ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿರುವ ಭಾರತ ದೇಶವು ಇದೀಗ ಅಂಟಾರ್ಟಿಕಾದಲ್ಲಿ ಹೊಸ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ಸಂಬಂಧ ಭಾರತವು ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ 46 ನೇ ಅಂಟಾರ್ಕ್ಟಿಕಾ (Antartica) ಒಪ್ಪಂದ ಸಮಾಲೋಚನಾ ಸಭೆಯಲ್ಲಿ (ATCM) ಚರ್ಚಿಸಿದೆ.
ಹೊಸ ಅಂಟಾರ್ಟಿಕಾದಲ್ಲಿ ನೆಲೆಯನ್ನು ಸ್ಥಾಪಿಸುವ ಉದ್ದೇಶವನ್ನು ಭಾರತವು ಇತ್ತೀಚೆಗೆ ಘೋಷಿಸಿದೆ. ಈ ಹೊಸ ಸಂಶೋಧನಾ ಕೇಂದ್ರವು ಪೂರ್ವ ಅಂಟಾರ್ಟಿಕಾದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಬಳಿ ಇದೆ. ಹಾಗಿದ್ರೆ ಭಾರತವು ಅಂಟಾರ್ಟಿಕಾದಲ್ಲಿ ಹೊಸ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸುತ್ತಿರುವುದು ಯಾಕೆ ಎಂಬುದನ್ನು ನೋಡೋಣ.
Advertisement
ಹೊಸ ಸಂಶೋಧನಾ ನೆಲೆ ಏಕೆ?: ಅಂಟಾರ್ಕ್ಟಿಕಾದಲ್ಲಿ ಭಾರತದ ಸಂಶೋಧನಾ ಚಟುವಟಿಕೆಗಳು 1981 ರಲ್ಲಿ ಮೊದಲ ಸ್ಥಳೀಯ ಕಾರ್ಯಾಚರಣೆಯೊಂದಿಗೆ ಪ್ರಾರಂಭವಾಯಿತು. 1983 ರಲ್ಲಿ ದೇಶವು ದಕ್ಷಿಣ ಗಂಗೋತ್ರಿ ಎಂಬ ಮೊದಲ ಸಂಶೋಧನಾ ನೆಲೆಯನ್ನು ಸ್ಥಾಪಿಸಿತು. ಇದು ಅಂಟಾರ್ಕ್ಟಿಕಾದಲ್ಲಿ ನಿರಂತರ ವೈಜ್ಞಾನಿಕ ಉಪಸ್ಥಿತಿಯ ಪ್ರಾರಂಭವನ್ನು ಗುರುತಿಸುತ್ತದೆ. 1989 ರಲ್ಲಿ ಭಾರತವು ಮೈತ್ರಿ ಸಂಶೋಧನಾ ಕೇಂದ್ರವನ್ನು ಕಾರ್ಯಗತಗೊಳಿಸುವ ಮೂಲಕ ತನ್ನ ಸಂಶೋಧನಾ ಸಾಮರ್ಥ್ಯವನ್ನು ವಿಸ್ತರಿಸಿತು. ಪ್ರಸ್ತುತ ಭಾರತವು ಅಂಟಾರ್ಕ್ಟಿಕಾದಲ್ಲಿ ಮೈತ್ರಿ ಮತ್ತು ಭಾರತಿ ಎಂಬ ಎರಡು ಸಕ್ರಿಯ ಸಂಶೋಧನಾ ಕೇಂದ್ರಗಳನ್ನು ನಿರ್ವಹಿಸುತ್ತಿದೆ.
