ಕೆನಡಾ ಭಾರತೀಯರಿಗೆ ನೀಡುವ ಪ್ರವಾಸಿ ವೀಸಾಗಳನ್ನು ಕೆಲವು ಮಾನದಂಡಗಳ ಆಧಾರದ ಮೇಲೆ ಕಡಿಮೆಗೊಳಿಸುತ್ತಿದೆ. ಯುಎಸ್-ಕೆನಡಾ ಗಡಿ ದುರುಪಯೋಗ ಆರೋಪ, ಭಾರತ-ಕೆನಡಾ ರಾಜತಾಂತ್ರಿಕ ಗಲಾಟೆ ಇವು ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಕೆನಡಾವು ಭಾರತೀಯರಿಗೆ ನೀಡುತ್ತಿರುವ ಪ್ರವಾಸಿ ವೀಸಾಗಳ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸಿದ್ದು, 80% ರಿಂದ 20% ಇಳಿಸಿದೆ.
Advertisement
ಇತ್ತೀಚಗೆ ಕೆನಡಾ ತನ್ನ ವೀಸಾ ನೀತಿಯನ್ನು ತಿದ್ದುಪಡಿ ಮಾಡಿದೆ. 10 ವರ್ಷಗಳ ಹಳೆಯವೀಸಾಗಳನ್ನು ಸ್ಥಗಿತಗೊಳಿಸಿದೆ. ಇನ್ನೂ ವಿಸ್ತೃತ ಅವಧಿಯ ವೀಸಾಗಳನ್ನು ವೈಯಕ್ತಿಕ ಮೌಲ್ಯಮಾಪನದ ಆಧಾರದ ಮೇಲೆ ಅನುಮತಿ ನೀಡುತ್ತದೆ. ಈ ವೀಸಾ ನೀತಿಯ ಬದಲಾವಣೆಯು ತಮ್ಮ ಜೀವನ ಮಟ್ಟವನ್ನು ನಿರ್ವಹಿಸಲು, ವಸತಿ ಕೊರತೆಯನ್ನು ಪರಿಹರಿಸಲು, ಜೀವನ ವೆಚ್ಚವನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
Advertisement
ಕುಸಿತಕ್ಕೆ ಮೂಲ ಕಾರಣವೇನು?
ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಒತ್ತಡದ ಹೊರತಾಗಿಯೂ, 2024ರ ಮೊದಲಾರ್ಧದಲ್ಲಿ ಕೆನಡಾದಿಂದ ಭಾರತೀಯರಿಗೆ ನೀಡಲಾದ ಪ್ರವಾಸಿ ವೀಸಾಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜನವರಿ ಮತ್ತು ಜುಲೈ ನಡುವೆ ಭಾರತೀಯರಿಗೆ 3,65,750 ಸಂದರ್ಶಕರ ವೀಸಾಗಳನ್ನು ನೀಡಿದೆ. ಇನ್ನೂ 2023ರ ಇದೇ ಅವಧಿಯಲ್ಲಿ 3,45,631 ವೀಸಾಗಳನ್ನು ನೀಡಲಾಗಿತ್ತು.
Advertisement
ಈ ಕುರಿತು ಕೆನಡಾದ ವಲಸೆ ಸಚಿವ ಮಾರ್ಕ್ ಮಿಲ್ಲರ್, ಭಾರತದಲ್ಲಿ ಕೆನಡಾ ವಲಸೆ ಅಧಿಕಾರಿಗಳು 2023ರಲ್ಲಿ 27 ಜನರಿದ್ದರು. ಆದರೆ ಇದೀಗ ವಲಸೆ ಅಧಿಕಾರಿಗಳು ಕಡಿಮೆಯಾಗಿದ್ದು, 4ಕ್ಕೆ ಇಳಿದಿದೆ. ಹೀಗಾಗಿ ಇದು ಕೆನಡಾದಲ್ಲಿ ನೀಡಲಾಗುವ ವೀಸಾ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
Advertisement
ಗಡಿ ದುರ್ಬಳಕೆ: ಭಾರತೀಯ ಪ್ರವಾಸಿಗರು ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಕೆನಡಾ ಗಡಿಯನ್ನು ಬಳಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಮೆರಿಕಾ ಸರ್ಕಾರ ವೀಸಾ ನೀಡಲು ಕಟ್ಟುನಿಟ್ಟಾದ ವೀಸಾ ನಿಯಮಗಳನ್ನು ಹೊಂದಿದ್ದು, ವೀಸಾ ಪಡೆಯಲು ದೀರ್ಘ ಕಾಲ ಕಾಯಬೇಕಾಗುತ್ತದೆ. ಈ ಕಾರಣದಿಂದ ಯುಎಸ್ ವೀಸಾಗಳನ್ನು ಕೆನಡಾದಲ್ಲಿ ಪಡೆಯುವ ಉದ್ದೇಶದಿಂದ ಕೆನಾಡಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇನ್ನೂ ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಪ್ರಕಾರ, ಜೂನ್ 2024 ರಲ್ಲಿ 5,000ಕ್ಕೂ ಹೆಚ್ಚು ಭಾರತೀಯರು ಕೆನಡಾದಿಂದ ಯುಎಸ್‌ಗೆ ಕಾಲ್ನಡಿಗೆಯಲ್ಲಿ ಸರಿಯಾದ ದಾಖಲೆಗಳಿಲ್ಲದೆ ಪ್ರವೇಶಿದ್ದಾರೆ ಎಂದು ತಿಳಿಸಿದೆ.
