ಬೆಂಗಳೂರು: ಪ್ರತಿಭಟನೆ ಮಾಡಲು ಜೂನ್‌ವರೆಗೆ ಕಾಯೋದು ಯಾಕೆ? ನಾಳೆಯೇ ನಮ್ಮ ಮನೆ ಹತ್ರ ಬಂದು ಮಲಕೊಳ್ಳೋಕೆ ಹೇಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಂಸದ ಪ್ರತಾಪ್ ಸಿಂಹ (Pratap Simha) ಅವರ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರತಾಪ್ ಸಿಂಹ, ಕಾಂಗ್ರೆಸ್ (Congress) ಮುಖ ನೋಡಿ ಯಾರೂ ಮತ ಹಾಕಿಲ್ಲ. ಗ್ಯಾರಂಟಿ ಕಾರ್ಡ್ (Guarantee Card) ನೋಡಿ ಮತ ಹಾಕಿದ್ದಾರೆ, ಅದು ನೆನಪಿರಲಿ. ಕೊಟ್ಟ ಭರವಸೆಯನ್ನು ಈಗ ಈಡೇರಿಸಿ. ಜೂನ್ 1 ರವರೆಗೆ ಕಾಯುತ್ತೇವೆ. ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ ಜೂನ್ 1 ರಿಂದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
Advertisement
Advertisement
ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಅವರು ಇಲ್ಲೇ ನಮ್ಮ ಮನೆ ಹತ್ರ ಬಂದು ಮಲಕೊಳ್ಳಲಿ. ಜೂನ್ ಯಾಕೆ? ನಾಳೆಯಿಂದಲೇ ಬಂದು ಇಲ್ಲಿ ಮಲಕೊಳ್ಳೋಕೆ ಹೇಳಿ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಇವತ್ತೇ ಸಿದ್ದು ಸಂಪುಟಕ್ಕೆ ಕ್ಲೈಮ್ಯಾಕ್ಸ್ – 24 ಸಂಭವನೀಯ ಸಚಿವರು ಯಾರು?
Advertisement
Advertisement
ದೆಹಲಿಯಿಂದ ವಾಪಸಾಗುತ್ತಲೇ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಚಿವ ಸಂಪುಟ ರಚನೆ ವಿಚಾರವಾಗಿ ಡಿಕೆಶಿ ಮಾತನಾಡಿದರು. ದೆಹಲಿಯಿಂದ ಬಂದಿದ್ದೇನೆ, ಮತ್ತೆ ವಾಪಸ್ ಹೋಗಬೇಕು. ಖಾಸಗಿ ಸಣ್ಣ ಕಾರ್ಯಕ್ರಮವೊಂದಕ್ಕೆ ಹಾಜರಾಗಿ ಅದನ್ನು ಮುಗಿಸಿಕೊಂಡು ನಂತರ ಹೊರಡಬೇಕು. ಕ್ಯಾಬಿನೆಟ್ ರಚನೆ ಚರ್ಚೆಗಾಗಿ ದೆಹಲಿಗೆ ಹೋಗಿದ್ದು, ನಾಳೆ ಒಂದು ದಿನ ಅಷ್ಟೇ, ಎಲ್ಲವನ್ನೂ ತಿಳಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ `ಗ್ಯಾರಂಟಿ’ ಟೆನ್ಶನ್- ರಾಜ್ಯದಲ್ಲಿ ಭುಗಿಲೆದ್ದ ಗಲಾಟೆ