Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇರಾನ್‌ನ ಯುರೇನಿಯಂ ಮೇಲೆ ಟ್ರಂಪ್‌ ಕಣ್ಣಿಟ್ಟಿದ್ದೇಕೆ? – 32 ವರ್ಷಗಳ ಹಿಂದಿನ ʻಸಫೈರ್ʼ ಸೀಕ್ರೆಟ್ ಆಪರೇಷನ್ ರಿಪೀಟ್ ಆಗುತ್ತಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇರಾನ್‌ನ ಯುರೇನಿಯಂ ಮೇಲೆ ಟ್ರಂಪ್‌ ಕಣ್ಣಿಟ್ಟಿದ್ದೇಕೆ? – 32 ವರ್ಷಗಳ ಹಿಂದಿನ ʻಸಫೈರ್ʼ ಸೀಕ್ರೆಟ್ ಆಪರೇಷನ್ ರಿಪೀಟ್ ಆಗುತ್ತಾ?

Latest

ಇರಾನ್‌ನ ಯುರೇನಿಯಂ ಮೇಲೆ ಟ್ರಂಪ್‌ ಕಣ್ಣಿಟ್ಟಿದ್ದೇಕೆ? – 32 ವರ್ಷಗಳ ಹಿಂದಿನ ʻಸಫೈರ್ʼ ಸೀಕ್ರೆಟ್ ಆಪರೇಷನ್ ರಿಪೀಟ್ ಆಗುತ್ತಾ?

Public TV
Last updated: April 7, 2026 3:27 pm
Public TV
Share
6 Min Read
uranium.jpg
SHARE

ಜಗತ್ತಿನಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಬೇಕಾದ ವಿಶ್ವದ ಬಲಾಢ್ಯ ದೇಶಗಳೇ, ಯುದ್ದಭೂಮಿಗೆ (Warfield) ಇಳಿದಿವೆ. ವರುಷ ವರುಷಗಳಿಂದ ಯುದ್ದ ನಡೆಯುತ್ತಿದ್ದರೂ, ಕೆಲವು ರಾಷ್ಟ್ರಗಳಿಗೆ ಯುದ್ದದ ಉನ್ಮಾದ ಕಮ್ಮಿಯಾಗುತ್ತಿಲ್ಲ. ಇರಾನ್’ನ ಸರ್ವೋಚ್ಚ ನಾಯಕ (Iran Supreme Leader) ಖಮೇನಿ ಹತ್ಯೆಯ ನಂತರ ಶುರುವಾದ ಯುದ್ದ ಇತರ ದೇಶಗಳಿಗೂ ಆವರಿಸುವ ಭೀತಿ ಎದುರಾಗಿದೆ. ಈ ಎಲ್ಲಾ ಬೆಳವಣಿಗೆಗಳು, ವಿಶ್ವದ ಮೇಲೆ ಯಾವ ರೀತಿ ಪರಿಣಾಮ ಬೀರಲಿವೆ ಎನ್ನುವ ಲೆಕ್ಕಾಚಾರಗಳು ನಡೆಯುತ್ತಿರುವಾಗಲೇ ಸ್ಫೋಟಕ ರಹಸ್ಯವೊಂದು ಹೊರಬಿದ್ದಿದೆ.

