ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೇನೆಯ ಯೂನಿಫಾರ್ಮ್ ಧರಿಸಿಕೊಂಡು ಆರ್ಮಿ ಸೋರಿಕೆ ಮಾಡುತ್ತಿದ್ದ ಪಾಕ್ ಬೇಹುಗಾರಿಯನ್ನು ಬಂಧಿಸಲಾಗಿದೆ. ಇದೀಗ ಈತ ಕಾಟನ್ ಪೇಟೆಯನ್ನೇ ಆಯ್ಕೆ ಮಾಡಿಕೊಂಡಿರುವುದರಿಂದ ಹಿಂದಿನ ರಹಸ್ಯ ಬಯಲಾಗಿದೆ.
ರಾಜಸ್ತಾನದಲ್ಲಿದ್ದ ಗೂಢಾಚಾರಿ ಬೆಂಗಳೂರಿಗೆ ಬಂದಿದ್ದೇಕೆ…?, ರಾಜಧಾನಿ ಬೆಂಗಳೂರು ಅಷ್ಟೊಂದು ಸೇಫಾ…?, ಕಾಟನ್‍ಪೇಟೆಯನ್ನೇ ಈತ ಆಯ್ದುಕೊಂಡಿದ್ದೇಕೆ ಎಂಬೆಲ್ಲ ಪ್ರಶ್ನೆಗಳು ಎದ್ದಿದ್ದು, ಇದರ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಕಾಟನ್ ಪೇಟೆಗೆ 2016ರಲ್ಲಿ ಬಂದಿರುವ ಜಿತೇಂದರ್ ಸಿಂಗ್, ಸದಾ ಜನರಿಂದ ತುಂಬಿರುವ ಜಾಲಿ ಮೊಹಲ್ಲಾಗೆ ಭೇಟಿ ನೀಡಿದ್ದ. ಜಾಲಿ ಮೊಹಲ್ಲಾದಲ್ಲಿ ಬೇರೆ ಬೇರೆ ಸಮುದಾಯದ ಜನರಿದ್ದಾರೆ ಎಂಬುದನ್ನು ಅರಿತುಕೊಂಡು ಅಲ್ಲೇ ತನ್ನ ವ್ಯಾಪಾರ ಆರಂಭಿಸಲು ಶುರು ಮಾಡಿದ್ದಾನೆ.
Advertisement
Advertisement
ಬಟ್ಟೆ ವ್ಯಾಪಾರ ಆಗಿರೋದ್ರಿಂದ ಯಾವುದೇ ಅನುಮಾನ ಬರಲ್ಲ. ಸಿಸಿಬಿ ಕಚೇರಿ ಪಕ್ಕದಲ್ಲೇ ಇದ್ರೂ ಅನುಮಾನ ಬಾರದಂತೆ ಓಡಾಟ ನಡೆಸುತ್ತಿದ್ದನು. ಜೀತೇಂದರ್ ಸಿಂಗ್ ಅನ್ನೋ ಹೆಸರಿನಿಂದಲೇ ಸಂಚರಿಸುತ್ತಿದ್ದನು. ಸಿಂಗ್ ಅನ್ನೋ ಕಾರಣಕ್ಕೆ ಎನ್‍ಐಎ, ಸಿಸಿಬಿಗೆ ಅನುಮಾನ ಬಂದಿರಲಿಲ್ಲ.
