– ಮೋದಿ ಹೇಳೋದನ್ನ ನಂಬೋಕೆ ಆಗ್ತಿಲ್ಲ ಎಂದ ಸಚಿವ
ಬೆಂಗಳೂರು: ಬಿಜೆಪಿಯವರು (BJP) ತಿರಂಗಾ ಯಾತ್ರೆ ಮಾಡೋ ಬದಲು ಪಾಕಿಸ್ತಾನ ವಿರುದ್ಧ ಕದನ ವಿರಾಮ ಯಾಕೆ ಘೋಷಣೆ ಮಾಡಿದ್ರು? ಅಂತ ಪ್ರಧಾನಿ ನರೇಂದ್ರ ಮೋದಿಯನ್ನ (Narendra Modi) ಕೇಳಲಿ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಆಗ್ರಹಿಸಿದ್ದಾರೆ.
ನಾಳೆಯಿಂದ (ಮೇ 15) ಬಿಜೆಪಿ ತಿರಂಗಾ ಯಾತ್ರೆ ನಡೆಸುತ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಿರಂಗಾ ಯಾತ್ರೆ ಮಾಡಲಿ. ಆದರೆ ಮೊದಲು ಬಿಜೆಪಿ ಅವರು ಏನ್ ಆಗಿದೆ ಹೇಳಲಿ. ಪಾಕಿಸ್ತಾನದ ಮೇಲೆ ಯುದ್ಧದ ಬಗ್ಗೆ ಮೊದಲು ಮಾಹಿತಿ ಕೊಡಿ. ಕದನ ವಿರಾಮ (Ceasefire) ಯಾಕೆ ಆಯ್ತು ಗೊತ್ತಿಲ್ಲ. ಟ್ರಂಪ್ (Donald Trump) ಯಾಕೆ ಮಧ್ಯಸ್ಥಿಕೆ ವಹಿಸಿದ್ರು ಕೇಂದ್ರ ಹೇಳಲಿ. ಕದನ ವಿರಾಮ ಯಾಕೆ ಆಯ್ತು? ಎಷ್ಟು ದಿನಕ್ಕೆ ಇದು ಇರುತ್ತೆ ಮೊದಲು ಹೇಳಲಿ. ರಾಜಕೀಯ ಲಾಭಕ್ಕೆ ತಿರಂಗಾ ಯಾತ್ರೆ ಮಾಡೋದಲ್ಲ. ಪ್ರಧಾನಿಗಳು ಇದಕ್ಕೆ ಮೊದಲು ಉತ್ತರ ಕೊಡಲಿ ಅಂತ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ್ದಾರೆ.
ಮೋದಿಗೆ ಭಯ ಅನ್ನಿಸುತ್ತೆ:
11 ವರ್ಷಗಳಲ್ಲಿ ಪ್ರಧಾನಿಗಳು ಒಂದೇ ಒಂದು ಸುದ್ದಿಗೋಷ್ಠಿಯನ್ನೂ ಕರೆದಿಲ್ಲ. ಮಾಧ್ಯಮಗಳನ್ನ ತಿರಸ್ಕಾರ ಮಾಡಿ ಇಟ್ಟಿದ್ದಾರೆ. ಮಾಧ್ಯಮ ಅಂದರೆ ಕೇರ್ ಮಾಡ್ತಿಲ್ಲ. ಮೋದಿ ಚುನಾವಣೆ ಭಾಷಣ ಮಾಡೋಕೆ ರೆಡಿ, ಮನ್ ಕೀ ಬಾತ್ ಮಾಡೋಕೆ ರೆಡಿ. ಮೊದಲು ಜನರಿಗೆ ಉತ್ತರ ಕೊಡಿ. ಸುಮ್ಮನೆ ಭಾಷಣ ಬಿಗಿಯೋದಲ್ಲ. ಮೋದಿ ಹೇಳೋದು ಯಾವುದು ನಂಬೋಕೆ ಆಗ್ತಿಲ್ಲ. ಯಾವುದಕ್ಕೂ ಸಾಕ್ಷಿಗಳಿಲ್ಲ. ಟ್ರಂಪ್ ಅವರು ಹೇಳಿದ ಮೇಲೆ ಮೋದಿ ಅವರು ಇಲ್ಲ ಅಂತ ಹೇಳಬೇಕಿತ್ತು. ಮೋದಿಗೆ ಭಯ ಅನ್ನಿಸುತ್ತೆ ಅದಕ್ಕೆ ಬಗ್ಗೆ ಮಾತಾಡಿಲ್ಲ. ಇಂದಿರಾ ಗಾಂಧಿ – ಮೋದಿ ಅವರಿಗೂ ಇರೋ ವ್ಯತ್ಯಾಸ ಇಷ್ಟೆ ಅಂತ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿಯದ್ದು ಬರೀ ಮಾತು:
ರಾಜಕೀಯ ಗಿಮಿಕ್ ಮಾಡಬಾರದು. ಜನರನ್ನ ದಾರಿ ತಪ್ಪಿಸಬಾರದು. ಮುಂಬೈ ಅಟ್ಯಾಕ್ ಅದಾಗ ಮನಮೋಹನ್ ಸಿಂಗ್ ಬಂದು ಮಾತಾಡಿದ್ರು. ಇವರು ಕೇವಲ ಮಾತು ಅಷ್ಟೇ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು.