ಬೆಂಗಳೂರು: ಚುನಾವಣೆ (Election) ಹತ್ತಿರ ಬರುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿದ್ದು, ನಿನ್ನೆ ಕಾಂಗ್ರೆಸ್‍ನವರು ‘PAY CM’ ಅಭಿಯಾನ ನಡೆಸಿದ್ದರು. ಈ ಬೆನ್ನಲ್ಲೇ ಬಿಜೆಪಿಯವರು ಕೂಡ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಅಭಿಯಾನವೊಂದನ್ನು ನಡೆಸಿದ್ದರು.
Advertisement
ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ವಿರುದ್ಧ ಕಾಂಗ್ರೆಸ್ ಅಭಿಯಾನ (Congress Campaign) ದ ಬೆನ್ನಲ್ಲೇ ಎಫ್‍ಐಆರ್ (FIR) ದಾಖಲು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ (Dinesh GunduRao) ಅವರು ಸರಣಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: PayCM ಪೋಸ್ಟರ್‌ಗೆ ಸಿಎಂ ಗರಂ – ಎಫ್‌ಐಆರ್ ದಾಖಲು
Advertisement
Advertisement
ಟ್ವೀಟ್‍ನಲ್ಲೇನಿದೆ..?: ‘PAY CM’ ಪೋಸ್ಟರ್ ಗೆ ಸಂಬಂಧಿಸಿದಂತೆ ಪೊಲೀಸರು ಕಾಂಗ್ರೆಸ್ (Congress) ಸೋಶಿಯಲ್ ಮೀಡಿಯಾದ ಐವರನ್ನು ಬಂಧಿಸಿದ್ದಾರೆ. ಆದರೆ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ.ಶಿವಕುಮಾರ್ (DK Shivakumar) ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಬಿಜೆಪಿ ಸೋಶಿಯಲ್ ಮೀಡಿಯಾದವರ ಬಂಧನವೇಕಿಲ್ಲ?. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವೇ.? ಇದ್ಯಾವ ಕುರುಡು ನ್ಯಾಯ ಬೊಮ್ಮಾಯಿಯವರೇ ಎಂದು ಪ್ರಶ್ನಿಸಿದ್ದಾರೆ.
Advertisement
3
BJP ಸೋಶಿಯಲ್ ಮೀಡಿಯಾದ ವಿಕೃತಿಗೆ ನಾನು ಸೇರಿದಂತೆ ಹಲವು ಕಾಂಗ್ರೆಸಿಗರು ಬಲಿಪಶುಗಳಾಗಿದ್ದಾರೆ.
ನಮ್ಮದೇ ಸರ್ಕಾರವಿದ್ದಾಗಲೂ ಕೂಡ BJP ಸೋಶಿಯಲ್ ಮೀಡಿಯಾ ಕಾಂಗ್ರೆಸ್ ನಾಯಕರ ಫೋಟೋ ವಿರೂಪಗೊಳಿಸಿ ಅಂಕೆಯಿಲ್ಲದ ವಿಕೃತಿ ಮೆರೆದಿತ್ತು.
ಆದರೆ ಟೀಕೆ ಟಿಪ್ಪಣಿ ರಾಜಕೀಯದ ಸಹಜ ವಿದ್ಯಾಮಾನ.
ಹಾಗಾಗಿ ನಾವು BJPಯವರಂತೆ ಪೊಲೀಸರ ಮೊರೆ ಹೋಗಿರಲಿಲ್ಲ
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 22, 2022
‘PAY CM’ ಎಂಬ ಕೇವಲ ಒಂದೇ ಒಂದು ಪೋಸ್ಟರ್ ಗೆ ರಾಜ್ಯ ಸರ್ಕಾರ ಹಾವು ತುಳಿದಂತೆ ಬೆಚ್ಚಿಬಿದ್ದಿದೆ. ಬಿಜೆಪಿ ಸೋಶಿಯಲ್ ಮೀಡಿಯಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಷ್ಟು ಕಾಂಗ್ರೆಸ್ ನಾಯಕರ ಮೇಲೆ ಕಪೋಲಕಲ್ಪಿತ ಸುಳ್ಳುಗಳನ್ನು ಹರಡಿ ವಿಕೃತಿ ಮೆರೆದಿಲ್ಲ. ಈಗ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿಯವರಿಗಿದೆಯೇ ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗೌರವ ಹೋದ್ರೆ ಎಲ್ಲರದ್ದೂ ಹೋಗಲಿದೆ – ಪೇ ಸಿಎಂ ಗದ್ದಲ, ಗಲಾಟೆ: ಕಲಾಪ ಮುಂದೂಡಿಕೆ
4
ಎದುರಾಳಿಗೆ ಕೆಸರು ಎರಚಿ, ಅವರು ನಮಗೆ ಮೊಸರು ಎರಚಲಿ ಎಂದು ಬಯಸಬಾರದು.
