ಕೇಂದ್ರವು 16 ವರ್ಷಗಳಲ್ಲೇ ಮೊದಲ ಬಾರಿಗೆ ಜೂನ್ 12ರಂದು ಗೋಧಿ (Wheat) ಮೇಲೆ ದಾಸ್ತಾನು ಮಿತಿಯನ್ನು ಹೇರಿದೆ. ಅಕ್ರಮ ದಾಸ್ತಾನು ತಡೆಯಲು ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಏಪ್ರಿಲ್-ಜೂನ್ ತಿಂಗಳು ಗೋಧಿಗೆ ಪ್ರಮುಖ ಕೊಯ್ಲು ತಿಂಗಳಾಗಿದೆ. ದೇಶದಲ್ಲಿ ಗೋಧಿ ದಾಖಲೆಯ ಉತ್ಪಾದನೆ ಹೊಂದಿದ್ದರೂ ಇಂತಹ ಕ್ರಮಗಳನ್ನು ಏಕೆ ತೆಗೆದುಕೊಂಡಿದೆ ಎಂಬುದು ಜನತೆಯಲ್ಲಿ ಮೂಡಿರುವ ಪ್ರಶ್ನೆ.
Advertisement
Advertisement
ಇದೀಗ ಮುಂದಿನ ವರ್ಷವೇ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಸರ್ಕಾರ ದೇಶದ ಪ್ರಮುಖ ಆಹಾರ ಧಾನ್ಯವಾಗಿರುವ ಅಕ್ಕಿ ಹಾಗೂ ಗೋಧಿಯ ಹಣದುಬ್ಬರದ ಬಗ್ಗೆ ಚಿಂತಿಸುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಸಿರಿಧಾನ್ಯಗಳ ಚಿಲ್ಲರೆ ಹಣದುಬ್ಬರ 12.65% ರಷ್ಟಿತ್ತು. ಮುಂದಿನ ಬೆಳೆ ಬರುವವರೆಗೆ ಎಂದರೆ 2024ರ ಮಾರ್ಚ್ ತಿಂಗಳ ವರೆಗೆ ಗೋಧಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
Advertisement
2023-24ರಲ್ಲಿ ಗೋಧಿ ಬೇಡಿಕೆ, ಪೂರೈಕೆ ಎಷ್ಟು?
2023 ಜುಲೈಯಿಂದ 2023 ಜೂನ್ ವರೆಗೆ ದೇಶದಲ್ಲಿ ಗೋಧಿ ಉತ್ಪಾದನೆ ದಾಖಲೆಯ 112.74 ಮೆಟ್ರಿಕ್ ಟನ್‌ನಷ್ಟು ಹೊಂದಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ. ಆದರೆ ಫ್ಲೋರ್ ಮಿಲ್ಲರ್ಸ್ ಫೆಡರೇಶನ್ ಆಫ್ ಇಂಡಿಯಾ (RFMFI) ನಿಯೋಜಿಸಿದ ಖಾಸಗಿ ಸಂಸ್ಥೆ ಮಾರ್ಚ್ನಲ್ಲಿ ಅಕಾಲಿ ಮಳೆ ಹಾಗೂ ಆಲಿಕಲ್ಲು ಮಳೆಯ ಬಳಿಕ 1.35 ಮೀ.ನಷ್ಟು ಬೆಳೆ ನಷ್ಟಕ್ಕೆ ಕಾರಣವಾಗಿದ್ದು, ಉತ್ಪಾದನೆಯನ್ನು 102.89 ಮೆಟ್ರಿಕ್ ಟನ್ ಎಂದು ಅಂದಾಜಿಸಿದೆ.