Advertisement
Advertisement
ಅಂಟಾರ್ಕ್ಟಿಕಾದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸಂಶೋಧನಾ ಕೇಂದ್ರವು ತನ್ನ ನಿರೀಕ್ಷಿತ ಜೀವಿತಾವಧಿಯನ್ನು ಗಣನೀಯವಾಗಿ ಮೀರಿಸಿದೆ ಎಂದು ಸರ್ಕಾರ ಘೋಷಿಸಿದೆ. ಮೂಲತಃ ಒಂದು ದಶಕದಿಂದ ಭಾರತದ ಸಂಶೋಧನಾ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಮೈತ್ರಿ ಸಂಶೋಧನಾ ಕೇಂದ್ರವು (Research Centre) ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಾಲ ಕಾರ್ಯಾಚರಣೆಯಲ್ಲಿದೆ. ಆದಾಗ್ಯೂ ಅಂಟಾರ್ಕ್ಟಿಕಾದಲ್ಲಿ ಭಾರತದ ವೈಜ್ಞಾನಿಕ ಪ್ರಯತ್ನಗಳನ್ನು ಹೆಚ್ಚಿಸಲು ಮತ್ತು ಪ್ರಸ್ತುತ ಸಂಶೋಧನಾ ಸೌಲಭ್ಯಗಳಿಂದ ಉಂಟಾಗುವ ನಿರ್ಬಂಧಗಳನ್ನು ಪರಿಹರಿಸಲು ಸರ್ಕಾರವು ಹೊಸ ಸಂಶೋಧನಾ ನೆಲೆಯನ್ನು ನಿರ್ಮಿಸಲು ಪ್ರಸ್ತಾಪಿಸಿದೆ. ‘ಮೈತ್ರಿ’ ಕೇಂದ್ರವು ಹಳೆಯದಾಗಿದ್ದು, ಮೂಲಸೌಕರ್ಯವು ಈ ನಿರ್ಧಾರವನ್ನು ಪ್ರೇರೇಪಿಸಿದೆ. ಯಾಕೆಂದರೆ ಹಳೆಯದಾಗಿದ್ದರಿಂದ ಇದು ಇನ್ಮುಂದೆ ಅಗತ್ಯವಿರುವ ಮುಂದುವರಿದ ಸಂಶೋಧನಾ ಚಟುವಟಿಕೆಗಳನ್ನು ಸಮರ್ಪಕವಾಗಿ ಬೆಂಬಲಿಸುವುದಿಲ್ಲ. ಹೀಗಾಗಿ ಹೊಸ ನೆಲೆಯು ಆಧುನಿಕ ಸೌಕರ್ಯಗಳು ಮತ್ತು ಸುಧಾರಿತ ಸಾಮರ್ಥ್ಯಗಳನ್ನು ಒದಗಿಸುವ ನಿರೀಕ್ಷೆಯಿದೆ.
Advertisement
ಸಂಶೋಧನಾ ಹೆಜ್ಜೆಗುರುತು ವಿಸ್ತರಣೆ: 2012 ರಲ್ಲಿ ಕಾರ್ಯಾರಂಭ ಮಾಡಿದ ಭಾರತಿ ಸಂಶೋಧನಾ ಕೇಂದ್ರವು ಭಾರತದ ಅಂಟಾರ್ಕ್ಟಿಕ್ ಮೂಲಸೌಕರ್ಯದಲ್ಲಿ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತದೆ. 134 ಶಿಪ್ಪಿಂಗ್ ಕಂಟೈನರ್‌ಗಳನ್ನು ಬಳಸಿಕೊಂಡು ಇದನ್ನು ಅನನ್ಯವಾಗಿ ನಿರ್ಮಿಸಲಾಗಿದೆ. ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಹೊಸ ಎಂಜಿನಿಯರಿಂಗ್ ಅನ್ನು ಪ್ರದರ್ಶಿಸುತ್ತದೆ. ಅಂಟಾರ್ಕ್ಟಿಕ್ ಪ್ರದೇಶದ ಜಾಗತಿಕ ವೈಜ್ಞಾನಿಕ ಸಂಶೋಧನೆ ಮತ್ತು ತಿಳುವಳಿಕೆಗೆ ಕೊಡುಗೆ ನೀಡುವ ಭಾರತದ ಬದ್ಧತೆಯನ್ನು ಈ ನೆಲೆಗಳು ಒಟ್ಟಾಗಿ ಒತ್ತಿಹೇಳುತ್ತವೆ. ಧ್ರುವೀಯ ಸಂಶೋಧನೆಯಲ್ಲಿ ಭಾರತದ ಪ್ರಭಾವಶಾಲಿ ಪಾತ್ರವನ್ನು ಕಾಪಾಡಿಕೊಳ್ಳಲು ಈ ಸೌಲಭ್ಯಗಳ ನಿರಂತರ ಕಾರ್ಯಾಚರಣೆ ಮತ್ತು ಅಭಿವೃದ್ಧಿಯು ನಿರ್ಣಾಯಕವಾಗಿದೆ.