ಇನ್ನೊಬ್ಬರ ಮೇಲೆ ಕೆಸರು ಎರಚಿದರೆ, ತಮಗೂ ಕೆಸರನ್ನೇ ಎರಚುತ್ತಾರೆ ಎಂಬ ಕಟು ಸತ್ಯವನ್ನು ಬೊಮ್ಮಾಯಿಯವರು ಅರಿಯಬೇಕು.
BJP ಸೋಶಿಯಲ್ ಮೀಡಿಯಾ ಸುಳ್ಳು ಹರಡುವಾಗ ಇದೇ ಬೊಮ್ಮಾಯಿಯವರು ವಿಕೃತ ಆನಂದ ಅನುಭವಿಸಿದ್ದರು.
ಈಗ ತಮಗೇ ಚುಚ್ಚಿಕೊಂಡ ಮೇಲೆ ಆ ನೋವು ಅರಿವಾಗುತ್ತಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 22, 2022
ಬಿಜೆಪಿ ಸೋಶಿಯಲ್ ಮೀಡಿಯಾದ ವಿಕೃತಿಗೆ ನಾನು ಸೇರಿದಂತೆ ಹಲವು ಕಾಂಗ್ರೆಸ್ಸಿಗರು ಬಲಿಪಶುಗಳಾಗಿದ್ದಾರೆ. ನಮ್ಮದೇ ಸರ್ಕಾರವಿದ್ದಾಗಲು ಕೂಡ ಬಿಜೆಪಿ (BJP) ಸೋಶಿಯಲ್ ಮೀಡಿಯಾ ಕಾಂಗ್ರೆಸ್ ನಾಯಕರ ಫೋಟೋ ವಿರೂಪಗೊಳಿಸಿ ಅಂಕೆಯಿಲ್ಲದ ವಿಕೃತಿ ಮೆರೆದಿತ್ತು. ಆದರೆ ಟೀಕೆ ಟಿಪ್ಪಣಿ ರಾಜಕೀಯದ ಸಹಜ ವಿದ್ಯಾಮಾನ. ಹಾಗಾಗಿ ನಾವು BJPಯವರಂತೆ ಪೊಲೀಸರ ಮೊರೆ ಹೋಗಿರಲಿಲ್ಲ.
ಎದುರಾಳಿಗೆ ಕೆಸರು ಎರಚಿ, ಅವರು ನಮಗೆ ಮೊಸರು ಎರಚಲಿ ಎಂದು ಬಯಸಬಾರದು. ಇನ್ನೊಬ್ಬರ ಮೇಲೆ ಕೆಸರು ಎರಚಿದರೆ, ತಮಗೂ ಕೆಸರನ್ನೇ ಎರಚುತ್ತಾರೆ ಎಂಬ ಕಟು ಸತ್ಯವನ್ನು ಬೊಮ್ಮಾಯಿಯವರು ಅರಿಯಬೇಕು. ಬಿಜೆಪಿ ಸೋಶಿಯಲ್ ಮೀಡಿಯಾ ಸುಳ್ಳು ಹರಡುವಾಗ ಇದೇ ಬೊಮ್ಮಾಯಿಯವರು ವಿಕೃತ ಆನಂದ ಅನುಭವಿಸಿದ್ದರು. ಈಗ ತಮಗೇ ಚುಚ್ಚಿಕೊಂಡ ಮೇಲೆ ಆ ನೋವು ಅರಿವಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಗರಂ ಆಗಿದ್ದಾರೆ.