ಐರೋಪ್ಯ ರಾಷ್ಟ್ರಗಳೊಟ್ಟಿಗೆ ವ್ಯಾಪಾರ ವಹಿವಾಟಿಗೆ ಹೆಬ್ಬಾಗಿಲಾಗಿರುವ ಚಾಬಹಾರ್ ಬಂದರಿನ (Chabahar Port) ನಿರ್ವಹಣೆ ವಿಚಾರ 20 ವರ್ಷಗಳ ನಂತರ ಮತ್ತೆ ಮುನ್ನಲೆಗೆ ಬಂದಿದೆ. ಇರಾನ್‌ನೊಂದಿಗೆ ಭಾರತ ನಡೆಸಿದ ಮಾತುಕತೆ ಫಲಪ್ರದವಾಗಿದೆ ಎಂದು ಹೇಳಲಾಗಿದೆ. ಆದರೆ ಭಾರತ ಮತ್ತು ಇರಾನ್ ನಡುವಿನ ಚಾಬಹಾರ್ ಬಂದರು ಒಪ್ಪಂದಕ್ಕೆ ಅಮೆರಿಕ ಅಡ್ಡಗಾಲು ಇಟ್ಟಿದೆ. ಯಾವುದೇ ಕಾರಣಕ್ಕೂ ಇರಾನ್‌ನೊಂದಿಗೆ(Iran) ಭಾರತ ಒಪ್ಪಂದ ಮಾಡಿಕೊಳ್ಳಬಾರದು. ಹಾಗೇನಾದರು ಮಾಡಿದರೆ ನಿರ್ಬಂಧಗನ್ನು ಹೇರಬೇಕಾಗುತ್ತದೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಚಾಬಹಾರ್ ಬಂದರು ಮತ್ತು ಅದರಿಂದ ಭಾರತಕ್ಕಾಗುವ ಅನುಕೂಲಗಳ ಬಗ್ಗೆ ಚರ್ಚೆ ಶುರುವಾಗಿದೆ.
ಅಷ್ಟಕ್ಕೂ ಏನಿದು ಚಾಬಹಾರ್ ಬಂದರು? ಹಿನ್ನೆಲೆ ಏನು? ಇರಾನ್‌ನೊಂದಿಗೆ ಭಾರತದ (India) ಒಪ್ಪಂದವೇನು? ಭಾರತಕ್ಕೆ ಬಂದರು ಏಕೆ ಮುಖ್ಯ? ಇದನ್ನೂ ಓದಿ: ಚಂದ್ರನ ಮೇಲೆ ನಾಸಾ ರೈಲು – ಏನಿದು ಹೊಸ ಪ್ರಯೋಗ?
Advertisement
Advertisement
ಬಂದರು ಒಪ್ಪಂದಕ್ಕೆ ವಾಜಪೇಯಿ ಅಡಿಪಾಯ
ಇರಾನ್‌ನೊಂದಿಗೆ ಚಾಬಹಾರ್ ಬಂದರು ಒಪ್ಪಂದಕ್ಕೆ ಅಡಿಪಾಯ ಹಾಕಿದವರು ಭಾರತದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಇರಾನ್‌ನ ಚಾಬಹಾರ್ ಬಂದರಿನ ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧ ಎರಡೂ ಸರ್ಕಾರಗಳ ನಡುವೆ 2003 ರಲ್ಲಿ ಒಪ್ಪಂದವಾಗುತ್ತದೆ. ಈ ಒಪ್ಪಂದ ಭಾರತೀಯ ಆರ್ಥಿಕತೆ ಮತ್ತು ಮಧ್ಯಪ್ರಾಚ್ಯ ಮಾರುಕಟ್ಟೆಯ ಪ್ರವೇಶಕ್ಕೆ ಭರವಸೆಯ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ.
Advertisement
ಏನಿದು ಚಾಬಹಾರ್ ಒಪ್ಪಂದ?