1959ರಲ್ಲಿ ಆಸ್ಪ್ರೇಲಿಯಾ, ಚಿಲಿ, ಜಪಾನ್, ನಾರ್ವೆ, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಂ, ದಕ್ಷಿಣ ಆಫ್ರಿಕ, ನ್ಯೂಜಿಲೆಂಡ್, ಫ್ರಾನ್ಸ್, ಬೆಲ್ಜಿಯಂ ಮತ್ತು ಅರ್ಜೆಂಟಿನಾಗಳು ಸೇರಿ ಅಂಟಾರ್ಟಿಕಾ ನಾಶವಾಗಬಾರದು. ಅದನ್ನು ಎಲ್ಲರೂ ಒಗ್ಗೂಡಿ ಸಂರಕ್ಷಿಸಬೇಕು, ಎಂಬ ನಿರ್ಧಾರಕ್ಕೆ ಬಂದವು. ಅಲ್ಲದೇ ಕ್ರಮೇಣ ಭಾರತ ಸಹಿತ ಇನ್ನೂ ಕೆಲವು ದೇಶಗಳು ಸೇರಿಕೊಂಡವು.
ಇಲ್ಲಿನ ಸುರಕ್ಷತೆ ನಮಗೆ ಏಕೆ ಮುಖ್ಯ?: ಅಂಟಾರ್ಟಿಕಾ ಮಹಾಸಾಗರದಲ್ಲಿ ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಹಿಮವು ಬಹಳ ವೇಗವಾಗಿ ಕರಗುತ್ತಿದೆ. ಉಪ್ಪು ಮತ್ತು ಆಮ್ಲಜನಕದಿಂದ ಸಮೃದ್ಧವಾಗಿರುವ ಅಂಟಾರ್ಟಿಕಾದಲ್ಲಿ ಪ್ರತಿದಿನ ಮತ್ತು ನಿರಂತರವಾಗಿ ಮಂಜುಗಡ್ಡೆಯ ಗುಡ್ಡೆ ಕರಗುತ್ತಿದೆ. ಇದರಿಂದ ಸೃಷ್ಟಿಯಾಗುವ ನೀರಿನ ಪ್ರವಾಹವು ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳನ್ನು ತಲುಪುತ್ತಿದೆ. ಮಂಜುಗಡ್ಡೆ ಕರಗುವಿಕೆಯಿಂದಾಗಿ ಅಂಟಾರ್ಟಿಕಾದ ಸಾಗರ ನೀರು ತೆಳುವಾಗಿ, ಉಪ್ಪಿನ ಅಂಶ ಕಡಿಮೆಯಾಗುತ್ತಿದೆ. ಇದು ಅಲ್ಲಿನ ಆಳ ಸಾಗರದ ನೀರಿನ ಹರಿಯುವಿಕೆಯನ್ನು ನಿಧಾನಗೊಳಿಸಿ, ಆಮ್ಲಜನಕದ ಪೂರೈಕೆ ಮೇಲೂ ಪರಿಣಾಮ ಬೀರುತ್ತಿದೆ. ಸಾಗರದ ಮೇಲಿನ ಪದರಗಳು ದುರ್ಬಲಗೊಳ್ಳುವುದರಿಂದ ಅವು ವಾತಾವರಣದಲ್ಲಿನ ಇಂಗಾಲದ ಡೈಕ್ಸೈಡ್ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚುತ್ತದೆ.
