ಬೆಂಗಳೂರು: ಭಾರತ, ಪಾಕಿಸ್ತಾನ ಸಂಘರ್ಷದಲ್ಲಿ ಪ್ರಧಾನಿ ಮೋದಿ (PM Narendra Modi) ಮನೆ ಮೇಲೆ ಯಾಕೆ ಬಾಂಬ್ ಬೀಳುತ್ತಿಲ್ಲ ಎಂದು ಹೇಳಿ ಪ್ರಚೋದನಾಕಾರಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಗನಮ್ಮನ ಪಾಳ್ಯ ನಿವಾಸಿ ನವಾಜ್ ಎಂದು ತಿಳಿಯಲಾಗಿದೆ.ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಓರ್ವ ಉಗ್ರ ಮಟಾಶ್, ಮತ್ತಿಬ್ಬರು ಸೆರೆ
ಪಬ್ಲಿಕ್ ಸರ್ವೆಂಟ್ ಎಂಬ ಐಡಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಚೋದನಾತ್ಮಕ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ. ವಿಡಿಯೋದಲ್ಲಿ ಭಾರತ, ಪಾಕಿಸ್ತಾನ ಸಂಘರ್ಷದ ವೇಳೆ ಸುಮ್ಮನೆ ಇರುವ ಜನರಿಗೆ ತೊಂದರೆಯಾಗುತ್ತದೆ. ಆದರೆ ಪ್ರಧಾನಿ ಮೋದಿ ಮನೆ ಮೇಲೆ ಯಾಕೆ ಬಾಂಬ್ ಬೀಳುತ್ತಿಲ್ಲ. ಮೊದಲು ಮೋದಿ ಮನೆ ಮೇಲೆ ಬಾಂಬ್ ಹಾಕಿ ಎಂದು ಹೇಳಿ ವಿಡಿಯೋ ವೈರಲ್ ಮಾಡಿದ್ದ.
ಬಂಡೆ ಪಾಳ್ಯ ಪೊಲೀಸರು ವಿಡಿಯೋ ಆಧರಿಸಿ ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಸದ್ಯ ಆರೋಪಿಯನ್ನು ಬಂಧಿಸಿರುವ ಬಂಡೆಪಾಳ್ಯ ಪೊಲೀಸರು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.ಇದನ್ನೂ ಓದಿ: INS ವಿಕ್ರಾಂತ್ ಎಲ್ಲಿದೆ ಹೇಳಿ – ಪಿಎಂ ಕಚೇರಿ ಅಧಿಕಾರಿಯಂತೆ ಕರೆ ಮಾಡಿದ್ದವ ಅರೆಸ್ಟ್