Connect with us

Latest

ಮೋದಿ `ರಾಮ’ಬಾಣ: ಇಲ್ಲಿದೆ ಇನ್‍ಸೈಡ್ ಸ್ಟೋರಿ

Published

on

ಯಾರು ಊಹಿಸಲಿರಲಿಲ್ಲ, ಹೆಸರಂತೂ ಚಲಾವಣೆಯಲ್ಲೇ ಇರಲಿಲ್ಲ, ಪಕ್ಷದ ಘಟಾನುಘಟಿ ನಾಯಕರಿಗೂ ಗೊತ್ತಿರಲಿಲ್ಲ. ಆದರೆ ಸೋಮವಾರ ಮಧ್ಯಾಹ್ನ ಎನ್‍ಡಿಎನಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ರಾಮನಾಥ್ ಕೋವಿಂದ್ ಹೆಸರು ಘೋಷಣೆ ಆಯ್ತು. ಹಾಗಾದ್ರೆ ಇದರ ಹಿಂದಿನ ಮಾಸ್ಟರ್ ಪ್ಲ್ತಾನ್ ಏನು…? ಮೋದಿ, ಶಾ ಮೈಂಡ್ ಗೇಮ್ ಯಾರಿಗೆಲ್ಲಾ ಶಾಕ್? ಇನ್ ಸೈಡ್ ಸ್ಟೋರಿ ಇಲ್ಲಿದೆ ನೋಡಿ.

ಹೌದು. ರಾಷ್ಟಪತಿ ಹುದ್ದೆಗೆ ಕೋವಿಂದ್ ಅವರ ಹೆಸರನ್ನೂ ಯಾರು ಊಹಿಸಿರಲಿಲ್ಲ. ಬಿಹಾರ ರಾಜಭವನದಲ್ಲಿದ್ದ ರಾಮನಾಥ್ ಕೋವಿಂದ್ ಅವರಿಗೂ ಇದು ಅಚ್ಚರಿ ಸಿಹಿ ಸುದ್ದಿ. ಇದೆಲ್ಲಾ ಕಾರಣ ಮೋದಿ ಆಂಡ್ ಅಮಿತ್ ಶಾ ಅವರ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆದುರುಳಿಸುವ ತಂತ್ರದ ಫಲ.

ರಾಮನಾಥ್ ಕೋವಿಂದ್ ಕಾನ್ಪುರ ಮೂಲದ ಕೋರಿ ದಲಿತ ಸಮುದಾಯ ಅವರದ್ದು. ಉತ್ತರ ಪ್ರದೇಶದಲ್ಲಿ ಅವರ ಸಮುದಾಯದ ಜನಸಂಖ್ಯೆ 22ಲಕ್ಷ. ಈ ಸಮುದಾಯ ಗೋಮಾಂಸವನ್ನು ತಿನ್ನಲ್ಲವಂತೆ. ಈ ಮುದಾಯದ ವ್ಯಕ್ತಿ ಇವತ್ತು ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ.

ಒಂದು ಕಡೆ ಬಿಜೆಪಿಯ ಕೆಲ ಹಿರಿಯರು, ಆರ್‍ಎಸ್‍ಎಸ್‍ನವರನ್ನು ಲಾಕ್ ಮಾಡೋದು, ಮತ್ತೊಂದೆಡೆ ಪ್ರತಿಪಕ್ಷಗಳನ್ನ ಇಕ್ಕಟ್ಟಿಗೆ ಸಿಲುಕಿಸೋದು ಚಾಣಕ್ಯರ ಮೈಂಡ್ ಗೇಮ್ ಆಗಿತ್ತು. ಹಾಗಾಗಿ ದೆಹಲಿಯ ಸೌತ್ ಅವೆನ್ಯೂನಲ್ಲಿ ಆರ್ ಎಸ್ ಎಸ್ ಶಿಕ್ಷಕರಾಗಿದ್ದ ಕೋವಿಂದ್ ಅವರ ಹೆಸರನ್ನೇ, ಆರ್ ಎಸ್ ಎಸ್ ಮುಂದಿಟ್ಟು ಗ್ರೀನ್ ಸಿಗ್ನಲ್ ಪಡೆದಿದ್ದು. ಆ ಮೂಲಕ ಚಾಣಕ್ಯ ಜೋಡಿ ಬಿಜೆಪಿ ಪ್ಲಸ್ ಆರ್‍ಎಸ್‍ಎಸ್‍ನಲ್ಲಿದ್ದ ಬ್ರಾಹ್ಮಣ ಯಜಮಾನಿಕೆಗೆ ಸೆಡ್ಡು ಹೊಡೆಯಲು ಸಾಧ್ಯವಾಗಿದ್ದು ಅನ್ನೋ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಅಷ್ಟೇ ಅಲ್ಲದೇ ಗೋಮಾಂಸ ನಿಷೇಧ ಮಾಡಿ ದಲಿತರ ಕೆಂಗಣ್ಣಿಗೆ ಗುರಿಯಾಗಿ ಡ್ಯಾಮೇಜ್ ಆಗಿದ್ದನ್ನ ಸರಿಪಡಿಸಿಕೊಳ್ಳಲು ಜೋಡಿ ಮಾಡಿದ ಮೋಡಿ ಇದು ಎನ್ನಲಾಗ್ತಿದೆ.