ವಿಜ್ಞಾನಿಗಳ ವಾಸ ಹೇಗೆ?: ಇಲ್ಲಿನ ತಾಪಮಾನವು ಕನಿಷ್ಠ -98 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ಇಲ್ಲಿ ಮನಷ್ಯ ವಾಸ ಮಾಡಲು ಯೋಗ್ಯವಾದ ನಗರಗಳು, ಗ್ರಾಮಗಳು, ಮನೆಗಳು ಇಲ್ಲ. ಅಲ್ಲದೇ ಕೈಗಾರಿಕೆಗಳು ಕೂಡ ಸ್ಥಾಪನೆಗೊಂಡಿಲ್ಲ. ಇಲ್ಲಿ ಸುಮಾರು 4 ಸಾವಿರ ಜನರು ವಾಸಿಸುತ್ತಿದ್ದಾರೆ. ಇಷ್ಟು ಜನರಲ್ಲಿ ಹೆಚ್ಚಿನವು ವಿಜ್ಞಾನಿಗಳು, ಸಂಶೋಧಕರು ಅಥವಾ ಪ್ರವಾಸಿಗರೇ ಆಗಿರುತ್ತಾರೆ.
ಆಯಾ ರಾಷ್ಟ್ರಗಳು ನಿರ್ಮಿಸಿರುವ ವೈಜ್ಞಾನಿಕ ಸಂಶೋಧನಾ ಕೇಂದ್ರಗಳಲ್ಲಿ ವಿಜ್ಞಾನಿಗಳು ತಂಗುತ್ತಾರೆ. ಹವಾಮಾನದ ವೈಪರೀತ್ಯದಿಂದಾಗಿ ಇಲ್ಲಿ ಯಾರಿಗೂ ದೀರ್ಘಕಾಲ ಉಳಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಲ್ಲಿ ವಾಸವಿರುವ ವಿಜ್ಞಾನಿಗಳು, ಸಂಶೋಧಕರನ್ನು ಕರೆದೊಯ್ಯಲು ಮತ್ತು ಬಿಡಲು ವರ್ಷಕ್ಕೊಮ್ಮೆ ಅಥವಾ 15 ತಿಂಗಳಿಗೊಮ್ಮೆ ಹಡಗುಗಳು ಬರುತ್ತವೆ. ಹವಾಮಾನಶಾಸ್ತ್ರಜ್ಞ ಗಫಿಕಿನ್ ಎಂಬವರು ಅಂಟಾರ್ಟಿಕಾದ ಬ್ರಿಟಿಷ್ ಸಂಶೋಧನಾ ಕೇಂದ್ರದಲ್ಲಿ ಬರೋಬ್ಬರಿ 2 ವರ್ಷ ಇಲ್ಲಿ ವಾಸವಿದ್ದರು. ಅವರ ಪ್ರಕಾರ, ಚಳಿಗಾಲದಲ್ಲಿಅಂಟಾರ್ಟಿಕಾ ಪೂರ್ತಿ ಕತ್ತಲೆಯಾಗಿರುತ್ತದೆ. ಹಲವು ವರ್ಷಗಳ ಹಿಂದೆ ಇಲ್ಲಿ ವಾಸವಿದ್ದ ವಿಜ್ಞಾನಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಆದರೆ ಮಾರಣಾಂತಿಕ ವೈರಸ್, ಬ್ಯಾಕ್ಟೀರಿಯಾಗಳ ಭಯದಿಂದ ಸದ್ಯ ನಿಲ್ಲಿಸಿದ್ದಾರೆ. ಅಲ್ಲದೇ ಹೊರಗೆ ತೆರೆದಿಟ್ಟ ಆಹಾರ, ತರಕಾರಿಗಳು ಬೇಗನೆ ಕೊಳೆತು ಹೋಗುತ್ತವೆ. ಹೀಗಾಗಿ ಪ್ಯಾಕ್ ಆಗಿರುವ ಆಹಾರಗಳೇ ಇಲ್ಲಿನವರಿಗೆ ಆಧಾರವಾಗಿರುತ್ತದೆ.