ಇರಾನ್‌ ವಿರುದ್ಧ ಪೂರ್ಣ ಸಾಮರ್ಥ್ಯ ಪ್ರಯೋಗದ ಎಚ್ಚರಿಕೆ ನೀಡಿರುವ ಟ್ರಂಪ್‌ (Donald Trump) ಹೇಳಿಕೆಯ ಹಿಂದಿನ ಮಾಸ್ಟರ್‌ ಪ್ಲ್ಯಾನ್‌ ಬೇರೆಯೇ ಇದೆ. ಅದನ್ನ ಸಕ್ಸಸ್‌ ಮಾಡಿಕೊಳ್ಳಲೆಂದೇ ಟ್ರಂಪ್‌ ಹಾರ್ಮುಜ್‌ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಲು ಹೊರಟಿದ್ದು ಮತ್ತು ಭೂದಾಳಿಯ ಎಚ್ಚರಿಕೆಯನ್ನೂ ನೀಡಿದ್ದು. ಅದುವೇ ಅತ್ಯಮೂಲ್ಯ ಆಸ್ತಿ ಯುರೇನಿಯಂ (Uranium). ಇದನ್ನೂ ಓದಿ: ಯುರೇನಿಯಂ ಒಪ್ಪಂದದಿಂದ ಭಾರತಕ್ಕೇನು ಲಾಭ? – 1 ತುಂಡು ಲಕ್ಷಾಂತರ ಟನ್‌ ವಿದ್ಯುತ್‌ ಉತ್ಪಾದಿಸಬಲ್ಲದೇ?

ಹೌದು. ಸುಮಾರು 10-11 ಪರಮಾಣು ಬಾಂಬ್‌ಗಳನ್ನು (Nuclear Bomb) ಸಿದ್ಧಪಡಿಸಬಹುದಾದ ಯುರೇನಿಯಂ ಅನ್ನು ಇರಾನ್‌ನಿಂದ ಹೊರತೆಗೆಯಬೇಕೆಂಬುದು ಡೊನಾಲ್ಡ್‌ ಟ್ರಂಪ್‌ ಅವರ ಮಾಸ್ಟರ್‌ ಪ್ಲ್ಯಾನ್‌. ಇದು ಬಹಳ ಅಪಾಯಕಾರಿ ಕಾರ್ಯಾಚರಣೆ ಅನ್ನೋದು ಅಮೆರಿಕಕ್ಕೂ ಗೊತ್ತಿದೆ. ಆದಾಗ್ಯೂ ಟ್ರಂಪ್‌ ಇರಾನ್‌ನಿಂದ ಸುಮಾರು 450 ಕೆಜಿಯಷ್ಟು ಪುಷ್ಟಿಕರಿಸಿದ ಯುರೇನಿಯಂ ಅನ್ನು ಹೊರತೆಗೆಯಲು ಮುಂದಾಗಿದ್ದಾರೆ. ಈ ಕಾರ್ಯಾಚರಣೆ ಯಶಸ್ವಿಯಾದ್ರೆ, ಅಮೆರಿಕ ವಿಶ್ವದ ಬಲಾಢ್ಯ ದೇಶಗಳನ್ನು ನಡುಗಿಸಬಹುದು ಅನ್ನೋದ್ರಲ್ಲಿ ಎರಡು ಮಾತಿಲ್ಲ.

why australia has banned mining in one of the worlds largest uranium deposits 3

ಯಾವುದೇ ದೇಶ‌ ಯುರೇನಿಯಂ ಅನ್ನು ಅತ್ಯಮೂಲ್ಯ ಆಸ್ತಿ ಎಂದು ಏಕೆ ಪರಿಗಣಿಸುತ್ತದೆ? ಇದರಿಂದ ಆ ದೇಶಕ್ಕೆ ಆಗುವ ಉಪಯುಕ್ತತೆ ಏನು? 450 ಕೆಜಿ ಯುರೇನಿಯಂ ಮೇಲೆ ಟ್ರಂಪ್‌ ಕಣ್ಣಿಟ್ಟಿದ್ದೇಕೆ? ಅನ್ನೋ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕೌತುಕ ನಿಮಗಿದ್ದರೆ ಮುಂದೆ ಓದಿ…

