Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಪ್ರಭೇದವೇ ನಾಶವಾಗುತ್ತಂತೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಪ್ರಭೇದವೇ ನಾಶವಾಗುತ್ತಂತೆ!

Latest

ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಪ್ರಭೇದವೇ ನಾಶವಾಗುತ್ತಂತೆ!

Public TV
Last updated: June 22, 2025 4:55 pm
Public TV
Share
3 Min Read
hawaii mosquito
SHARE

ಮಲಗಿದ್ದಾಗ ಅಥವಾ ಕುಳಿತಿದ್ದಾಗ ‘ಗುಯ್..’ ಅಂತ ಕಿವಿ ಹತ್ತಿರ ಸುಳಿಯುವ ಸೊಳ್ಳೆಗಳು ಅಂದ್ರೆ ಎಂತಹವರಿಗೂ ಹಿಂಸೆ. ಸಾಕಪ್ಪಾ.. ಸಾಕು ಈ ಸೊಳ್ಳೆಗಳ ಕಾಟ ಎನಿಸದೇ ಇರದು. ಮೈಮೇಲೆ ಕೂತು ಸೂಜಿ ಚುಚ್ಚಿ ರಕ್ತ ಹೀರುವಾಗ ಅದೆಷ್ಟು ಸೊಳ್ಳೆಯನ್ನು ಹೊಡೆದು ಕೊಂದಿಲ್ಲ. ಅದಕ್ಕೆ ಲೆಕ್ಕವೇ ಇಲ್ಲ. ಸೊಳ್ಳೆ ಸಂತಾನ ಇಲ್ಲದಿದ್ರೆ ಎಷ್ಟು ಆರಾಮಾಗಿ ನಿದ್ರೆ ಮಾಡಬಹುದಿತ್ತಲ್ವಾ ಅಂತ ಯೋಚಿಸಿದವರಿಲ್ಲ. ಸೊಳ್ಳೆಗಳು ಹತ್ತಿರ ಸುಳಿದಾಡಿದರೆ ಶತ್ರುಗಳಿಗಿಂತ ಹೆಚ್ಚು. ಅವುಗಳನ್ನು ಕೊಲ್ಲಲು ಸೊಳ್ಳೆಬತ್ತಿ, ಸೊಳ್ಳೆ ಬ್ಯಾಟ್ ಬಳಕೆಗೇನು ಕಮ್ಮಿಯಿಲ್ಲ. ಒಟ್ಟಾರೆ, ಸೊಳ್ಳೆ ಅಂದ್ರೆ ಕಿರಿಕಿರಿ.

ನಿಮಗೆ ಗೊತ್ತಾ? ಸೊಳ್ಳೆಯಿಂದ ಜೀವಸಂಕುಲ ಉಳಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು. ಆ ನಿಟ್ಟಿನಲ್ಲಿ ಒಂದು ಕಾರ್ಯವನ್ನೂ ವಿಜ್ಞಾನಿಗಳು ಮಾಡಿದ್ದಾರೆ. ಈ ಪ್ರಯೋಗ ಅಮೆರಿಕಗೆ ಸೇರಿದ ಹವಾಯ್ (Hawaii) ದ್ವೀಪದಲ್ಲಿ ಅಂತಹದ್ದೊಂದು ಪ್ರಯೋಗ ಮಾಡಿದ್ದಾರೆ. ಏನಿದು ಪ್ರಯೋಗ? ಸೊಳ್ಳೆಗಳಿಂದಾಗುವ ಪ್ರಯೋಜನ ಏನು? ಜೀವಸಂಕುಲ ಉಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

honeycreepers

ಡ್ರೋನ್ ಬಳಸಿ ಸೊಳ್ಳೆ ರಿಲೀಸ್!
ಹವಾಯಿಯ ದೂರದ ಕಾಡುಗಳಲ್ಲಿ ವಿಜ್ಞಾನಿಗಳು ದೈತ್ಯ ಡ್ರೋನ್ ಬಳಸಿ ಸೊಳ್ಳೆಗಳ ಹಿಂಡುಗಳನ್ನು ಬಿಡುತ್ತಿದ್ದಾರೆ. ಇದೊಂಥರ ವಿಚಿತ್ರ ಪರಿಪಾಠ ಅಂತ ಅನ್ನಿಸಬಹುದು. ಆದರೆ, ಅದರಲ್ಲೊಂದು ಉದ್ದೇಶ ಇದೆ. ವಿಜ್ಞಾನಿಗಳು ಹವಾಯಿಯಲ್ಲಿ ಜೀವವನ್ನು ಪುನರುತ್ಥಾನಗೊಳಿಸಲು ಈ ಕೀಟಗಳನ್ನು ಬಿಡುತ್ತಿದ್ದಾರೆ.

