ಬೆಂಗಳೂರು: ಜಾತಿಗಣತಿ (Caste Census) ಎಂದು ಈ ಸರ್ಕಾರ ಯಾಕೆ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರದ ಕ್ಯಾಬಿನೆಟ್‌ನಲ್ಲಿ ಜಾತಿಗಣತಿ ವಿಷಯ ಚರ್ಚೆ ಆಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂತರಾಜು ವರದಿ ಅಂತ ಇದೇ ಸಿದ್ದರಾಮಯ್ಯ ಭಜನೆ ಮಾಡಿದ್ದರು. ಕುಮಾರಸ್ವಾಮಿ ವರದಿ ಸ್ವೀಕಾರ ಮಾಡಿಲ್ಲ ಅಂತ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇವರು ಅಧಿಕಾರಕ್ಕೆ ಬಂದು ಎಷ್ಟು ವರ್ಷ ಆಯ್ತು? ಒಂದೂವರೆ ವರ್ಷದ ಮೇಲೆ ಆಯಿತು. ಕಾಂತರಾಜು ವರದಿ ಇಟ್ಟುಕೊಂಡು ಏನು ದಿನ ಬೆಳಗುತ್ತಿದ್ದಾರಾ ಗಂಧದ ಕಡ್ಡಿ ಇಟ್ಟುಕೊಂಡು? ಜಾತಿಗಣತಿ ಬಿಡುಗಡೆ ಮಾಡಲು ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 3 ತಿಂಗಳ ಒಳಗೆ ಒಳಮೀಸಲಾತಿ ಜಾರಿಗೆ ಕ್ರಮ: ಸಿದ್ದರಾಮಯ್ಯ
ಕಾಂತರಾಜು ವರದಿ ಮತ್ತು ಜಯಪ್ರಕಾಶ್ ಹೆಗ್ಡೆ ವರದಿ ಎರಡು ಸ್ವೀಕಾರ ಮಾಡಿ ಎಷ್ಟು ದಿನ ಆಯಿತು. ಇನ್ನೂ ಅದನ್ನು ಇಟ್ಟುಕೊಂಡು ಏನು ಮಾಡುತ್ತಿದ್ದೀರಾ? ದೊಡ್ಡ ಮೇಧಾವಿಗಳು ಎರಡು ವರದಿ ಕೊಟ್ಟಿದ್ದಾರೆ. ಇನ್ನು ಯಾಕೆ ವರದಿ ಬಿಡುಗಡೆ ಮಾಡಿಲ್ಲ? ಸಿದ್ದರಾಮಯ್ಯ ನನ್ನ ಮೇಲೆ ಆಪಾದನೆ ಮಾಡುತ್ತಿದ್ದರು. ಸಿದ್ದರಾಮಯ್ಯ ಎರಡು ವರದಿ ಸ್ವೀಕಾರ ಮಾಡಿದ್ದಾರೆ. ಎರಡು ವರದಿ ಇದೆ. ಆದರೂ ನಾಳೆ ಇಡುತ್ತೇನೆ, ನಾಡಿದ್ದು ಕ್ಯಾಬಿನೆಟ್‌ನಲ್ಲಿ ಇಡುತ್ತೇನೆ ಎಂದು ಚರ್ಚೆ ನಡೆಯುತ್ತಿದೆ. ಉಪಸಮಿತಿ ಮಾಡುತ್ತೇನೆ ಎನ್ನುತ್ತಿದ್ದಾರೆ. ಇಂತಹ ಸಬೂಬು ಹೇಳಿ ಎಷ್ಟು ದಿನ ಹೋಗ್ತೀರಾ? ಚುನಾವಣೆ ಘೋಷಣೆ ಆಗಿದ್ದು ಈಗ. ಲೋಕಸಭೆ ಚುನಾವಣೆ ಮುಂಚೆ ವರದಿ ಸ್ವೀಕಾರ ಮಾಡಿದ್ದೀರಿ. ಯಾಕೆ ಬಿಡುಗಡೆ ಮಾಡಲಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಯಾರನ್ನೋ ಓಲೈಸಲು ಹೋದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ರಾಜ್ಯ ಸರ್ಕಾರಕ್ಕೆ ಹೆಚ್‌ಡಿಕೆ ಎಚ್ಚರಿಕೆ