ನೈಸರ್ಗಿಕ ಯುರೇನಿಯಂ ಎಷ್ಟು ಉಪಯುಕ್ತ?
ನೈಸರ್ಗಿಕವಾಗಿ ಕಂಡುಬರುವ ಯುರೇನಿಯಂ ನೇರ ಬಳಕೆಗೆ ಹೆಚ್ಚು ಉಪಯುಕ್ತವಲ್ಲ ಏಕೆಂದರೆ ಇದು ಹೆಚ್ಚಾಗಿ U-238 ಐಸೊಟೋಪ್ ಅನ್ನು ಒಳಗೊಂಡಿರುತ್ತದೆ. ಆದರೆ ಅತ್ಯಂತ ಉಪಯುಕ್ತ ಅಂಶವೆಂದರೆ U-235. ಇದು ನೈಸರ್ಗಿಕ ಯುರೇನಿಯಂನ 0.7% ರಷ್ಟು ಮಾತ್ರ ಇರುತ್ತದೆ. ಅದಕ್ಕಾಗಿಯೇ, ಸಂಸ್ಕರಣೆಯಿಲ್ಲದೆ, ಇದನ್ನು ತ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದನ್ನು ನೇರವಾಗಿ ಪರಮಾಣು ಇಂಧನವಾಗಿ ಅಥವಾ ಇತರ ಮುಂದುವರಿದ ಪರಮಾಣು ತಂತ್ರಜ್ಞಾನಗಳಲ್ಲಿ ಬಳಸಲಾಗುವುದಿಲ್ಲ. ಇದನ್ನೂ ಓದಿ: ಎದೆಹಾಲಿನಲ್ಲಿ ಯುರೇನಿಯಂ – ‘ಅಮೃತ’ಕ್ಕೆ ಇದೆಂಥಾ ಕಂಟಕ; ತಾಯಂದಿರು, ಶಿಶುಗಳ ಮೇಲೆ ಎಫೆಕ್ಟ್‌ ಏನು?

ಯುರೇನಿಯಂ ಅನ್ನು ಉಪಯುಕ್ತವಾಗಿಸುವ ಪ್ರಕ್ರಿಯೆಯನ್ನು ಪುಷ್ಟೀಕರಣ ಎಂದು ಕರೆಯಲಾಗುತ್ತದೆ. ಇದು ವಿಶೇಷ ಯಂತ್ರೋಪಕರಣಗಳನ್ನ ಬಳಸಿಕೊಂಡು U-235 ಪ್ರಮಾಣ ಹೆಚ್ಚಿಸುವುದಾಗಿರುತ್ತದೆ. ಇದರ ಶೇಕಡಾವಾರು ಪ್ರಮಾಣ ಹೆಚ್ಚಾದ ನಂತರ, ಅದೇ ಯುರೇನಿಯಂ ವಿದ್ಯುತ್ ಉತ್ಪಾದಿಸುವ ಪರಮಾಣು ರಿಯಾಕ್ಟರ್‌ಗಳಿಗೆ ಇಂಧನವಾಗಬಹುದು. ಅತಿಹೆಚ್ಚು ಸಂಸ್ಕರಿಸುತ್ತಾ ಹೋದಂತೆ ಶಸ್ತ್ರಾಸ್ತ್ರಗಳಿಗೂ ಬಳಸುವ ಉಪಯುಕ್ತ ವಸ್ತುವಾಗಲಿದೆ. ಆದ್ದರಿಂದಲೇ ವಿಶ್ವದಾದ್ಯಂತ ನ್ಯೂಕ್ಲಿಯರ್ ಸುತ್ತಲಿನ ವಿವಾದಗಳು ಒಂದು ದೇಶವು ಯುರೇನಿಯಂ ಅನ್ನು ಹೊಂದಿದೆಯೇ ಇಲ್ಲವೇ ಅನ್ನೋದಕ್ಕಿಂತ ಹೆಚ್ಚಾಗಿ, ಅದರ ಸಂಸ್ಕರಣ ಮಟ್ಟ ಎಷ್ಟಿದೆ ಎಂಬುದನ್ನು ಆಧರಿಸಿರುತ್ತದೆ.