ಬಾಹ್ಯಾಕಾಶ ವೀಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ: ಇಲ್ಲಿ ಸಂಶೋಧನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಹೊಸ ಜೀವಿಗಳನ್ನು ಕಂಡುಹಿಡಿಯಲು ವಿಜ್ಞಾನಿ ಮತ್ತು ಸಂಶೋಧಕರು ಆಗಾಗ ಪ್ರಯತ್ನಿಸುತ್ತಾರೆ. ಸಮುದ್ರದ ದೈತ್ಯ ಜೀವಿಗಳು, ಪೆಂಗ್ವಿನ್ ಕುಟುಂಬಗಳು, ಅದ್ಭುತ ಹಿಮನದಿಗಳು ವಿಜ್ಞಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಭೂಮಿಯ ಹವಾಮಾನದ ಇತಿಹಾಸ, ಬದಲಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲು ಅಷ್ಟೇ ಅಲ್ಲದೇ ವೆದರ್‌ನ ಸೂಕ್ಷ್ಮತೆಗಳನ್ನು ಕಂಡುಹಿಡಿಯಲು ರಾಷ್ಟ್ರ- ರಾಷ್ಟ್ರಗಳ ನಡುವೆ ದೊಡ್ಡ ಪೈಪೋಟಿಯೇ ಇದೆ. ಯಾಕೆಂದರೆ ಅಂಟಾರ್ಟಿಕಾದಲ್ಲಿ ಕೈಗಾರಿಕೆಗಳು ಅಥವಾ ನಗರಗಳು ಇಲ್ಲದಿರುವುದೇ ಪ್ಲಸ್ ಆಗಿದೆ. ಇಲ್ಲಿ ಯಾವುದೇ ಮಾಲಿನ್ಯವಿಲ್ಲದಿರುವುದರಿಂದಾಗಿ ನೀಲ ಆಕಾಶ ನಿರ್ಮಲವಾಗಿ ಕಾಣುತ್ತದೆ. ಇದರಿಂದಾಗಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸಂಶೋಧನೆಗೆ ಅಂಟಾರ್ಟಿಕಾಕ್ಕಿಂತ ಉತ್ತಮ ಜಾಗ ಎಲ್ಲೂ ಸಿಗಲ್ಲ.
ಭಾರತವು 2029 ರ ವೇಳೆಗೆ ಗುರಿ: ಒಟ್ಟಿನಲ್ಲಿ ಭಾರತವು ಈಗಾಗಲೇ ಅಂಟಾರ್ಕ್ಟಿಕಾದಲ್ಲಿ ತನ್ನ ಹೊಸ ಸಂಶೋಧನಾ ಕೇಂದ್ರಕ್ಕಾಗಿ ಸ್ಥಳವನ್ನು ಗುರುತಿಸಿದೆ. ಅಲ್ಲದೇ ಪ್ರಾಥಮಿಕ ಸ್ಥಳಾಕೃತಿಯ ಸಮೀಕ್ಷೆಯನ್ನು ನಿಯೋಜಿಸಿದೆ. ಹೊಸ ಭಾರತೀಯ ಸಂಶೋಧನಾ ನೆಲೆಯ ನಿರ್ಮಾಣವು ಜನವರಿ 2029 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 1989 ರಲ್ಲಿ ನಿರ್ಮಿಸಲಾದ ‘ಮೈತ್ರಿ’ ಸಂಶೋಧನಾ ಕೇಂದ್ರವು ಹಳೆಯದಾಗಿದೆ. ಹೀಗಾಗಿ ನಾವು ಅಲ್ಲಿ ಹೊಸ ನಿಲ್ದಾಣವನ್ನು ಹೊಂದಲು ಬಯಸುತ್ತೇವೆ. ನಮ್ಮ ಸಂಶೋಧನಾ ತಂಡಕ್ಕೆ ಇದು ಮುಖ್ಯವಾಗಿದೆ. ಆದ್ದರಿಂದ ನಾವು ಈ ಪ್ರಸ್ತಾವನೆಯನ್ನು ಸದಸ್ಯ ರಾಷ್ಟ್ರಗಳ ಮುಂದೆ ಚರ್ಚಿಸಿ ಅನುಮೋದನೆ ಪಡೆದಿದ್ದೇವೆ ಎಂದು ಭೂ ವಿಜ್ಞಾನ ಸಚಿವಾಲಯದ (ಎಂಒಇಎಸ್) ಕಾರ್ಯದರ್ಶಿ ಎಂ ರವಿಚಂದ್ರನ್ ಹೇಳಿದ್ದಾರೆ.