ಚಲನಚಿತ್ರ ತಾರೆಯರಿಗೆ ಸಾರ್ವಜನಿಕ ಜಾಗ, ಹಣ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಮಾರಕ (memorial) ನಿರ್ಮಾಣ ಮಾಡಬಾರದು ಎಂದು ನಟ (Actor), ಸಾಮಾಜಿಕ ಹೋರಾಟಗಾರ ಚೇತನ್ (Chetan) ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಹಲವಾರು ಕನ್ನಡಿಗರಂತೆಯೇ ನಟ, ನಟಿಯರು ಕೂಡ ಕೆಲಸ ಮಾಡಿ ಸಂಪಾದಿಸುತ್ತಾರೆ. ಈಗಾಗಲೇ ನಮ್ಮ ಸಮಾಜದಲ್ಲಿ ಅವರಿಗೆ ಅನಗತ್ಯ ಪ್ರಚಾರ ನೀಡಿದ್ದೇವೆ. ಅವರ ಸಿನಿಮಾ ಯಶಸ್ಸಿಗೆ ಅನಗತ್ಯವಾಗಿಯೇ ಗಮನ ಸೆಳೆಯುತ್ತಾರೆ. ಹಾಗಾಗಿ ಸ್ಮಾರಕಗಳನ್ನು ಕಟ್ಟದಂತೆ ಅವರು ಮನವಿ ಮಾಡಿದ್ದಾರೆ.
Advertisement
ನಾಡಿಗೆ ಬೇಕಾಗಿದ್ದು ಸ್ಟಾರ್ ಗಳ ಸ್ಮಾರಕಗಳ ಬದಲು ಕರ್ನಾಟಕ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವಂತಹ ವಸ್ತು ಸಂಗ್ರಹಾಲಯಗಳು. ನಮ್ಮ ನೆಲ ಸ್ಮಾರಕಗಳಿಗಿಂತ ವಸ್ತು ಸಂಗ್ರಹಾಲಯಗಳಿಗೆ ಬಳಕೆಯಾಗಲಿ ಎಂದು ನಟ ಚೇತನ್ ಆಗ್ರಹಿಸಿದ್ದಾರೆ. ನಿನ್ನೆಯಷ್ಟೇ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಉದ್ಘಾಟನೆ ಆಗಿದೆ. ಈ ಬೆನ್ನಲ್ಲೇ ಚೇತನ್ ಇಂತಹ ಮಾತುಗಳನ್ನು ಆಡಿದ್ದಾರೆ. ಇವರ ಮಾತು ಯಾವ ಸ್ವರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕು. ಇದನ್ನೂ ಓದಿ: ದೈವ ದರ್ಶನ ಪಡೆದ ನಿರೂಪಕಿ ಅನುಶ್ರೀ
Advertisement
Advertisement
ಸಿನಿಮಾ ರಂಗದ ವಿಚಾರವಾಗಿ ಚೇತನ್ ಈ ಹಿಂದೆಯೇ ಅನೇಕ ಮಾತುಗಳನ್ನು ಆಡಿದ್ದಾರೆ. ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಹೋರಾಟವನ್ನೇ ಅವರು ಕೈಗೆತ್ತಿಕೊಂಡಿದ್ದರು. ನಟ ನಟಿಯರ ತಾರತಮ್ಯದ ಬಗ್ಗೆ ಧ್ವನಿ ಎತ್ತಿದ್ದರು. ಕಾರ್ಮಿಕರ ಕಷ್ಟಗಳ ಕುರಿತು ಮಾತನಾಡಿದ್ದರು. ಇದೀಗ ಸ್ಮಾರಕಗಳ ಬಗ್ಗೆ ಚೇತನ್ ಮಾತನಾಡಿದ್ದಾರೆ. ಜನರ ಹಣವನ್ನು ಈ ರೀತಿಯಾಗಿ ದುಂದುವೆಚ್ಚ ಮಾಡಬೇಡಿ ಎಂದು ಅವರು ಸರಕಾರಕ್ಕೆ ಸಲಹೆ ನೀಡಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k