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ಲಾನ್ ಮಾಡಿದ್ರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಈ ಹಿಂದೆ ಸಮ್ಮಿಶ್ರ ಸರ್ಕಾರ ಬೀಳಿಸಲು ಪ್ರಯತ್ನಿಸಿದ್ದ ಕಿಂಗ್ ಪಿನ್ ಉದಯಗೌಡನನ್ನು ಊರು ಬಿಡಿಸಿದ್ದಾಯಿತು. ಪದೇ ಪದೇ ಸಮ್ಮಿಶ್ರ ಸರ್ಕಾರದ ಶಾಸಕರ ಖರೀದಿಗೆ ಮುಂದಾಗ್ತಿದ್ದ ಜನಾರ್ದನ ರೆಡ್ಡಿಯನ್ನು ಊರ ಬಿಡಿಸಬೇಕು ಎಂಬ ಉದ್ದೇಶದಿಂದಲೇ ಈ ಪ್ಲಾನ್ ಮಾಡಲಾಯಿತಾ ಎಂಬ ಚರ್ಚೆಗಳು ನಡೆದಿವೆ. ಒಂದು ವೇಳೆ ಜನಾರ್ದನ ರೆಡ್ಡಿಯ ಬಂಧನವಾದ್ರೆ ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬರಬಹುದು. ಹಾಗಾಗಿ ಪೊಲೀಸರು ರೆಡ್ಡಿ ಬಂಧನಕ್ಕೆ ಮುಂದಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
Advertisement
Advertisement
ಪದೇ ಪದೇ ಆಪರೇಷನ್ ಕಮಲಕ್ಕೆ ಮುಂದಾಗುತ್ತಿದ್ದ ಜನಾರ್ದನ ರೆಡ್ಡಿ ರಾಜ್ಯದಿಂದ ಹೊರ ಹೋದ್ರೆ ಮಾತ್ರ ಸಮ್ಮಿಶ್ರ ಸರ್ಕಾರಕ್ಕೆ ಉಳಿಗಾಲ ಅಂತ ಅರಿತ ಸಿಎಂ ಸಿಸಿಬಿಯನ್ನು ಬಳಸಿಕೊಂಡರು ಎಂಬ ಗುಸು ಗುಸು ವಿಧಾನಸೌಧದ ಮೂಲೆಯಲ್ಲಿ ಕೇಳಿಬರುತ್ತಿವೆ. ಕೇವಲ ಅರೆಸ್ಟ್ ಮಾಡ್ತೀವಿ ಎಂಬ ಗುಮ್ಮ ಬಿಟ್ಟು ಸಿಸಿಬಿ ಅಧಿಕಾರಿಗಳು ಸುಮ್ಮನಾದರಾ? ಜನಾರ್ದನ ರೆಡ್ಡಿ ಎಲ್ಲಿಯವರೆಗೂ ತಲೆ ಮರೆಸಿಕೊಂಡಿರ್ತಾರೋ ಅಲ್ಲಿಯವರೆಗೂ ಸಮ್ಮಿಶ್ರ ಸರ್ಕಾರ ಸೇಫ್ ಎಂಬ ಮಾತುಗಳು ಹರಿದಾಡುತ್ತಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews