ಬೆಂಗಳೂರು: ನಗರದ ಕಿಮ್ಸ್ ಮೆಡಿಕಲ್ ಕಾಲೇಜು ಇದೀಗ ಮುಚ್ಚುವ ಭೀತಿಯನ್ನು ಎದುರಿಸುತ್ತಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಕಿಮ್ಸ್ ಕಾಲೇಜಿಗೆ ನಿಮ್ಮ ಕಾಲೇಜನ್ನು ಮುಚ್ಚಬಾರದೇಕೆ ಅಂತ ನೋಟಿಸ್ ನೀಡಿದ್ದು, ಈ ಕೂಡಲೇ ನೋಟಿಸ್‍ಗೆ ಉತ್ತರಿಸುವಂತೆ ತಾಕೀತು ಮಾಡಿದೆ.
ಒಕ್ಕಲಿಗರ ಸಂಘದ ನಿರ್ದೇಶಕರಾದ ಕೃಷ್ಣಮೂರ್ತಿ ಮೆಡಿಕಲ್ ಸೀಟ್ ಕೊಡಿಸೋದಾಗಿ ಹೇಳಿ ಲಕ್ಷಾಂತರ ರೂಪಾಯಿಗಳಷ್ಟು ಹಣ ಪಡೆದು ವಂಚನೆ ಮಾಡಿದ್ದಾರೆ. ಹಾಗಾಗಿ ಆ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಜ್ಯೋತಿ ಜಯಕುಮಾರ್ ಎಂಬವರು ಎಂಸಿಐಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ನೋಟಿಸ್ ಜಾರಿ ಮಾಡಿರೋ ಎಂಸಿಐ ನಿಮ್ಮ ಕಾಲೇಜಿನ ವಿರುದ್ಧ ಶುಲ್ಕ ವಸೂಲಿ ಸೇರಿದಂತೆ ಇತರೆ ನ್ಯೂನ್ಯತೆಗಳ ಬಗ್ಗೆ ದೂರು ಬಂದಿದ್ದು ಇದರ ಬಗ್ಗೆ ಕೂಡಲೇ ಉತ್ತರಿಸಿ ಅಂತ ತಿಳಿಸಿದೆ.
Advertisement
ಮೆಡಿಕಲ್ ಸೀಟಿಗೂ ಕೃಷ್ಣಮೂರ್ತಿಗು ಯಾವುದೇ ಸಂಬಂದವಿಲ್ಲ. ನಮ್ಮ ಕಾಲೇಜಿನಲ್ಲಿ ನೀಟ್ ಮುಖಾಂತರ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಸೀಟ್ ನೀಡುತ್ತಿದ್ದೇವೆ. ಹಣ ಕಳೆದುಕೊಂಡುವರು ಬೇಕಾದ್ರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ. ಎಂಸಿಐ ಅವರ ನೋಟಿಸ್‍ಗೆ ಈಗಾಗಲೇ ಉತ್ತರಿಸಿದ್ದು ಯಾರೋ ಕೊಟ್ಟ ದೂರಿಗೆ ಎಂಸಿಐ ನೋಟಿಸ್ ನೀಡಿದ್ದು ಸರಿಯಲ್ಲ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ, ಪ್ರೊ.ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.