ಬೆಂಗಳೂರು: ನವರಸ ನಾಯಕ ನಟ ಜಗ್ಗೇಶ್ ತಾವು ಯಾಕೆ ಸಸ್ಯಹಾರಿಯಾಗಿದ್ದು ಯಾಕೆ ಎನ್ನುವುದನ್ನು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ಜಗ್ಗೇಶ್ ಸಸ್ಯಹಾರಿಯಾಗಿದ್ದು, ಈ ಬಗ್ಗೆ ಜಗ್ಗೇಶ್ “ಊರ ಹಬ್ಬಕ್ಕೆ ಕುರಿ ಕಡಿಯಲು ಕಟುಕ ಅಣಿಯಾದಾಗ ಮಾತ್ತೊಂದು ಕುರಿ ರೋಧಿಸುತ್ತಿತ್ತು. ವಿಷಯ ತಿಳಿದಾಗ ನಾನು ಅತ್ತುಬಿಟ್ಟಿ. ಕಟುಕನಿಗೆ ತಲೆಕೊಟ್ಟದ್ದು ಮಗ ರೋಧಿಸುತ್ತಿದ್ದದ್ದು ಅಮ್ಮ. ಪ್ರಾಣಿಗಳಲ್ಲು ಭಾವನಾತ್ಮಕ ಸಂಬಂಧವಿರುತ್ತದೆ. 4 ಘಂಟೆಗೆ ಮಲವಾಗುವ ಊಟಕ್ಕೆ ಯಾಕೆ ಬೇಕು ಭಾವನೆ ಕೊಂದ ಊಟ. ದಯೇ ಧರ್ಮದ ಮೂಲ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
Why i Became vegetarian.!
ಊರ ಹಬ್ಬಕ್ಕೆ ಕುರಿ ಕಡಿಯಲು ಕಟುಕ ಅಣಿಯಾದಾಗ ಮಾತ್ತೊಂದು ಕುರಿ ರೋಧಿಸುತ್ತಿತ್ತು ವಿಷಯ ತಿಳಿದಾಗ ನಾನು ಅತ್ತುಬಿಟ್ಟಿ.!
ಕಟುಕನಿಗೆ ತಲೆಕೊಟ್ಟದ್ದು ಮಗ ರೋಧಿಸುತ್ತಿದ್ದದ್ದು ಅಮ್ಮ.!
ಪ್ರಾಣಿಗಳಲ್ಲು ಭಾವನಾತ್ಮಕ ಸಂಬಂಧವಿರುತ್ತದೆ.!
4ಘಂಟೆಗೆ ಮಲವಾಗುವ ಊಟಕ್ಕೆ ಯಾಕೆ ಬೇಕು ಭಾವನೆ ಕೊಂದ ಊಟ.!
ದಯೇ ಧರ್ಮದ ಮೂಲ.!
— ನವರಸನಾಯಕ ಜಗ್ಗೇಶ್ (@Jaggesh2) June 27, 2018
Advertisement
ಈ ಹಿಂದೆ ಜಗ್ಗೇಶ್, ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರನ್ನು ನೋಡಿದರೆ ಅಯ್ಯೋ ಪಾಪಾ ಅನಿಸುತ್ತದೆ. ಸರ್ಕಾರ ರಚನೆಗೆ ತನು, ಮನ, ಧನ ಎಲ್ಲ ಅರ್ಪಿಸಿ, ಈಗ ಒಳಿತು ಮಾಡು ಮನುಸ ಎಂಬ ಹಾಡಿನಂತೆ ಕೂತಿದ್ದಾರೆ ಅಂತ ನಟ, ಬಿಜೆಪಿ ಮುಖಂಡ ಜಗ್ಗೇಶ್ ವ್ಯಂಗ್ಯವಾಡಿದ್ದರು.
Advertisement
ಕಬಾಬ್, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ಎಲ್ಲಾ ಸಿಎಂ ಎಚ್‍ಡಿಕೆ ತಟ್ಟೆಯಲ್ಲಿದೆ. ನೀರ್ ಮಜ್ಜಿಗೆ, ಕೋಸಂಬರಿ, ಪಾನಕ ಎಲ್ಲವೂ ಕಾಂಗ್ರೆಸ್ ತಟ್ಟೆಯಲ್ಲಿದೆ. ಇಬ್ಬರು ಊಟಕ್ಕೆ ಕೂತಿದ್ದಾರೆ. ಜೆಡಿಎಸ್‍ನವರು ಮೃಷ್ಠಾನ್ನ ಭೋಜನ ಮಾಡುವುದನ್ನ ನೋಡಿಕೊಂಡು ಕಾಂಗ್ರೆಸ್ಸಿನವರು ಸುಮ್ಮನಿರುವುದಕ್ಕೆ ಸಾಧ್ಯಾನಾ.? ನೋಡ್ತಾ ಇರಿ, ತಟ್ಟೆ ಮುಂದೆಯೇ ಇಬ್ಬರು ಬಡಿದಾಡಿಕೊಳ್ತಾರೆ. ಆ ಕಾಲ ತುಂಬಾ ದೂರ ಇಲ್ಲ. ಮದುವೆ ಮನೆಯಲ್ಲಿ ಊಟಕ್ಕೆ ಕಿತ್ತಾಡುವ ಸಂದರ್ಭ ಬಹಳ ಬೇಗ ಬರುತ್ತೆ. ಈ ಆಟವನ್ನು ನೋಡಲು ನಾನೂ, ಜನರು ನೀವೂ ಎಲ್ಲರೂ ಕಾಯುತ್ತಿದ್ದೇವೆ ಅಂತ ಹೇಳಿದ್ದರು.
Advertisement