ಚಾಬಹಾರ್ ಬಂದರು ಇರಾನ್‌ನ ನೈಋತ್ಯ ಕರಾವಳಿಯಲ್ಲಿದೆ. ಪಾಕಿಸ್ತಾನದ ಗ್ವಾದರ್ ಬಂದರಿನಿಂದ 72 ಕಿಲೋಮೀಟರ್ ದೂರದಲ್ಲಿದೆ. ಈ ಬಂದರು ಭಾರತದ ಪಶ್ಚಿಮ ಕರಾವಳಿ ಮತ್ತು ಇರಾನ್ ಅನ್ನು ಸಂಪರ್ಕಿಸುತ್ತದೆ. ವೇಗವಾದ ಕಡಲ ವ್ಯಾಪಾರಕ್ಕಾಗಿ ಸಾಗಣೆ ಮಾರ್ಗವನ್ನು ಇದು ತೆರೆಯುತ್ತದೆ. ಚಾಬಹಾರ್ ಬಂದರು ಭಾರತ, ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ಸಂಪರ್ಕಕ್ಕೆ ಸೇತುವೆ ಇದ್ದಂತೆ. ಕೊಲ್ಲಿಯಲ್ಲಿ ಭಾರತೀಯ ಸರಕುಗಳಿಗೆ ಮಾರುಕಟ್ಟೆಯನ್ನು ತೆರೆಯುತ್ತದೆ. ಈ ಎಲ್ಲಾ ಅನುಕೂಲಗಳ ಉದ್ದೇಶದಿಂದ ಇರಾನ್‌ನೊಂದಿಗೆ ಭಾರತ 2003 ರಲ್ಲಿ ಒಪ್ಪಂದ ಮಾಡಿಕೊಂಡಿತು.
Advertisement
ಬಂದರು ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧ ಭಾರತ ಮತ್ತು ಇರಾನ್ ಸರ್ಕಾರಗಳು 2003, 2015 ಮತ್ತು 2017 ರಲ್ಲಿ ಒಪ್ಪಂದ ಮಾಡಿಕೊಂಡವು. 2018 ರಿಂದ ಈ ಬಂದರನ್ನು ಭಾರತವೇ ನಿರ್ವಹಣೆ ಮಾಡುತ್ತಿತ್ತು. ಈಗ ಬಂದರು ನಿರ್ವಹಣೆ ಒಪ್ಪಂದವನ್ನು 10 ವರ್ಷಗಳಿಗೆ ವಿಸ್ತರಣೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ನಿಮ್ಮ ಡಿಜಿಟಲ್ ಆರೋಗ್ಯ ಹೇಗಿದೆ? – ಮಿತಿಮೀರಿದ ಎಐ ಬಳಕೆ ತಂದೊಡ್ಡುವ ಅಪಾಯಗಳೇನು? – ತಂತ್ರಜ್ಞರ ಕಳವಳ ಏನು?
ಒಪ್ಪಂದದಿಂದ ಭಾರತಕ್ಕೆ ಲಾಭವೇನು?
ಭಾರತವು ಈಗ ಐರೋಗ್ಯ ದೇಶಗಳೊಡನೆ ತನ್ನ ವ್ಯಾಪಾರ ವಹಿವಾಟನ್ನು ಸಮುದ್ರ ಮಾರ್ಗದ ಮೂಲಕವೇ ನಡೆಸುತ್ತದೆ. ಭಾರತದ ಸರಕುಗಳು ಕೆಂಪು ಸಮುದ್ರದ ಮೂಲಕವೇ ಯುರೋಪ್ ದೇಶಗಳನ್ನು ತಲುಪುತ್ತದೆ. ಇದು ದೀರ್ಘವಾಗಿದ್ದು, ಸುಮಾರು 15,000 ದಿಂದ 15,500 ಕಿಮೀ ನಷ್ಟು ದೂರದ ಮಾರ್ಗವಾಗಿದೆ. ಒಂದು ವೇಳೆ ಚಾಬಹಾರ್ ಒಪ್ಪಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದರೆ, ಐರೋಪ್ಯ ದೇಶಗಳಿಗೆ ಭಾರತದ ಸರಕು ಸಾಗಣೆಗೆ ತುಂಬಾ ಅನುಕೂಲ ಆಗಲಿದೆ.
ಚಾಬಹಾರ್ ಒಪ್ಪಂದದ ಮೂಲಕ ಭಾರತವು ‘ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್’ನ ಭಾಗವಾದರೆ, ಸರಕು ಸಾಗಣೆ ಮಾರ್ಗವನ್ನು 7,200 ಕಿಮೀಗೆ ಇಳಿಸಬಹುದು. ಇದರಿಂದ ಸರಕುಗಳ ಸಾಗಣೆ ವೇಗವಾಗಿ ಆಗುತ್ತದೆ. ಜೊತೆಗೆ ಭಾರತಕ್ಕೆ ಸಾಗಣೆ ವೆಚ್ಚವೂ ಕಡಿಮೆಯಾಗಲಿದೆ. ಈ ಕಾರಣದಿಂದಾಗಿಯೇ ಭಾರತಕ್ಕೆ ಒಪ್ಪಂದ ತುಂಬಾ ಅಗತ್ಯವಾಗಿದೆ.