ಅಳಿವಿನ ಅಂಚಿನಲ್ಲಿ ಹನಿಕ್ರೀಪರ್ಸ್?
ಈ ಸುಂದರ ಉಷ್ಣವಲಯದ ದ್ವೀಪವು ಅಳಿವಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಂದು ಕಾಲದಲ್ಲಿ ಹವಾಯಿಯಲ್ಲಿ ಹೇರಳವಾಗಿದ್ದ ಹನಿಕ್ರೀಪರ್ಸ್ (Honeycreepers) ಹೆಸರಿನ ವರ್ಣರಂಜಿತ ಹಾಡುಹಕ್ಕಿಗಳು, ಆಕ್ರಮಣಕಾರಿ ಸೊಳ್ಳೆಗಳಿಂದ ಹರಡುವ ಪಕ್ಷಿ ಮಲೇರಿಯಾಗೆ ಬಲಿಯಾಗುತ್ತಿವೆ. ಪಕ್ಷಿಗಳು ಬದುಕುಳಿಯಲು ಹೆಣಗಾಡುತ್ತಿವೆ. ಈ ಪಕ್ಷಿಗಳ ಸಂತಾನ ಮತ್ತೆ ವೃದ್ಧಿಯಾಗಬೇಕೆಂದು ವಿಜ್ಞಾನಿಗಳು ಯೋಜನೆಯೊಂದನ್ನು ರೂಪಿಸಿದ್ದಾರೆ. ಪಕ್ಷಿಗಳ ಸಂತಾನೋತ್ಪತ್ತಿಗೆ ಅಡ್ಡಿಪಡಿಸುವ ಬ್ಯಾಕ್ಟೀರಿಯಾದ ತಳಿಗಳನ್ನು ಬೇರೆಡೆಗೆ ಸಾಗಿಸಲು, ಪ್ರಯೋಗಾಲಯದಲ್ಲಿ ಸಾಕಿದ ಮತ್ತು ಕಚ್ಚದ ಗಂಡು ಸೊಳ್ಳೆಗಳನ್ನು ಬಿಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

ಮಲೇರಿಯಾ ಹರಡುತ್ತಿರುವ ಹನಿಕ್ರೀಪರ್ ಆವಾಸಸ್ಥಾನಗಳಿಗೆ ಈ ವಿಶೇಷ ಗಂಡು ಸೊಳ್ಳೆಗಳನ್ನು (Mosquitoes) ನಿರಂತರವಾಗಿ ಬಿಡುಗಡೆ ಮಾಡಲಾಗುತ್ತಿದೆ. ಆ ಮೂಲಕ ವಿಜ್ಞಾನಿಗಳು ಕಚ್ಚುವ ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ರೋಗ ಹರಡುವಿಕೆಯನ್ನು ನಿಗ್ರಹಿಸಲು ಕ್ರಮಕೈಗೊಂಡಿದ್ದಾರೆ.

