– ಇಲ್ಲಿದೆ ಗೆದ್ದವರು, ಸೋತವರ ಪಟ್ಟಿ
ಯಾವುದೇ ಮಹತ್ವದ ಟೂರ್ನಿ ಒಂದು ಮಾದರಿಯಲ್ಲಿ ನಡೆಯಬೇಕಾದ್ರೆ ಅದರ ಸ್ವರೂಪ ಮೊದಲೇ ನಿರ್ಧಾರವಾಗಿರುತ್ತೆ.. ಆದ್ರೆ ಏಷ್ಯಾ ಕಪ್ (Asia Cup 2025) ಮಾತ್ರ ಹಾಗಲ್ಲ. 2022ರಲ್ಲಿ ನಡೆದ ಏಷ್ಯಾ ಕಪ್ ಟಿ20 ಮಾದರಿಯಲ್ಲಿ ನಡೆದಿತ್ತು. 2023ರಲ್ಲಿ ಏಕದಿನ ಮಾದರಿಯಲ್ಲಿ ನಡೆಯಿತು. ಇದೀಗ ಮತ್ತೆ ಟಿ20 ಮಾದರಿಗೆ ಬದಲಾಯಿಸಲಾಗಿದೆ. ಈ ರೀತಿ ಪ್ರತಿಬಾರಿಯೂ ಮಾದರಿ ಬದಲಾಯಿಸಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಏಷ್ಯಾ ಕಪ್ ಟಿ20 ಕ್ರಿಕೆಟ್ (Asia Cup T20 Cricket) ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಯುಎಇ (UAE) ದೇಶದ ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ. ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್ ಮಧ್ಯೆ ನಡೆದರೆ ಸೆ.28ರಂದು ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ (India) ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಪಾಕಿಸ್ತಾನದ ವಿರುದ್ಧ ಸೂಪರ್ ಸಂಡೇ ಹೈವೋಲ್ಟೇಜ್ ಪಂದ್ಯವನ್ನಾಡಲಿದೆ.
ವಿಶ್ವಕಪ್‌ಗೆ ಪೂರ್ವತಯಾರಿ ಏಷ್ಯಾ ಕಪ್
1975ರಲ್ಲಿ ಪ್ರಾರಂಭವಾದ ಐಸಿಸಿ ಏಕದಿನ ವಿಶ್ವಕಪ್ (ICC ODI World Cup) ಪ್ರತಿ 4 ವರ್ಷಗಳಿಗೊಮ್ಮೆ ಬರುತ್ತದೆ. ಅದೇ 2007ರಲ್ಲಿ ಪ್ರಾರಂಭವಾದ ಐಸಿಸಿ ಟಿ20 ವಿಶ್ವಕಪ್ ಅನ್ನು ಪ್ರತಿ 2 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಏಷ್ಯಾ ಕಪ್ ಸಹ 2 ವರ್ಷಗಳಿಗೊಮ್ಮೆ ನಡೆಯುತ್ತಿರುವುದರಿಂದ ಇದನ್ನು ವಿಶ್ವಕಪ್‌ಗೆ ಪೂರ್ವತಯಾರಿಯಾಗಿ ನಡೆಸಲು ಅನುಕೂಲ ಆಗುವಂತೆ ನಡೆಸಲು ಐಸಿಸಿ ನಿರ್ದೇಶನ ನೀಡಿದೆ. ಹಾಗಾಗಿ ಪ್ರತಿ ಬಾರಿ ಟಿ20 ವಿಶ್ವಕಪ್‌ಗೆ (T20 World Cup) ಮುನ್ನ ಟಿ20 ಮಾದರಿಯಲ್ಲಿ ಏಕದಿನ ವಿಶ್ವಕಪ್‌ಗೆ ಮುನ್ನ ಏಕದಿನ ಮಾದರಿಯಲ್ಲಿ ಕ್ರಿಕೆಟ್ ಟೂರ್ನಿ ನಡೆಯಲಿದೆ.