ದಲಿತ್ ಕಾರ್ಡ್ ಸೂತ್ರ: ಎನ್‍ಡಿಎನಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಕೋವಿಂದ್ ಆಯ್ಕೆಯ ಹಿಂದೆ ಸಾಕಷ್ಟು ರಾಜಕೀಯ ಲೆಕ್ಕಚಾರಗಳಿವೆ. ದಲಿತ ವಿರೋಧಿ ಅಂತಾ ಬಿಂಬಿಸ್ತಿರೋದಕ್ಕೆ ಟಾಂಗ್ ಕೊಡಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಈಗಾಗಲೇ ದಲಿತ ಮನೆಗಳಿಗೆ ಹೋಗಿ ಊಟ ಮಾಡೋದು, ವರ್ಷವಿಡೀ ಅಂಬೇಡ್ಕರ್ ಅವರ 125 ನೇ ಸಂಸ್ಮರಣೆಯನ್ನು ಆಚರಿಸೋದನ್ನು ಬಿಜೆಪಿ ಮುಂದುವರಿಸಿದೆ. ಇದರ ಬೆನ್ನಲ್ಲೇ ರಾಷ್ಟ್ರಪತಿ ಆಯ್ಕೆ ವಿಚಾರದಲ್ಲಿ ದಲಿತ ಕಾರ್ಡ್ ಪ್ಲೇ ಮಾಡಿದೆ. 2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದ, ಅಲ್ಲದೆ ಗುಜರಾತ್, ಕರ್ನಾಟಕ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ಯಡಿಯೂರಪ್ಪ ಅವರನ್ನು ಕೋವಿಂದ್ ಅವರ ಸೂಚಕರನ್ನಾಗಿ ಮಾಡಿದ್ದು ಎನ್ನಲಾಗುತ್ತಿದೆ.

ಒಟ್ನಲ್ಲಿ ದೇಶದ ಮೊದಲ ಪ್ರಜೆ ಆಯ್ಕೆ ವಿಚಾರದಲ್ಲೂ ಚಾಣಕ್ಯ ಜೋಡಿಯ ಚದುರಾಂಗದಾಟದ ದಾಳಕ್ಕೆ ಎದುರಾಳಿಗಳು ಚಿತ್ ಆಗಿದ್ದು, ಮುಂದೆ ಎಷ್ಟರ ಮಟ್ಟಿಗೆ ರಾಜಕೀಯ ಲಾಭ ಆಗುತ್ತೋ ಕಾದುನೋಡಬೇಕಿದೆ.

ಇದನ್ನೂ ಓದಿ:ಕೋವಿಂದ್‍ಗೆ ವಾರಗಳ ಹಿಂದೆ ರಾಷ್ಟ್ರಪತಿ ರಿಟ್ರೀಟ್ ಕಟ್ಟಡಕ್ಕೆ ಪ್ರವೇಶ ನಿರಾಕರಿಸಿದ್ದು ಯಾಕೆ?

ಇದನ್ನೂ ಓದಿ: ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ಚಾಲೆಂಜ್ ಎಸೆದು ಗೆದ್ದ ಅಮಿತ್ ಶಾ

Click to comment

Leave a Reply

Your email address will not be published. Required fields are marked *