Donald Trump Strait Of Hormuz

ಅಮೆರಿಕ ದಾಳಿಗೂ ಮೊದಲೇ ಯುರೇನಿಯಂ ಶಿಫ್ಟ್‌ !
ಕೆಲ ತಿಂಗಳುಗಳ ಹಿಂದೆ ಅಮೆರಿಕ ಇರಾನ್‌ನ ಫೋರ್ಡೋ ಪರಮಾಣು ಘಟಕದ ಮೇಲೆ ಬಿ-2 ಬಾಂಬರ್‌ (ಬಂಕರ್‌ ಬಸ್ಟರ್)‌ ಬಳಸಿ ಭಯಾನಕ ದಾಳಿ ನಡೆಸಿತ್ತು. ಆದ್ರೆ, ಅಮೆರಿಕದ ದಾಳಿಗೂ ಮೊದಲೇ ಸುಮಾರು 400 ಕೆಜಿಗೂ ಹೆಚ್ಚು ಪುಷ್ಟೀಕರಿಸಿದ ಯುರೇನಿಯಂ ಅನ್ನು ಇರಾನ್‌ ಬೇರೆ ಕಡೆಗೆ ಸಾಗಿಸಿತ್ತು. ಈ ರಹಸ್ಯ ಅಮೆರಿಕಕ್ಕೂ ಗೊತ್ತಾಗಿದೆ. ಒಂದು ವೇಳೆ ಪರಮಾಣು ಚಟುವಟಿಕೆಗಳಲ್ಲಿ ತೊಡಗಿದ್ರೆ, ಇರಾನ್‌ ದೊಡ್ಡ ಮಟ್ಟದಲ್ಲಿ ತನಗೆ ಸವಾಲೊಡ್ಡಬಹುದು ಅನ್ನೋ ಕಾರಣಕ್ಕೆ, ಟ್ರಂಪ್‌ ಆ ಯುರೇನಿಯಂ ಮೇಲೆ ಕಣ್ಣಿಟ್ಟಿದ್ದಾರೆ. 32 ವರ್ಷಗಳ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಕಝಕಿಸ್ತಾನ್‌ನಲ್ಲಿ ನಡೆಸಿದ್ದ ಕಾರ್ಯಾಚರಣೆಯನ್ನೇ ಈಗ ಟ್ರಂಪ್‌ ಕಾಪಿ ಮಾಡಲು ಹೊರಟಿದ್ದಾರೆ.

600 ಕೆಜಿ ಯುರೇನಿಯಂ ಮತ್ತು 20 ಪರಮಾಣು ಬಾಂಬ್‌!
1990 ರ ದಶಕದ ಆರಂಭದಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ, ಕಝಕಿಸ್ತಾನ್‌ನಲ್ಲಿ ಭಾರೀ ಪ್ರಮಾಣದಲ್ಲಿದ್ದ ಯುರೇನಿಯಂ ಅಸುರಕ್ಷಿತ ಸ್ಥಿತಿಯಲ್ಲಿತ್ತು. ಸುಮಾರು 20 ಪರಮಾಣು ಬಾಂಬ್‌ಗಳನ್ನು ತಯಾರಿಸುವಷ್ಟು ಸಾಮರ್ಥ್ಯ ಹೊಂದಿದ್ದ ಈ ಯುರೇನಿಯಂ ಅಂದು ಉಗ್ರರು ಅಥವಾ ಕಳ್ಳಸಾಗಣೆದಾರರ ಕೈಗೆ ಸಿಕ್ಕಿದ್ದರೆ ವಿಶ್ವದಲ್ಲಿ ಅದೆಂತಹ ಅನಾಹುತ ಸಂಭವಿಸುತ್ತಿತ್ತೋ ಗೊತ್ತಿಲ್ಲ. ಆದ್ರೆ ಅದಕ್ಕೆ ಅಮೆರಿಕ ಅವಕಾಶ ಕೊಡಲಿಲ್ಲ.

