ಅಹಮದಾಬಾದ್: 2023ರ ಐಪಿಎಲ್ ಆವೃತ್ತಿಯಲ್ಲಿ (IPL 2023) ಗುಜರಾತ್ ಟೈಟಾನ್ಸ್ (Gujarat Titans) ತಂಡವು ತವರಿನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೈದರಾಬಾದ್ ವಿರುದ್ಧ ಕೊನೆಯ ಪಂದ್ಯನ್ನಾಡುತ್ತಿದೆ. ಒಂದು ವೇಳೆ ಪ್ಲೆ ಆಫ್‌ನ ಮೊದಲ ಪಂದ್ಯದಲ್ಲೇ ಗೆದ್ದರೇ ತವರಿನಲ್ಲಿ ಮತ್ತೊಮ್ಮೆ ಫೈನಲ್ ಪಂದ್ಯವನ್ನಾಡುವ ಅವಕಾಶ ಪಡೆದುಕೊಳ್ಳಲಿದೆ.
A ???????????????????????????? initiative, a ???????????????????????????? gesture, let’s make it a ???????????????????????????? ???????????????????????????? ????#GTvSRH | #AavaDe | #TATAIPL 2023 pic.twitter.com/7FtG7Ffatu
— Gujarat Titans (@gujarat_titans) May 15, 2023
Advertisement
ಸೋಮವಾರದ ಪಂದ್ಯವು ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಪಡೆಗೆ ಮಹತ್ವದ್ದಾಗಿದೆ. ಏಕೆಂದರೆ ಟೈಟಾನ್ಸ್ ತಂಡವು ತಮ್ಮ ಸಾಂಪ್ರದಾಯಿಕ ಕಡು ನೀಲಿ ಜೆರ್ಸಿ ಬದಲಿಗೆ ವಿಶೇಷ ಲ್ಯಾವೆಂಡರ್ ಬಣ್ಣದ ಜೆರ್ಸಿ ಧರಿಸಿ ಕಣಕ್ಕಿಳಿದಿದೆ. ಇದಕ್ಕೆ ಕಾರಣವೇನೆಂಬುದನ್ನೂ ಪಾಂಡ್ಯ ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಟಾಸ್ ಬಳಿಕ ಮಾತನಾಡಿದ ಪಾಂಡ್ಯ, ಲ್ಯಾವೆಂಡರ್ (Lavender Jersey) ಸಾಮಾನ್ಯವಾಗಿ ಅನ್ನನಾಳದ ಕ್ಯಾನ್ಸರ್‌ಗೆ ಸಂಬಂಧಿಸಿದ್ದಾಗಿದೆ. ಇದು ಎಲ್ಲಾ ರೀತಿಯ ಕ್ಯಾನ್ಸರ್ (Cancer) ಅನ್ನು ಪ್ರತಿನಿಧಿಸುತ್ತದೆ. ಈ ವಿನಾಶಕಾರಿ ರೋಗದ ಬಗ್ಗೆ ಜಾಗೃತಿ (Cancer Awareness) ಮೂಡಿಸುವಲ್ಲಿ ತಂಡದ ಜವಾಬ್ದಾರಿಯುತ ಪ್ರಜ್ಞೆಯನ್ನು ಪಾಂಡ್ಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ ವಿಶ್ವವ್ಯಾಪಿಯಾಗಿಸಲು ಚಿಂತನೆ – ಬ್ರಿಜ್ ಭೂಷಣ್ ಬಂಧನಕ್ಕೆ ಮೇ 21 ಗಡುವು
Advertisement
ಲ್ಯಾವೆಂಡರ್ ಜೆರ್ಸಿ ಧರಿಸುವ ಮೂಲಕ, ನಾವು ಕ್ಯಾನ್ಸರ್ ರೋಗಿಗಳು ಹಾಗೂ ಕ್ಯಾನ್ಸರ್‌ನಿಂದ ಬದುಕುಳಿದವರು ಮತ್ತು ಅವರ ಕುಟುಂಬಗಳಿಗೆ ಬೆಂಬಲ ಸೂಚಿಸಬಹುದು ಎಂದು ತಂಡ ಭಾವಿಸುತ್ತದೆ. ಅಲ್ಲದೆ ಅವರು ತಡೆಗಟ್ಟುವ ಕ್ರಮಗಳನ್ನ ತೆಗೆದುಕೊಳ್ಳಲು ಮತ್ತು ಕ್ಯಾನ್ಸರ್ ವಿರುದ್ಧದ ಯುದ್ಧದಲ್ಲಿ ತೊಡಗಿರುವವರಿಗೆ ಸಹಾಯ ನೀಡಲು ಇತರರನ್ನು ಪ್ರೇರೇಪಿಸಲು ಇಂದಿನ ಪಂದ್ಯದಲ್ಲಿ ಲ್ಯಾವೆಂಡರ್ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದೇವೆ ಎಂದು ಪಾಂಡ್ಯ ಹೇಳಿಕೊಂಡಿದ್ದಾರೆ.
ಪ್ರತಿ ಸೀಸನ್‌ನಲ್ಲೂ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸುತ್ತಿದ್ದ ಆರ್‌ಸಿಬಿ ಪರಿಸರದ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿತ್ತು. ತನ್ನ 2ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡ ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವುದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.