ಬೆಂಗಳೂರು: ಮೈತ್ರಿ ಸರ್ಕಾರ ರಚನೆಯಾದ ಬಳಿಕ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ಬಜೆಟ್ ಮಂಡಿಸಲಿದ್ದಾರೆ. ಸಾಮನ್ಯವಾಗಿ ಹಿಂದಿನ ಸರ್ಕಾರಗಳು ಶುಕ್ರವಾರ ಬಜೆಟ್ ಮಂಡಿಸಲಾಗುತ್ತಿತ್ತು. ಶನಿವಾರ ಮತ್ತು ಭಾನುವಾರ ಬಜೆಟ್ ಪುಸ್ತಕ ಓದಲು ಅನಕೂಲವಾಗಲಿ ಎಂಬ ಉದ್ದೇಶದಿಂದ ಮಂಡನೆ ಮಾಡಲಾಗುತ್ತಿತ್ತು.
ಎಲ್ಲದಕ್ಕೂ ವಾಸ್ತು ಮತ್ತು ಮುಹೂರ್ತ ನೋಡುವ ಸಚಿವ ಹೆಚ್.ಡಿ.ರೇವಣ್ಣ ಬಜೆಟ್ ಮಂಡನೆಗೂ ಮುನ್ನವೇ ಶಾಸ್ತ್ರ ಕೇಳಿದ್ದರಂತೆ. ಶುಕ್ರವಾರ ಅಷ್ಟಮಿ ತಿಥಿ ಇರುವ ಕಾರಣ ಶುಭ ಕಾರ್ಯವನ್ನ ಈ ದಿನ ಮಾಡಲು ಮುಂದಾಗುವುದಿಲ್ಲ. ಜುಲೈ 5ರಂದು ಸಪ್ತಮಿ ತಿಥಿ ಪೂರ್ವಾಭದ್ರ ನಕ್ಷತ್ರದ ಕನ್ಯಾ ಲಗ್ನದ ಶುಭ ಘಳಿಗೆಯಲ್ಲಿ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement
ಈ ಹಿಂದೆಯೂ ರಾಹುಕಾಲದ ಬಳಿಕವೇ ಹೆಚ್.ಡಿ.ರೇವಣ್ಣ ಪ್ರಮಾಣ ವಚನ ಸ್ವೀಕರಿಸಿದ್ದರು. ಎರಡು ದಿನಗಳ ಹಿಂದೆ ಹಾಸನದಲ್ಲಿ ಕಟ್ಟಡ ಶಂಕು ಸ್ಥಾಪನೆ ವೇಳೆ ವಾಸ್ತು ಪ್ರಕಾರ ಪೂಜೆ ಮಾಡುತ್ತಿಲ್ಲ ಎಂದು ಅರ್ಚಕರಿಗೆ ಕ್ಲಾಸ್ ತೆಗೆದುಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ತೀವ್ರ ಕುತೂಹಲವನ್ನು ಹುಟ್ಟು ಹಾಕಿದ್ದು, ಯಾವ ಪ್ರಮಾಣದಲ್ಲಿ ರೈತರ ಸಾಲಮನ್ನ ಮಾಡಲಾಗುತ್ತೆ ಎಂದು ನಿರೀಕ್ಷೆಯನ್ನು ಮೂಡಿಸಿದೆ.