Advertisement
ನೀತಿ ಆಯೋಗದ ಅಂದಾಜಿನ ಪ್ರಕಾರ 2021-22ರಲ್ಲಿ 97.12 ಮೆಟ್ರಿಕ್ ಟನ್ ಗೋಧಿ ಬಳಕೆಯಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಗೋಧಿ ಬಳಕೆ 100 ಮೆಟ್ರಿಕ್ ಟನ್ ಅನ್ನು ಮೀರಬಹುದು ಎನ್ನಲಾಗಿದೆ. ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆ (USDA) ದೇಶದ ಗೋಧಿ ಬಳಕೆಯನ್ನು 108.1 ಮೆಟ್ರಿಕ್ ಟನ್ ಎಂದು ನಿಗದಿಪಡಿಸಿದೆ. ಆದರೆ ದೇಶದಲ್ಲಿ ಹೆಚ್ಚುವರಿ ಗೋಧಿ ಇದೆಯೇ ಅಥವಾ ಕೊರತೆಯಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇದನ್ನೂ ಓದಿ: LPG Price Hike: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 7 ರೂ. ಏರಿಕೆ
ಗೋಧಿ ಬೆಲೆ:
ಪ್ಯಾನ್ ಇಂಡಿಯಾ ಸರಾಸರಿ ಮಾರುಕಟ್ಟೆಯ ಬೆಲೆ ಕ್ವಿಂಟಲ್ ಗೋಧಿಗೆ ಮೇ 15ರಂದು 2,196 ರೂ., ಮೇ 22ರಂದು 2,225 ರೂ., ಮೇ 29ರಂದು 2,277, ಜೂನ್ 5ರಂದು 2,307, ಜೂನ್ 12ರಂದು 2,295 ಹಾಗೂ ಜೂನ್ 19ರಂದು 2,310ಕ್ಕೆ ಹೆಚ್ಚಳವಾಗಿದೆ.
ಸಾಮಾನ್ಯವಾಗಿ ಬೇಡಿಕೆ ಹಾಗೂ ಪೂರೈಕೆಯ ಅಂಶದ ಮೇಲೆ ಮಾರುಕಟ್ಟೆಯಲ್ಲಿ ಬೆಲೆ ನಿಗದಿಯಾಗುತ್ತದೆ. 2022ರ ಮೇ ತಿಂಗಳಿನಲ್ಲಿ ದೇಶದಲ್ಲಿ ಗೋಧಿಯ ಸಂಗ್ರಹ ಕಡಿಮೆಯಿದ್ದು, ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಹಾಗೂ ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಧಾನ್ಯ ಹಂಚಿಕೆಯಲ್ಲಿ ಬದಲಾವಣೆಗೆ ಮುಂದಾಯಿತು. ಗೋಧಿಯ ಬದಲಿಗೆ ಅಕ್ಕಿಯನ್ನು ತೆಗೆದುಕೊಳ್ಳುವಂತೆ ಜನರಲ್ಲಿ ಕೇಳಲಾಯಿತು. ಈ ಪ್ರಕ್ರಿಯೆಯಲ್ಲಿ ತಿಂಗಳಿಗೆ 7 ಲಕ್ಷ ಟನ್ ಗೋಧಿಯನ್ನು ಹಿಂತೆಗೆದುಕೊಳ್ಳಲಾಯಿತು.
ಈ ಕ್ರಮದಿಂದ ಬೆಲೆಗಳ ಮೇಲೂ ಪರಿಣಾಮ ಬೀರಿದ್ದು, ಹೆಚ್ಚಿನ ಗ್ರಾಹಕರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವ ಬದಲು ಮುಕ್ತ ಮಾರುಕಟ್ಟೆಯಿಂದ ಧಾನ್ಯವನ್ನು ಪಡೆಯಲು ಹೆಚ್ಚು ಆದ್ಯತೆ ನೀಡಿದರು. 2022ರಲ್ಲಿ ಸುಮಾರು 1.9 ಕೋಟಿ ಟನ್ ಸಂಗ್ರಹವಿತ್ತು. ಈ ವರ್ಷ 2.62 ಕೋಟಿ ಟನ್ ಗೋಧಿ ಸಂಗ್ರಹವಿದ್ದರೂ ಆ ಮಾರುಕಟ್ಟೆ ಸ್ಪಷ್ಟತೆಯನ್ನು ತಿಳಿಸಲಾಗಿಲ್ಲ. ಇದನ್ನೂ ಓದಿ: ಸೇಬಿಗಿಂತ ಟೊಮೆಟೊ ರೇಟೇ ಜಾಸ್ತಿ!
ಕೆಲ ವಾರಗಳಿಂದ ಗೋಧಿ ಮಾರುಕಟ್ಟೆಯ ಬೆಲೆ ಹೆಚ್ಚುತ್ತಲೇ ಬಂದಿದೆ. ಇದು ಮಾರ್ಚ್ ತಿಂಗಳವರೆಗೂ ಮುಂದುವರಿಯುವ ಸಾಧ್ಯತೆಯಿದೆ.
Web Stories