Project Sapphire

ಏನಿದು ‘ಪ್ರಾಜೆಕ್ಟ್ ಸಫೈರ್..?
1994 ರಲ್ಲಿ ನಡೆದ ಅಮೆರಿಕ-ಕಝಕಿಸ್ತಾನ್ ಜಂಟಿ ಕಾರ್ಯಾಚರಣೆ ʻಪ್ರಾಜೆಕ್ಟ್ ಸಫೈರ್ʼ (Project Sapphire) ಅಡಿಯಲ್ಲಿ, ಕಝಕಿಸ್ತಾನ್‌ನ ಉಲ್ಬಾ ಮೆಟಲರ್ಜಿಕಲ್ ಪ್ಲಾಂಟ್‌ನಿಂದ ಸುಮಾರು 600 ಕೆಜಿ (1,322 ಪೌಂಡ್) ಶಸ್ತ್ರಾಸ್ತ್ರ-ದರ್ಜೆಯ (90% U-235) ಸಮೃದ್ಧ ಯುರೇನಿಯಂ ಅನ್ನು ಯಶಸ್ವಿಯಾಗಿ ಅಮೆರಿಕಕ್ಕೆ ಸ್ಥಳಾಂತರಿಸಲಾಯಿತು. ಈ ಕಾರ್ಯಾಚರಣೆಯು ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರ ಆ ಪರಮಾಣು ವಸ್ತುವು ದುಷ್ಟರ ಕೈಗಳಿಗೆ ಸಿಗದಂತೆ ತಡೆಯುವ ಗುರಿಯನ್ನು ಹೊಂದಿತ್ತು. ಹಾಗಾಗಿ ಬಿಲ್‌ ಕ್ಲಿಂಟನ್‌ ಕೂಡ ಈ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿದ್ದರು.

ಅಂದು ಅಮೆರಿಕ ಮತ್ತು ಕಝಕಿಸ್ತಾನ ಸರ್ಕಾರಗಳು ಪರಸ್ಪರ ಸಹಕರಿಸಿದ್ದವು. 31 ತಜ್ಞರ ತಂಡವು ಹಗಲಿರುಳು ಶ್ರಮಿಸಿ, ಯುರೇನಿಯಂ ಅನ್ನು ಸುಮಾರು 400 ಕ್ಕೂ ಹೆಚ್ಚು ಕಂಟೈನರ್‌ಗಳಲ್ಲಿ ತುಂಬಿ ಸಿ-5 ಗ್ಯಾಲಕ್ಸಿ ಸರಕು ವಿಮಾನದ ಮೂಲಕ ಅಮೆರಿಕಕ್ಕೆ ಸಾಗಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಕಝಕಿಸ್ತಾನಕ್ಕೆ ಆರ್ಥಿಕ ಪರಿಹಾರ ನೀಡಿತ್ತು. ಅಂದು ಒಂದೂ ಗುಂಡು ಹಾರಿರಲಿಲ್ಲ, ಒಬ್ಬನೇ ಒಬ್ಬ ಸೈನಿಕ ಮೃತಪಟ್ಟಿರಲಿಲ್ಲ. ಈ ಪ್ರಮಾಣದ ಯುರೇನಿಯಂ ಸುಮಾರು 20 ಪರಮಾಣು ಬಾಂಬುಗಳನ್ನು ತಯಾರಿಸಲು ಸಾಕಾಗುವಷ್ಟು ಶಕ್ತಿಯುತವಾಗಿತ್ತು ಮತ್ತು ಇದನ್ನು ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (IAEA) ಮೇಲ್ವಿಚಾರಣೆಯಲ್ಲಿ ಸುರಕ್ಷಿತಗೊಳಿಸಲಾಯಿತು. ಸೋವಿಯತ್‌ ಒಕ್ಕೂಟ ಪತನದ ಬಳಿಕ, ಕಝಕಿಸ್ತಾನ್ ತನ್ನನ್ನು ಪರಮಾಣು ನಿಶ್ಯಸ್ತ್ರೀಕರಣಗೊಳಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತು.