Red legged Honeycreeper scaled

ಏನಿದು ಬರ್ಡ್ಸ್, ನಾಟ್ ಸೊಳ್ಳೆಗಳು ಯೋಜನೆ?
‘ಬರ್ಡ್ಸ್, ನಾಟ್ ಸೊಳ್ಳೆಗಳು’ ಯೋಜನೆ ಮೂಲಕ ಈ ಕ್ರಮವಹಿಸಲಾಗಿದೆ. ಇದು ಸ್ಥಳೀಯ ಹವಾಯಿಯನ್ ಪಕ್ಷಿಗಳನ್ನು ರಕ್ಷಿಸಲು ಕೆಲಸ ಮಾಡುವ ಸಂಸ್ಥೆಗಳ ಒಕ್ಕೂಟವಾಗಿದೆ. ಯೋಜನೆಯನ್ನು 2023ರ ನವೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ಮಾಯಿ ಮತ್ತು ಕೌಯಿಯಲ್ಲಿನ ಹನಿಕ್ರೀಪರ್ ಆವಾಸಸ್ಥಾನಗಳಲ್ಲಿ 40 ಮಿಲಿಯನ್‌ಗಿಂತಲೂ ಹೆಚ್ಚು ಗಂಡು ಸೊಳ್ಳೆಗಳನ್ನು ಬಿಡುಗಡೆ ಮಾಡಿದ್ದಾರೆ.

ಈ ಸೊಳ್ಳೆಗಳನ್ನು ಬಿಡುವುದರಿಂದ ಪಕ್ಷಿಗಳ ಆವಾಸಸ್ಥಾನದ ಕಾಡುಗಳಿಗೆ ಬೇರೆ ಸೊಳ್ಳೆಗಳು ಹೋಗಲು ಸಾಧ್ಯವಿಲ್ಲ ಎಂದು ಡ್ರೋನ್ ಕಾರ್ಯವನ್ನು ಮುನ್ನಡೆಸುತ್ತಿರುವ ಅಮೆರಿಕನ್ ಬರ್ಡ್ ಕನ್ಸರ್ವೆನ್ಸಿಯ ಹವಾಯಿ ಕಾರ್ಯಕ್ರಮ ನಿರ್ದೇಶಕ ಕ್ರಿಸ್ ಫಾರ್ಮರ್ ತಿಳಿಸಿದ್ದಾರೆ.

ಆಕ್ರಮಣಕಾರಿ ಸೊಳ್ಳೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಅನೇಕ ಸ್ಥಳೀಯ ಪಕ್ಷಿ ಪ್ರಭೇದಗಳು ಶಾಶ್ವತವಾಗಿ ಕಣ್ಮರೆಯಾಗುತ್ತವೆ. ಕನಿಷ್ಠ 33 ಜಾತಿಯ ಹನಿಕ್ರೀಪರ್‌ಗಳು ಈಗ ಅಳಿದುಹೋಗಿವೆ. ಮೌಯಿಯಲ್ಲಿರುವ ಕಿವಿಕಿಯು, ಅಕೊಹೆಕೊಹೆ ಮತ್ತು ಕೌಯಿಯಲ್ಲಿರುವ ಅಕೆಕೆ ಸೇರಿದಂತೆ ಉಳಿದಿರುವ 17 ಜಾತಿಗಳಲ್ಲಿ ಹಲವು ಪಕ್ಷಿಗಳು ಅಳಿವಿನಂಚಿನಲ್ಲಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸಂತಾನೋತ್ಪತ್ತಿ ಸಮಸ್ಯೆ ಇರುವ ಸೊಳ್ಳೆಗಳನ್ನು ಬಿಡುಗಡೆ ಮಾಡುವುದರಿಂದ ನಿರೀಕ್ಷಿತ ಫಲಿತಾಂಶ ಸಿಗುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಆದರೆ, ಹನಿಕ್ರೀಪರ್ ಸಂಖ್ಯೆಯನ್ನು ಉಳಿಸಲು ಈ ಸೊಳ್ಳೆಗಳಿಗೆ ಸಾಧ್ಯವಾಗಬಹುದು ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

