ಬೆಂಗಳೂರು: ಸಿಎಂ ಬದಲಾವಣೆ ವಿಚಾರದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿ ಆಗುತ್ತಿದೆ, ನಿರ್ಧಾರ ಮಾಡೋದು ಹೈಕಮಾಂಡ್ ಏನು ಇಲ್ಲ ಎಂದು ಹೈಕಮಾಂಡ್ ಹೇಳಿದ ಮೇಲೆ ಏಕೆ ಗೊಂದಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ನಾವು ಕನ್ಫ್ಯೂಶನ್‌ನಲ್ಲಿದ್ದೇವೆ. ಬೇರೆ ಬೇರೆ ಕೆಲಸಗಳಿಗಾಗಿ ಭೇಟಿ ಮಾಡಬಹುದು. ಶಾಸಕರು ಮೊದಲಿಂದಲೂ ಹೇಳಿಕೆ ಕೊಡುತ್ತಾರೆ. ಎರಡು ವರ್ಷಗಳಿಂದ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ. ಇನ್ನೂ ಮೂರು ವರ್ಷ ಹೇಳಿಕೆ ಕೊಡುತ್ತಾ ಇರುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಕಾಡಾನೆ; 2 ಗಂಟೆ ನಿಂತ ರೈಲು – Video ನೋಡಿ..
ಒಂದು ಮನೆಯಲ್ಲಿ ಚರ್ಚೆ ಇದ್ದೇ ಇರುತ್ತದೆ. ನಮ್ಮ ಜಗಳ ನಮ್ಮನ್ನು ಬಿಟ್ಟುಬಿಡಿ. ಕೆಲವರು ಬದಲಾಗಬೇಕು ಅಂತಾರೆ, ಕೆಲವರು ಬದಲಾವಣೆ ಬೇಡ ಅಂತಾರೆ. ಸಿಎಂ, ಡಿಸಿಎಂ ಬರ್ತಾರೆ ಅವರನ್ನ ಕೇಳಿ, ಅವರೇ ಉತ್ತರ ಕೊಡಬೇಕು. ಜನರಲ್ ಸೆಕ್ರೆಟರಿ, ಡಿಸಿಎಂ, ಸಿಎಂ ಸ್ಪಷ್ಟನೆ ಕೊಟ್ಟಿದ್ದಾರೆ. ಅವರ ಅಭಿಪ್ರಾಯ ಹೇಳಲು ಸ್ವತಂತ್ರರಿದ್ದಾರೆ. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಇರುತ್ತದೆ. ನೀವು ಹೇಗೆ ಅರ್ಥ ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಮಾರ್ಮಿಕವಾಗಿ ಹೇಳಿಕೆ ಕೊಟ್ಟರು. ಇದನ್ನೂ ಓದಿ: ನವದೆಹಲಿಯಲ್ಲಿ MSTC ಕಾರ್ಪೊರೇಟ್ ಕಚೇರಿ ಉದ್ಘಾಟಿಸಿದ ಹೆಚ್‌ಡಿ ಕುಮಾರಸ್ವಾಮಿ
ಸಿದ್ದರಾಮಯ್ಯಗೆ (Siddaramaiah) ರಾಷ್ಟ್ರದ ಒಬಿಸಿ ನಾಯಕತ್ವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಅನುಭವ ಇದೆ. ರಾಷ್ಟ್ರಮಟ್ಟದಲ್ಲಿ ಅವರ ಅನುಭವ ಬಳಸಿಕೊಳ್ಳಬಹುದು. ಹಾಗಂತ ಮುಖ್ಯಮಂತ್ರಿ ಸ್ಥಾನ ಬಿಟ್ಟು ಹೋಗ್ತಾರೆ ಅಂತಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಶಾಪಿಂಗ್ ವಿಚಾರಕ್ಕೆ ಗಲಾಟೆ; ಪತ್ನಿ ಕುತ್ತಿಗೆ ತುಳಿದು ಕೊಲೆ – ಮಗಳ ಸನ್ನೆಯಿಂದ ಆರೋಪಿ ಲಾಕ್!