ಬಳಿಕ ಈ ಅಪಾಯಕಾರಿ ವಸ್ತುವನ್ನು ಹೆಚ್ಚು ಪುಷ್ಟೀಕರಿಸಿದ ಯುರೇನಿಯಂ ನಿಂದ ಕಡಿಮೆ ಪುಷ್ಟೀಕರಿಸಿದ ಯುರೇನಿಯಂಗೆ ಪರಿವರ್ತಿಸಲಾಯಿತು. ಈಗ ಅದನ್ನು ನಾಗರಿಕ ಶಾಂತಿ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. 1994ರ ನವೆಂಬರ್‌ 23 ರಂದು ಕ್ಲಿಂಟನ್‌ ಈ ಕಾರ್ಯಾಚರಣೆಯ ಯಶಸ್ಸನ್ನು ಜಗತ್ತಿಗೇ ಘೋಷಿಸಿದರು.

ಇದೀಗ ಡೊನಾಲ್ಡ್‌ ಟ್ರಂಪ್‌ ಕೂಡ ಇದೇ ರೀತಿ ಕಾರ್ಯಾಚರಣೆಯಲ್ಲಿ ಇರಾನ್‌ನ ಯುರೇನಿಯಂ ಅನ್ನು ತನ್ನ ದೇಶಕ್ಕೆ ಕೊಂಡೊಯ್ಯಲು ಎದುರು ನೋಡ್ತಿದ್ದಾರೆ. ಆದ್ರೆ 10 ಪರಮಾಣು ಬಾಂಬ್‌ ತಯಾರಿಸುವ ಸಾಮರ್ಥ್ಯದ ಯುರೇನಿಯಂ ಅನ್ನು ಇರಾನ್‌ನಿಂದ ಹೊರ ತೆಗೆಯುವುದು ಸುಲಭದ ಮಾತಲ್ಲ. ಏಕೆಂದ್ರೆ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಅದಕ್ಕೆ ಕಾರಣಗಳೂ ಇವೆ. ಅದೇನೆಂಬುದನ್ನ ನೋಡೋಣ….

Iran Nuclear Sites

ಇರಾನ್‌ನಲ್ಲಿ ಯುರೇನಿಯಂ ತೆಗೆಯುವುದು ಏಕೆ ಕಷ್ಟ?
* ಕಝಕಿಸ್ತಾನ ಅಂದು ಅಮೆರಿಕಕ್ಕೆ ಬಾಗಿಲು ತೆರೆದಿತ್ತು. ಆದರೆ ಇರಾನ್ ಮತ್ತು ಅಮೆರಿಕ ಇಂದು ಪರಮ ಶತ್ರುಗಳಾಗಿ ಬೆಳೆದು ನಿಂತಿವೆ. ಇರಾನ್ ತನ್ನ ಪರಮಾಣು ಯೋಜನೆಯನ್ನು ತನ್ನ ರಾಷ್ಟ್ರೀಯ ಗೌರವ ಮತ್ತು ಭದ್ರತೆಯ ಅವಿಭಾಜ್ಯ ಅಂಗವೆಂದು ಭಾವಿಸುತ್ತದೆ. ಅಲ್ಲಿ ಅಮೆರಿಕದ ಹಸ್ತಕ್ಷೇಪಕ್ಕೆ ಇಂಚಿಂಚೂ ಪ್ರತಿರೋಧ ವ್ಯಕ್ತವಾಗುವುದು ನಿಶ್ಚಿತವಾಗಿದೆ.

* ಕೇವಲ ವೈಮಾನಿಕ ದಾಳಿಗಳಿಂದ ಇರಾನ್‌ನ ಪರಮಾಣು ಸಾಮರ್ಥ್ಯ ನಾಶಪಡಿಸಲು ಸಾಧ್ಯವಿಲ್ಲ. ಯುರೇನಿಯಂ ಅನ್ನು ಭೌತಿಕವಾಗಿ ವಶಪಡಿಸಿಕೊಳ್ಳಬೇಕೆಂದರೆ ಅಮೆರಿಕದ ಸೈನಿಕರು ಇರಾನ್ ಮಣ್ಣಿಗೆ ಇಳಿಯಲೇಬೇಕು. ಇದು ಅತ್ಯಂತ ಅಪಾಯಕಾರಿ ಆಯ್ಕೆಯಾಗಿದ್ದು, ಲಕ್ಷಾಂತರ ಸೈನಿಕರ ಪ್ರಾಣಕ್ಕೆ ಸಂಚಕಾರ ತರಬಹುದು, ಏಕೆಂದ್ರೆ ಅಮೆರಿಕಕ್ಕಿಂತಲೂ ದೊಡ್ಡ ಭೂಸೇನಾ ಪಡೆಯನ್ನ ಇರಾನ್‌ ಹೊಂದಿದೆ. ನಮ್ಮ ಪಡೆಗಳು ಸರ್ವ ಸನ್ನದ್ಧವಾಗಿವೆ ಎಂಬ ಎಚ್ಚರಿಕೆಯನ್ನೂ ಅಮೆರಿಕಕ್ಕೆ ಇರಾನ್‌ ನೀಡಿದೆ.