ಚೀನಾ ಪ್ರಾಬಲ್ಯಕ್ಕೆ ಬ್ರೇಕ್?
ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ದೇಶಗಳೊಡನೆಯೂ ಭಾರತ ವ್ಯಾಪಾರ ವಹಿವಾಟು ನಡೆಸಲು ಸಹಕಾರಿಯಾಗಲಿದೆ. ಅರಬ್ಬಿ ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯ ಹಲವು ಬಂದರುಗಳನ್ನು ಚೀನಾ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆ ಮೂಲಕ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ. ಈ ಸನ್ನಿವೇಶದಲ್ಲಿ ಚಾಬಹಾರ್ ಬಂದರು ಭಾರತದ ನಿಯಂತ್ರಣಕ್ಕೆ ಬಂದರೆ, ಈ ಪ್ರದೇಶದಲ್ಲಿ ಚೀನಾ ಪ್ರಾಬಲ್ಯಕ್ಕೆ ತಡೆ ಒಡ್ಡಿದಂತೆ ಆಗುತ್ತದೆ.
ಏನಿದು ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್?
ಉಕ್ರೇನ್ ಹಾಗೂ ಇಸ್ರೇಲ್ ಜೊತೆಗಿನ ಸಂಘರ್ಷದಿಂದಾಗಿ ರಷ್ಯಾ ಮತ್ತು ಇರಾನ್ ಅಮೆರಿಕದ ಮಿತ್ರ ರಾಷ್ಟçಗಳ ಆರ್ಥಿಕ ದಿಗ್ಬಂಧನಕ್ಕೆ ಗುರಿಯಾಗಿವೆ. ಪರಿಣಾಮವಾಗಿ ವಿಶ್ವದ ಬೇರೆ ದೇಶಗಳೊಂದಿಗೆ ಇವುಗಳ ವ್ಯಾಪಾರ-ವಾಣಿಜ್ಯ ವಹಿವಾಟು ಸರಿಯಾಗಿ ನಡೆಯುತ್ತಿಲ್ಲ. ಆರ್ಥಿಕ ದಿಗ್ಬಂಧನದಿಂದ ಇರಾನ್ ಮತ್ತು ರಷ್ಯಾಗೆ ಭೂಮಾರ್ಗ, ಜಲಮಾರ್ಗ ಮುಚ್ಚಿಹೋಗಿದೆ. ಇದಕ್ಕೆ ಈ ಎರಡೂ ದೇಶಗಳು ಕಂಡುಕೊಂಡ ಪರಿಹಾರವೇ ‘ಅಂತರರಾಷ್ಟ್ರೀಯ ಉತ್ತರ ಮತ್ತು ದಕ್ಷಿಣ ಸಾರಿಗೆ ಕಾರಿಡಾರ್’. ಇದು ರೈಲು, ರಸ್ತೆ ಮತ್ತು ಸಮುದ್ರ ಮಾರ್ಗವನ್ನೂ ಒಳಗೊಂಡಿದೆ. ಇದರಿಂದ ಭಾರತಕ್ಕೆ ತುಂಬಾ ಅನುಕೂಲವಾಗಲಿದೆ. ಚಾಬಹಾರ್ ಬಂದರಿನ ಮೂಲಕ ಈ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಬಹುದು. ಭಾರತ ಯೂರೋಪ್ ದೇಶಗಳೊಂದಿಗೆ ರಫ್ತು-ಆಮದು ವಹಿವಾಟನ್ನು ಈ ಕಾರಿಡಾರ್ ಮೂಲಕ ನಡೆಸಿದರೆ ಹಲವು ಲಾಭಗಳಿವೆ. ಇದನ್ನೂ ಓದಿ: ಅಳಿವಿನಂಚಿಗೆ ಸಾಗುತ್ತಿದ್ಯಾ ಭೂಮಿ? – ಕೆಂಡದಂತಾದ ಧರಣಿಗೆ ‘ರೆಡ್ ಅಲರ್ಟ್’; ಹವಾಮಾನ ತಜ್ಞರ ಆತಂಕ!