ಹವಾಯ್‌ಗೆ ಮಾರಕ ಸೊಳ್ಳೆಗಳು ಬಂದಿದ್ಹೇಗೆ?
ಸಾಮಾನ್ಯವಾಗಿ, ಸೊಳ್ಳೆಗಳು ಹವಾಯಿಯಲ್ಲಿ ವಾಸಿಸುವುದಿಲ್ಲ. ಆದರೆ 1826 ರಲ್ಲಿ ಒಂದು ತಿಮಿಂಗಿಲ ಬೇಟೆಯ ಹಡಗು ಆಕಸ್ಮಿಕವಾಗಿ ಅವುಗಳನ್ನು ದ್ವೀಪಗಳಿಗೆ ತಂದು ಬಿಟ್ಟಿವೆ. ಅವು ಬೆಚ್ಚಗಿನ, ಆರ್ದ್ರ ವಾತಾವರಣದಲ್ಲಿ ವೃದ್ಧಿಯಾಗಿ ಅಭಿವೃದ್ಧಿ ಹೊಂದಿದವು. ಈಗ ಪಕ್ಷಿ ಪ್ರಭೇದಕ್ಕೆ ಕಂಟಕವಾಗಿ ಪರಿಣಮಿಸಿವೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಗಾದೆಯಂತೆ, ಆಕ್ರಮಣಕಾರಿ ಸೊಳ್ಳೆಗಳನ್ನು ಮಟ್ಟ ಹಾಕಲು ಸಾಕಿದ ಸೊಳ್ಳೆಗಳ ಅಸ್ತ್ರ ಪ್ರಯೋಗವನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ.

TAGGED:HAWAIIHoneycreepersmosquitoesScientistsಸೊಳ್ಳೆಗಳುಹನಿಕ್ರೀಪರ್ಹವಾಯ್
Share This Article
Facebook Whatsapp Whatsapp Telegram

Cinema news

Whispers of the River
ವಿಸ್ಪರ್ಸ್ ಆಫ್ ದಿ ರಿವರ್: ಸ್ಯಾಂಡಲ್‌ವುಡ್‌ನಲ್ಲೊಂದು ವಿಭಿನ್ನ ಪ್ರಯತ್ನ
Cinema Latest Sandalwood Top Stories
Darshan 6
ಜೈಲಿನಲ್ಲಿ ಟಿವಿ ಕೊಟ್ಟಿದ್ದಕ್ಕಾಗಿ ಜಡ್ಜ್‌ಗೆ ಥ್ಯಾಂಕ್ಸ್‌ ಹೇಳಿ ನೇರ ಕೋರ್ಟ್ ವಿಚಾರಣೆಗೆ ದರ್ಶನ್‌ ಮನವಿ
Cinema Crime Karnataka Latest Main Post
Rashmika Mandanna Vijay Devarakonda 1
ನಮ್ಮದು ‘ವಿರೋಶ್‌’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
Cinema Latest Top Stories
Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories

You Might Also Like

SpiceJet
Latest

ಎಂಜಿನ್ ವೈಫಲ್ಯದಿಂದಾಗಿ ಲೇಹ್‌ಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ದೆಹಲಿಗೆ ವಾಪಸ್

Public TV
By Public TV
35 seconds ago
US Snowstorm
Latest

ಅಮೆರಿಕದಲ್ಲಿ ಭಾರಿ ಹಿಮಪಾತ; 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು – ಶಾಲೆಗಳಿಗೆ ರಜೆ

Public TV
By Public TV
18 minutes ago
hunsur gold robbery
Crime

ಹುಣಸೂರಿನಲ್ಲಿ ಕದ್ದ 10 ಕೋಟಿ ಮೌಲ್ಯದ ಚಿನ್ನವನ್ನ ನೇಪಾಳದಲ್ಲಿ ಮಾರಿದ ದರೋಡೆಕೋರರು

Public TV
By Public TV
43 minutes ago
Kamal Maula Mosque
Court

ಪ್ರಾಚೀನ ದೇವಾಲಯದ ಅವಶೇಷಗಳಿಂದ ಕಮಲ್ ಮೌಲಾ ಮಸೀದಿ ನಿರ್ಮಾಣ

Public TV
By Public TV
1 hour ago
Canada Pm and PM modi
Latest

ಫೆ.26ಕ್ಕೆ ಭಾರತಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ

Public TV
By Public TV
2 hours ago
Uday Bhanu Chib Arrest
Latest

ಎಐ ಶೃಂಗಸಭೆಯಲ್ಲಿ ಶರ್ಟ್‌ ಬಿಚ್ಚಿ ಪ್ರತಿಭಟನೆ – ಯುವ ಕಾಂಗ್ರೆಸ್ ಮುಖ್ಯಸ್ಥ ಬಂಧನ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?