us and israeli military operations natanz nuclear facility hit says iran iaea flags risk of radiation leak

ಜಗತ್ತಿಗೆ ಯುರೇನಿಯಂ ಏಕೆ ಮುಖ್ಯ?
ಯುರೇನಿಯಂನಲ್ಲಿ ವಿಕಿರಣಶೀಲ ಗುಣ ಅಪಾರವಿರುವುದರಿಂದ ಇದನ್ನು ಹೆಚ್ಚಾಗಿ ಪರಮಾಣು ಶಕ್ತಿಯ ಉತ್ಪಾದನೆಗೆ ಬಳಸಲಾಗುತ್ತದೆ. ಇದರಿಂದ ಪರಮಾಣು ವಿದ್ಯುತ್ತನ್ನೂ ತಯಾರಿಸಬಹುದು. ಇದಲ್ಲದೆ, ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆ, ವೈದ್ಯಕೀಯ ಕ್ಷೇತ್ರಗಳಲ್ಲೂ ಬಳಸಲಾಗುತ್ತದೆ. ಅಮೆರಿಕ ಹಾಗೂ ಯುರೋಪ್‌ನ ಪರಮಾಣು ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ಕಚ್ಚಾ ಯುರೇನಿಯಂ, ನೈಜರ್‌ನಿಂದಲೇ ಪೂರೈಕೆಯಾಗುತ್ತಿದೆ. ಒಂದು ವೇಳೆ ಯುರೇನಿಯಂ ಪೂರೈಕೆ ನಿಂತರೆ… ಇದರ ಮೊದಲ ಪರಿಣಾಮ ವಿದ್ಯುತ್‌ ಮೇಲೆ ಆಗಲಿದೆ. ವಿದ್ಯುತ್‌ ಉತ್ಪಾದನೆ ನಿಂತರೆ, ಹಲವು ಕಾಮಗಾರಿಗಳು ಸ್ಥಗಿತಗೊಳ್ಳುತ್ತವೆ. ನಿಂತ ಕಾರ್ಯಗಳನ್ನು ಮುಂದುವರಿಸಲು ಪುನಃ ಮರ, ಕಲ್ಲಿದ್ದಲು ಮುಂತಾದ ಪಳೆಯುಳಿಕೆ ಇಂಧನಗಳ ಮೊರೆ ಹೋಗಬೇಕಾಗುತ್ತದೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗಲಿದೆ. ದೇಶಗಳ ನಡುವಿನ ಸಂಬಂಧಗಳ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ. ಪರಮಾಣು ಶಸ್ತ್ರಾಸ್ತ್ರಗಳ ಕ್ರೋಢೀಕರಣದಲ್ಲಿ ಜಗತ್ತು ಪೈಪೋಟಿಗೆ ಬಿದ್ದಿರುವ ಕಾರಣ ಈ ಸ್ಪರ್ಧೆಯಲ್ಲಿ ಹಿಂದುಳಿಯಲು ಶ್ರೀಮಂತ ರಾಷ್ಟ್ರಗಳು ಬಯಸುವುದಿಲ್ಲ.