ದೇಶೀಯ ಕಾಳಜಿಗಳು: ದೇಶವು ತಾತ್ಕಾಲಿಕ ನಿವಾಸಿಗಳ ಸಂಖ್ಯೆಯನ್ನು ಮಿತಿಗೊಳಿಸುವ ಉದ್ದೇಶವನ್ನು ಹೊಂದಿದ್ದು, ವೀಸಾಕ್ಕೆ ಅರ್ಜಿ ಸಲ್ಲಿಸುವ ಪ್ರತಿ ಅರ್ಜಿದಾರರ ಪರಿಶೀಲನೆಯ ನಂತರ ವೀಸಾ ನೀಡುತ್ತದೆ. 2023ರ ಜೂನ್‌ನಲ್ಲಿ ಸರ್ರೆಯ ಗುರುದ್ವಾರದ ಹೊರಗೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತೀಯ ಅಧಿಕಾರಿಗಳ ಸಂಬಂಧವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಮ್ಮ ಸಂಸತ್ತಿನಲ್ಲಿ ಆರೋಪಿಸಿದರು. ಈ ಕಾರಣದಿಂದ ಭಾರತ ಮತ್ತು ಕೆನಡಾ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಇದು ಒಂದು ಕಾರಣವಾಗಿದ್ದು, ವೀಸಾ ಕಡಿತಗೊಳಿಸಲು ಇದು ಕಾರಣವಲ್ಲ ಎಂದು ಕೆನಡಾ ಸ್ಪಷ್ಟನೆ ನೀಡಿದೆ.
ಕೆನಡಾದ ಹೊಸ ವೀಸಾ ಮಾರ್ಗಸೂಚಿಗಳು ಯಾವುವು?
ಹೊಸ ನಿಯಮದ ಪ್ರಕಾರ, ವೀಸಾ ಅಧಿಕಾರಿಗಳು ಪ್ರತಿ ಅರ್ಜಿದಾರರನ್ನು ಪ್ರತ್ಯೇಕವಾಗಿ ಪರಿಶೀಲನೆ ನಡೆಸುತ್ತಾರೆ. ಏಕ-ಪ್ರವೇಶ ಮತ್ತು ಬಹು-ಪ್ರವೇಶದ ಕೆನಡಿಯನ್ ವೀಸಾದ ವೆಚ್ಚವು ಪ್ರತಿ ವ್ಯಕ್ತಿಗೆ ಕೆನಡಾ ಮೌಲ್ಯ 100 ಆಗಿದೆ. ಒಂದು ಹಾಗೂ ಎರಡು ವೀಸಾಗಳ ನಡುವೆ ಯಾವುದೇ ವೆಚ್ಚದ ವ್ಯತ್ಯಾಸವಿಲ್ಲ. ಸರ್ಕಾರವು ತನ್ನ ವಲಸೆ ಮಟ್ಟದ ಯೋಜನೆಯನ್ನು ಕೂಡ ಪರಿಷ್ಕರಿಸಿದ್ದು, ಅದರ ಗುರಿಯನ್ನು 5,00,000 ಹೊಸ ಶಾಶ್ವತ ನಿವಾಸಿಗಳಿಂದ 2025ರಲ್ಲಿ 3,95,000, 2026ರಲ್ಲಿ 3,80,000 ಮತ್ತು 2027ರಲ್ಲಿ 3,65,000ಕ್ಕೆ ಇಳಿಸಿದೆ.