ಬೆಂಗಳೂರು: ಶುಕ್ರವಾರ ತುರ್ತಾಗಿ ದೆಹಲಿಗೆ ಹೋಗಬೇಕಿತ್ತು. ಸಿಎಂಗೆ ಮೊದಲೇ ನಾನು ದೆಹಲಿಗೆ ಹೋಗೋ ವಿಚಾರ ತಿಳಿದಿತ್ತು ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ಗೈರಾದ ಹಿನ್ನೆಲೆಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಭಿನ್ನಮತ, ಅಸಮಾಧಾನ ಯಾವುದು ಇಲ್ಲ. ದೆಹಲಿಗೆ ಹೋಗುವ ವಿಚಾರವನ್ನು ಮೊದಲೇ ತಿಳಿಸಿದ್ದೆ. ಸಿಎಂ ಹೋಗಿ ಬನ್ನಿ ಎಂದು ತಿಳಿಸಿದ್ದರು. ನಮ್ಮ ಪಕ್ಷ ಮತ್ತು ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟನೆ ನೀಡಿದರು.
Advertisement
ನಾನೊಬ್ಬ ಸ್ಟ್ರೀಟ್ ಫೈಟರ್, ನಾನು ಎದುರಿಗೆ ಹೋರಾಟ ಮಾಡುವ ವ್ಯಕ್ತಿ. ನಾನು ಹಿಂದಿನಿಂದ ಹೋರಾಟ ಮಾಡುವ ವ್ಯಕ್ತಿಯಲ್ಲ. ನನಗೆ ಯಾಕೆ ಅಸಮಾಧಾನ ಆಗಬೇಕು ಎಂದು ಅವರು ಪ್ರಶ್ನಿಸಿದರು.
Advertisement
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಅಸಮಾಧಾನ ಆಗಿದ್ಯಾ ಎನ್ನುವ ಪ್ರಶ್ನೆಗೆ, ನಾನು ಪರಮೇಶ್ವರ್‍ಗೆ ವಕ್ತಾರ ಅಲ್ಲ. ನನಗೆ ನಾನೇ ವಕ್ತಾರ. ಅಸಮಾಧಾನದ ಬಗ್ಗೆ ಪರಮೇಶ್ವರ್ ಹೇಳುತ್ತಾರೆ ಎಂದು ಪ್ರತಿಕ್ರಿಯಿಸಿದರು.
Advertisement
Advertisement
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ ಮತ್ತು ಗೀತಾ ಮಹದೇವಪ್ರಸಾದ್ ಅವರಿಗೆ ಅಭಿನಂದನೆಗಳು. pic.twitter.com/GFHvA3kP5j
— CM of Karnataka (@CMofKarnataka) September 1, 2017
ಸರ್ಕಾರದ ಸಚಿವ ಸಂಪುಟದ ನೂತನ ಸಂಪುಟ ದರ್ಜೆ ಸಚಿವರಾಗಿ ಹೆಚ್ ಎಂ ರೇವಣ್ಣ,ಆರ್ ಬಿ ತಿಮ್ಮಾಪುರ ಮತ್ತು ಗೀತಾ ಮಹದೇವಪ್ರಸಾದ್ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು pic.twitter.com/ZFrl0un48g
— DIPR Karnataka (@KarnatakaVarthe) September 1, 2017