ಕಚ್ಚಾತೈಲ ಬೆಲೆ ಇಳಿಕೆ?
ರಷ್ಯಾದಿಂದ ಭಾರತ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಕೂಡ ಕೆಂಪು ಸಮುದ್ರ ಮಾರ್ಗದ ಮೂಲಕವೇ ಬರುತ್ತಿದೆ. ಒಂದು ವೇಳೆ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಕಾರಿಡಾರ್ ಮೂಲಕ ತರಿಸಿಕೊಂಡರೆ ಭಾರತಕ್ಕೆ ಸಾಗಣೆ ವೆಚ್ಚ ಕಡಿಮೆಯಾಗುತ್ತದೆ. ಇದರಿಂದ ಕಚ್ಚಾತೈಲ ಬೆಲೆಯೂ ಕಡಿಮೆಯಾಗಬಹುದು. ಕಡಿಮೆ ಬೆಲೆಗೆ ಸಿಗುವ ಕಚ್ಚಾತೈಲದ ಮೇಲಿನ ಲಾಭವನ್ನು ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ವರ್ಗಾಯಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ಬೆಲೆಯಲ್ಲೂ ಇಳಿಕೆಯಾಗಲಿದೆ. ಇದರಿಂದ ಜನಸಾಮಾನ್ಯರಿಗೂ ಅನುಕೂಲ ಆಗಲಿದೆ.
ಅಮೆರಿಕ ಅಡ್ಡಗಾಲೇಕೆ?
ಇರಾನ್ ಮತ್ತು ಭಾರತ ನಡುವಿನ ಚಾಬಹಾರ್ ಒಪ್ಪಂದಕ್ಕೆ ಅಮೆರಿಕ ಸಿಡಿಮಿಡಿಗೊಂಡಿದೆ. ಒಂದು ವೇಳೆ ಭಾರತ ಈ ಒಪ್ಪಂದ ಮಾಡಿಕೊಂಡರೆ, ಆರ್ಥಿಕ ದಿಗ್ಬಂಧನ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಅಮೆರಿಕದ ಸಿಟ್ಟಿಗೂ ಹಲವು ಕಾರಣಗಳಿವೆ.
1979 ರಲ್ಲಿ, ಟೆಹ್ರಾನ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯನ್ನು ಅತಿಕ್ರಮಿಸುವ ಪ್ರಯತ್ನದ ನಂತರ ಇರಾನ್ ಅಮೆರಿಕನ್ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿತು. ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಸಂಧಾನದ ಪ್ರಯತ್ನಗಳ ಹೊರತಾಗಿಯೂ, ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಂಡಿತು. ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಲು ಆಹ್ವಾನಿಸಲಾಯಿತು. ಆದರೆ 1980 ರ ಹೊತ್ತಿಗೆ ಯುನೈಟೆಡ್ ಸ್ಟೇಟ್ಸ್ ಅಧಿಕೃತವಾಗಿ ಇರಾನ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು. ಜೊತೆಗೆ ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ಕಾರಣದಿಂದಲೂ ಹಲವು ವರ್ಷಗಳಿಂದ ಅಮೆರಿಕದ ಆರ್ಥಿಕ ದಿಗ್ಬಂಧನಕ್ಕೆ ಒಳಗಾಗಿದೆ.
ಈಗ ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳ ಬೆಂಬಲಿತ ಇಸ್ರೇಲ್ ಮೇಲೆಯೂ ಇರಾನ್ ಯುದ್ಧ ನಡೆಸುತ್ತಿದೆ. ಪ್ಯಾಲೆಸ್ತೀನ್ ಕಾರಣಕ್ಕೆ ಇಸ್ರೇನ್ ಮತ್ತು ಇರಾನ್ ಸಂಘರ್ಷಕ್ಕಿಳಿದಿವೆ. ಸಹಜವಾಗಿ ಇದು ಕೂಡ ಇರಾನ್ ವಿರುದ್ಧ ಅಮೆರಿಕ ಸಿಟ್ಟಿಗೆ ಕಾರಣವಾಗಿದೆ. ಹೀಗಾಗಿ ಅಮೆರಿಕ ಮಿತ್ರ ರಾಷ್ಟçಗಳು ಇರಾನ್ ಮೇಲೆ ದಿಗ್ಬಂಧನ ಹೇರಿವೆ. ಇತ್ತ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧದ ಕಾರಣ ರಷ್ಯಾ ಮೇಲೆಯೂ ಅಮೆರಿಕ-ಐರೋಪ್ಯ ರಾಷ್ಟ್ರಗಳು ಆರ್ಥಿಕ ದಿಗ್ಬಂಧನ ಹೇರಿವೆ.
