ಬೆಂಗಳೂರು: ಕಾಂಗ್ರೆಸ್ ಶಾಸಕರ ಕುಟುಂಬವೇ ಆಯಾ ಕ್ಷೇತ್ರಗಳಲ್ಲಿ ದುಂಡಾವರ್ತಿಯಲ್ಲಿ ತೊಡಗಿರುವುದು ಶಾಸಕ ಸಂಗಮೇಶ್ವರ್ (Sangameshwar) ಅವರ ಪುತ್ರ ಬಸವೇಶ್ ವರ್ತನೆ ಮೂಲಕ ಹೊರಕ್ಕೆ ಬಂದಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭದ್ರಾವತಿ ಶಾಸಕ ಸಂಗಮೇಶ್ವರ್ ಅವರ ಪುತ್ರ ಬಸವೇಶ್, ಹೆಣ್ಣುಮಗಳು, ಸರಕಾರಿ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ಬೈದ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಅವರಿಗೆ ಬೆದರಿಕೆ ಹಾಕಿದ್ದು ವಿಡಿಯೋದಲ್ಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ವಿವರಿಸಿದರು.
Advertisement
Advertisement
ಕಾನೂನು ಏನು ಮಾಡುತ್ತಿದೆ? ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ನಿಮ್ಮ ಶಾಸಕರು ಏನು ಮಾಡಿದರೂ ಸರಿ ಎಂಬ ಧೋರಣೆಯೇ ಎಂದು ಛಲವಾದಿ ನಾರಾಯಣಸ್ವಾಮಿ ಕೇಳಿದರು. ಸಂಗಮೇಶ್ವರ್ ಅವರ ಪುತ್ರ ಬಸವೇಶ್ ಅವರನ್ನು ಈಗಾಗಲೇ ಬಂಧಿಸಬೇಕಿತ್ತು ಎಂದು ನುಡಿದರು. ಇದನ್ನೂ ಓದಿ: ಮಹಿಳಾ ಅಧಿಕಾರಿ ಮೇಲೆ ಅವಾಚ್ಯ ಪದ ಬಳಕೆ – ಭದ್ರಾವತಿ ಕಾಂಗ್ರೆಸ್ ಶಾಸಕ ಪುತ್ರನ ವಿರುದ್ಧ ಆರೋಪ
Advertisement
ಹೆಣ್ಮಕ್ಕಳಿಗೆ ಇದೇನಾ ಗೌರವ ಕೊಡುವುದು ಎಂದು ಬೇರೆಯವರನ್ನು ಮಾತನಾಡುತ್ತಾರೆ. ಈಗ ಸರಕಾರ ನಡೆಸುವ ಕಾಂಗ್ರೆಸ್ಸಿಗರು ಇದೇನಾ ಹೆಣ್ಮಕ್ಕಳಿಗೆ ಗೌರವ ಕೊಡುವುದು ಎಂದು ಪ್ರಶ್ನಿಸಿದರು. ಶಾಸಕರ ಪುತ್ರನನ್ನು ಯಾಕೆ ಬಂಧಿಸಿಲ್ಲ? ಅವರ ವಿರುದ್ಧ ಯಾಕೆ ಕಾನೂನು ಕ್ರಮ ಜರುಗಿಸಿಲ್ಲ ಎಂದು ಕೇಳಿದರು.
Advertisement
ಕಾಂಗ್ರೆಸ್ (Congress) ಎಂದರೆ ಕುಟುಂಬದ ಪಕ್ಷ. ಕುಟುಂಬದ ಎಲ್ಲರಿಗೂ ಅಧಿಕಾರ ಇರಬೇಕೆಂಬ, ದರ್ಪ ತೋರಬೇಕೆಂಬ ನಿಯಮ ಇವರದು. ಮಹಿಳಾ ನಿಂದನೆ ವಿಚಾರದಲ್ಲಿ ಸರ್ಕಾರ ಇಷ್ಟು ತಡ ಮಾಡಬಾರದಿತ್ತು ಎಂದ ಅವರು, ಬೇರೆಯವರು ಮಾಡಿದ್ದರೆ ಏನೆಲ್ಲ ಮಾಡುತ್ತಿದ್ದಿರಿ? ಏನೇನು ಗೂಬೆ ಕೂರಿಸುತ್ತಿದ್ದಿರಿ. ಹೆಣ್ಮಕ್ಕಳಿಗೆ ಈ ಸರಕಾರ ರಕ್ಷಣೆ ಕೊಡುತ್ತಿಲ್ಲ, ಎಷ್ಟು ಅತ್ಯಾಚಾರ ಆಗಿವೆ? ಎಷ್ಟು ಮಹಿಳೆಯರು ಪ್ರಾಣತ್ಯಾಗ ಮಾಡಿದ್ದಾರೆ? ಎಷ್ಟು ಬಾಣಂತಿಯರು ಇವತ್ತು ಜೀವ ಕಳೆದುಕೊಂಡಿದ್ದಾರೆ? ಕಾಂಗ್ರೆಸ್ಸಿಗರು ಅಧಿಕಾರ ಹಂಚಿಕೆಯಲ್ಲಿ ಇದ್ದಾರೆಯೇ ಹೊರತು ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ ಎಂದು ಛಲವಾದಿ ಟೀಕಿಸಿದರು.