ಯುರೇನಿಯಂ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಎಷ್ಟು?
ವರ್ಲ್ಡ್ ‌ನ್ಯೂಕ್ಲಿಯರ್ ಯೂನಿಯನ್ ಹೇಳುವಂತೆ 1 ತುಂಡು ಯುರೇನಿಯಂ 88 ಟನ್ ಕಲ್ಲಿದ್ದಲಿಗೆ ಸಮನಾಗಿ ವಿದ್ಯುತ್ ಉತ್ಪಾದಿಸುತ್ತದೆ. ನೈಸರ್ಗಿಕ ಯುರೇನಿಯಂ ಗಮನಾರ್ಹ ಪ್ರಮಾಣದ ವಿದ್ಯುತ್ ಉತ್ಪಾದಿಸಬಹುದು. 1 kg ಯುರೇನಿಯಂ 44,000 KWH ವಿದ್ಯುತ್ ಉತ್ಪಾದಿಸುತ್ತದೆ. ಆದ್ರೆ ಕಲ್ಲಿದ್ದಲಿನಿಂದ ಇಷ್ಟೊಂದು ವಿದ್ಯುತ್ ಉತ್ಪಾದಿಸಲು ಸಾವಿರಾರು ಟನ್ ತೈಲ ಅನಿಲ ಬೇಕಾಗುತ್ತದೆ. ಆದ್ದರಿಂದ ವಿಶ್ವಾದ್ಯಂತ ರಾಷ್ಟ್ರಗಳಿಂದು ಯುರೇನಿಯಂಗೆ ಹೆಚ್ಚು ಮಹತ್ವ ನೀಡುತ್ತವೆ.

TAGGED:donald trumpIRGCMojtaba KhameneiuraniumUS IranUS Militaryಅಮೆರಿಕಅಮೆರಿಕ ಇರಾನ್‌ ಯುದ್ಧಇರಾನ್ಡೊನಾಲ್ಟ್ ಟ್ರಂಪ್ಮೊಜ್ತಬಾ ಖಮೇನಿಯುರೇನಿಯಂ
Share This Article
Facebook Whatsapp Whatsapp Telegram

Cinema news

Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema

You Might Also Like

Bidar Food Poison
Bidar

ಫುಡ್ ಪಾಯಿಸನ್ ಆಗಿ 40ಕ್ಕೂ ಅಧಿಕ ಮಂದಿ ಅಸ್ವಸ್ಥ

Public TV
By Public TV
7 minutes ago
Manipur Home Bomb Attack
Crime

ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ – ಇಬ್ಬರು ಮಕ್ಕಳು ದುರ್ಮರಣ, ತಾಯಿಗೆ ಗಾಯ

Public TV
By Public TV
12 minutes ago
DK Suresh
Bengaluru City

ಡಿಕೆಶಿ ಸಿಎಂ ಆಗಬೇಕೆಂಬ ಆಸೆಯಿದೆ, ಇವತ್ತೇ ಆಗ್ತಾರೆ ಅಂತ ಹೇಳಿದ್ನಾ?: ಡಿಕೆಸು ತಿರುಗೇಟು

Public TV
By Public TV
14 minutes ago
2nd PUC Exam
Bagalkot

ಏಪ್ರಿಲ್‌ 9ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಪ್ರಕಟ

Public TV
By Public TV
26 minutes ago
Chikkamagaluru Suicide 2
Chikkamagaluru

ಶಿವಮೊಗ್ಗದಲ್ಲಿ ನರ್ಸ್ ಆಗಿದ್ದ ಕಾಫಿನಾಡ ಮಹಿಳೆ ಹೊಳೆಗೆ ಹಾರಿ ಆತ್ಮಹತ್ಯೆ

Public TV
By Public TV
39 minutes ago
northrop b 2 spirit stealth bomber 1
Latest

ಇರಾನ್‌ನ ಹಿಟ್‌ ಲಿಸ್ಟ್‌ ಸಿದ್ಧಪಡಿಸಿದ ಅಮೆರಿಕ – ಮಧ್ಯಪ್ರಾಚ್ಯದಲ್ಲಿ ಇಂದು ರಾತ್ರಿಯೇ ರಣಭೀಕರ ಕಾಳಗ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?