ಯಾವಾಗಿನಿಂದ ಈ ಬದಲಾವಣೆ?
2015ರ ಬಳಿಕ ಈ ಬೆಳವಣಿಗೆ ನಡೆದಿದೆ. 2016 ರಲ್ಲಿ ಏಷ್ಯಾಕಪ್ ಟಿ20 ಮಾದರಿಯಲ್ಲಿ ಏಷ್ಯಾ ಕಪ್ ನಡೆಯಿತು. ಇದು 2016ರ ಟಿ20 ವಿಶ್ವಕಪ್‌ಗೂ ಮುನ್ನ ಸಿದ್ಧತೆಯಾಗಿತ್ತು. 2018 ರಲ್ಲಿ ಏಷ್ಯಾ ಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿ ನಡೆಯಿತು. ಇದು 2019ರ ಏಕದಿನ ವಿಶ್ವಕಪ್‌ಗೆ ಸಿದ್ಧತೆಯಾಗಿತ್ತು. 2022ರಲ್ಲಿ ಟಿ20 ಮಾದರಿಯಲ್ಲಿ ಏಷ್ಯಾ ಕಪ್ ನಡೆಯಿತು. ಇದು 2022ರ ಟಿ20 ವಿಶ್ವಕಪ್‌ಗೆ ಪೂರ್ವತಯಾರಿ ಆಗಿತ್ತು. 2023 ರಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾ ಕಪ್ ನಡೆಯಿತು. ಇದು 2023ರ ಏಕದಿನ ವಿಶ್ವಕಪ್‌ಗೆ ಸಕಲ ಸಿದ್ಧತೆಯಾಗಿತ್ತು. 2025 ರಲ್ಲಿ ಟಿ20ಐ ಮಾದರಿಯಲ್ಲಿ ಏಷ್ಯಾ ಕಪ್ ನಡೆಯಲಿದೆ. ಇದು 2026 ರ ಟಿ20ಐ ವಿಶ್ವಕಪ್‌ಗೆ ಪೂರ್ವ ಸಿದ್ಧತೆಯಾಗಿರಲಿದೆ. ಜೊತೆಗೆ ಎರಡೂ ಮಾದರಿಗಳ ಜನಪ್ರಿಯತೆ ಹೆಚ್ಚಲು, ಅಭಿಮಾನಿಗಳನ್ನು, ಪ್ರಾಯೋಜಕರನ್ನು ಹಿಡಿದಿಟ್ಟುಕೊಳ್ಳಲು ಐಸಿಸಿ ಮತ್ತು ಎಸಿಸಿ ಕಂಡುಕೊಂಡಿರುವ ತಂತ್ರವಾಗಿದೆ.
ಭಾರತವೇ ಯಶಸ್ವಿ ತಂಡ
ಏಷ್ಯಾಕಪ್ ಇಲ್ಲಿಯವರೆಗೆ 16 ಆವೃತ್ತಿಗಳನ್ನು ಪೂರ್ಣಗೊಳಿಸಿದ್ದು, ಟೀಂ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಏಷ್ಯಾಕಪ್‌ನಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ತಂಡ ಭಾರತ ಆಗಿದೆ.
ಭಾರತ – 8 ಪ್ರಶಸ್ತಿಗಳು
ಶ್ರೀಲಂಕಾ – 6 ಪ್ರಶಸ್ತಿಗಳು
ಪಾಕಿಸ್ತಾನ – 2 ಪ್ರಶಸ್ತಿಗಳು
ರನ್ನರ್ ಅಪ್
ಶ್ರೀಲಂಕಾ – 7 ಬಾರಿ ರನ್ನರ್ ಅಪ್
ಭಾರತ – 3 ಬಾರಿ ರನ್ನರ್ ಅಪ್
ಪಾಕಿಸ್ತಾನ – 3 ಬಾರಿ ರನ್ನರ್ ಅಪ್
ಬಾಂಗ್ಲಾದೇಶ – 3 ಬಾರಿ ರನ್ನರ್ ಅಪ್