ಅಮೆರಿಕ ಎಚ್ಚರಿಕೆ ಏನು?
ಇರಾನ್ ಮತ್ತು ಭಾರತದ ಒಪ್ಪಂದದ ಕುರಿತು ತಿಳಿದಿದೆ. ಇರಾನ್ ಮೇಲೆ ಹೇರಿರುವ ದಿಗ್ಬಂಧನವು ಮುಂದುವರಿಯಲಿದೆ. ಯಾವುದೇ ದೇಶವು ಇರಾನ್‌ನೊಂದಿಗೆ ಒಪ್ಪಂದಕ್ಕೆ ಮುಂದಾದರೆ, ಆ ದೇಶ ಕೂಡ ಆರ್ಥಿಕ ದಿಗ್ಬಂಧನ ಎದುರಿಸುವುದಕ್ಕೆ ಸಿದ್ಧವಾಗಬೇಕು. ಹಿಂದೆಯೂ ಅದನ್ನೇ ಹೇಳಿದ್ದೇವೆ. ಈಗಲೂ ಆ ನಿಲುವಿಗೆ ಬದ್ಧವಾಗಿದ್ದೇವೆ ಎಂದು ಭಾರತಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಫಸ್ಟ್ ಟೈಂ ಸೌದಿಯಲ್ಲಿ ನಡೆಯಿತು ಸ್ವಿಮ್ ಸೂಟ್ ಫ್ಯಾಶನ್ ಶೋ!
ಭಾರತದ ಪ್ರತಿಕ್ರಿಯೆ ಏನು?
ಬಂದರು ನಿರ್ಮಾಣದಿಂದಾಗುವ ಲಾಭದ ಕುರಿತು ಜಗತ್ತಿಗೆ ನಾವು ಮನವರಿಕೆ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಆದ್ದರಿಂದ ಭಾರತವು ಈ ಬಂದರಿನಿಂದಾಗುವ ಅನುಕೂಲಗಳ ಬಗ್ಗೆ ಜಗತ್ತಿಗೆ ಒತ್ತಿ ಹೇಳಲಿದೆ ಎಂದು ಭಾರತ ತನ್ನ ನಿಲುವು ಸ್ಪಷ್ಟಪಡಿಸಿದೆ.
ಆರ್ಥಿಕ ದಿಗ್ಬಂಧನದಿಂದ ಭಾರತಕ್ಕೆ ಪೆಟ್ಟು?
* ತೈಲ ಉತ್ಪಾದನಾ ದೇಶಗಳಲ್ಲಿ (ಒಪೆಕ್+) ಹಲವು ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ. ಒಂದು ವೇಳೆ ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿದರೆ ಭಾರತದ ತೈಲ ಆಮದು ಮೇಲೆ ಹೊಡೆತ ಬೀಳಲಿದೆ. ಇದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮೇಲೆ ಪರಿಣಾಮ ಉಂಟಾಗಲಿದೆ.
* ಅಮೆರಿಕ ಜೊತೆಗಿರುವ ದೇಶಗಳಿಗೂ ಭಾರತ ಮಾಡುತ್ತಿರುವ ರಫ್ತಿನ ಮೇಲೂ ಹೆಚ್ಚಿನ ಪರಿಣಾಮ ಬೀರಲಿದೆ.
* ಭಾರತವು ಅಂತರರಾಷ್ಟ್ರೀಯ ವ್ಯವಹಾರಗಳನ್ನು ಡಾಲರ್‌ನಲ್ಲಿ ನಡೆಸುತ್ತದೆ. ಆರ್ಥಿಕ ದಿಗ್ಬಂಧನವಾದರೆ, ರಫ್ತು-ಆಮದು ಹಣದ ವರ್ಗಾವಣೆಗೆ ತಾಂತ್ರಿಕ ತೊಡಕು ಎದುರಾಗಬಹುದು.