ಪಾಕಿಸ್ತಾನದ ಐಎಸ್‍ಐ ಜೊತೆ ಗೂಢಾಚಾರಿ ಜಿತೇಂದರ್ ಸಿಂಗ್ ನಂಟು ಹೊಂದಿದ್ದನು. ಕಳೆದ 1 ವರ್ಷದಿಂದ ಪಾಕ್ ಏಜೆಂಟ್ ಜೊತೆ ದೇಶದ್ರೋಹಿಯ ಸಂಪರ್ಕ ಹೊಂದಿದ್ದನು. ಮಾಹಿತಿ ಸೋರಿಕೆ ಮಾಡಿ ಬೆಂಗಳೂರು ಸೇರಿಕೊಂಡಿದ್ದನು. ಬೆಂಗಳೂರಲ್ಲಿ ರಾಜಸ್ಥಾನದ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಜಿತೇಂದರ್ ರಾಜಸ್ಥಾನದ ಬಾರ್ಮರ್‍ನಲ್ಲೂ ಸಣ್ಣಪುಟ್ಟ ಕೆಲಸ ಮಾಡ್ಕೊಂಡಿದ್ದ. ಇದನ್ನೂ ಓದಿ: ಹನಿಟ್ರ್ಯಾಪ್‍ಗೆ ಬಲೆಗೆ ಬಿದ್ದು ಪಾಕಿಗೆ ಸೇನಾ ಮಾಹಿತಿ ರವಾನೆ
ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿ, ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದನು. ಈ ಮಧ್ಯೆ ಯಾರಿಗೂ ಅನುಮಾನ ಬಾರದಂತೆ ವರ್ತಿಸುತ್ತಿದ್ದನು. ಇತ್ತ ಪಾಕ್ ಮಾಯಾಂಗನೆಯ ಮೋಹಕ್ಕೆ ಬಿದ್ದಿದ್ದ ಜಿತೇಂದರ್ ಸಿಂಗ್, ವೈರಿ ರಾಷ್ಟ್ರಕ್ಕೆ ತಾಯ್ನಾಡಿನ ಮಾಹಿತಿ ಸೋರಿಕೆ ಮಾಡುತ್ತಿದ್ದನು. ಪಾಕ್ ಇಂಟಲಿಜೆನ್ಸ್ ಜೊತೆಗೆ ಜಿತೇಂದರ್ ಸಿಂಗ್ ನಂಟು ಹೊಂದಿದ್ದು, ಕರಾಚಿ ಇಂಟಲಿಜೆನ್ಸ್ ಜೊತೆ ವಾಟ್ಸಪ್ ಸಂಪರ್ಕ ಇಟ್ಟುಕೊಂಡಿದ್ದನು.
ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ ಐಎಸ್‍ಐ ಏಜೆಂಟ್‍ಗೆ ಮಾಹಿತಿ ಸೋರಿಕೆ ಮಾಡುತ್ತಿದ್ದನು. ಪಾಕ್ ಐಪಿ ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಬೈಲ್ ಜೊತೆ ಸಂಪರ್ಕ ಹೊಂದಿದ್ದನು. ದೇಶದ ಪ್ರಮುಖ 6 ಸೇನಾ ನೆಲೆಗಳ ಫೋಟೋ, ವಿಡಿಯೋ ರವಾನೆ ಮಾಡಲಾಗಿದ್ದು, ಟೆಕ್ನಿಕಲ್ ಮಾಹಿತಿ ಮೂಲಕ ಆರೋಪಿಯನ್ನು ಖಾಕಿ ಪತ್ತೆಹಚ್ಚಿದೆ.
ನಿನ್ನೆ ಸಂಜೆ 6.30ರ ಸುಮಾರಿಗೆ ಆರೋಪಿಯನ್ನು ಪೊಲೀಸರು ಬಂಧಿಸಿ, ಫುಲ್ ಡ್ರಿಲ್ ಮಾಡಿದಾಗ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಸದ್ಯ ಜಿತೇಂದರ ಸಿಂಗ್ ವಿರುದ್ಧ ಸಿಸಿಬಿ ಇನ್ಸ್‍ಪೆಕ್ಟರ್ ಜಿ ಶಿವಪ್ರಸಾದ್ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಿ ವಿರುದ್ದ ಐಪಿಸಿ 120(ಬಿ), ಮತ್ತು ಅಫಿಷಿಯಲ್ ಸಿಕ್ರೇಟ್ ಆಕ್ಟ್ 3,6,9 ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.