ಸಾಮಾನ್ಯವಾಗಿ ಚಿನ್ನ ಎಂದರೆ ಎಲ್ಲರಿಗೂ ಇಷ್ಟವಾಗುವಂತೆ ವಸ್ತುವೇ. ಆದರೆ ದೇಶದಿಂದ ದೇಶಕ್ಕೆ ತುಲನೆ ಮಾಡಿದಾಗ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದು. ಇನ್ನೂ ಗಲ್ಫ್ ರಾಷ್ಟ್ರಗಳಾದ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್), ಕತಾರ್, ಓಮನ್ ಹಾಗೂ ಸಿಂಗಾಪುರದಲ್ಲಿ ಭಾರತಕ್ಕಿಂತ ದುಬಾರಿಯಾಗಿದೆ.
ಭಾರತದಲ್ಲಿ ಚಿನ್ನವನ್ನು ಕೇವಲ ಒಂದು ಬೆಲೆಬಾಳುವ ವಸ್ತುವನ್ನಾಗಿ ನೋಡದೆ ಅದೃಷ್ಟದ ಭಾಗವನ್ನಾಗಿ ಕೂಡ ನೋಡಲಾಗುತ್ತದೆ. ಈ ಕಾರಣದಿಂದಾಗಿ ಭಾರತದಲ್ಲಿ ಚಿನ್ನದ ಬಳಕೆ ಹಾಗೂ ಸಂಗ್ರಹಣೆ ಹೆಚ್ಚಾಗಿದೆ. ವಿಶ್ವದ ಎಲ್ಲಾ ದೇಶಗಳ ನಾಗರಿಕರ ಚಿನ್ನವನ್ನು ಒಟ್ಟುಗೂಡಿಸಿದರೆ ಭಾರತದ ಪ್ರಜೆಗಳಲ್ಲಿರುವ ಚಿನ್ನಕ್ಕಿಂತ ಕಡಿಮೆಯೇ ಆಗಿರುತ್ತದೆ.
ಭಾರತದಲ್ಲಿ ನ.16 ರ ಹೊತ್ತಿಗೆ ಚಿನ್ನದ ಬೆಲೆ 10 ಗ್ರಾಂಗೆ 75,650 ರೂ ಆಗಿತ್ತು. ಹಬ್ಬದ ಸಂದರ್ಭ, ಮದುವೆ ಅಥವಾ ಶಾಪಿಂಗ್ ಮಾಡುವ ಯೋಚನೆಯಿಂದ ಒಂದಲ್ಲ ಒಂದು ರೀತಿಯಲ್ಲಿ ಚಿನ್ನವನ್ನು ಕೊಳ್ಳುತ್ತಲೇ ಇರುತ್ತಾರೆ. ಮುಖ್ಯವಾಗಿ ಚಿನ್ನವನ್ನು ಸುರಕ್ಷಿತ ಲೋಹವಾಗಿ ಪರಿಗಣಿಸುತ್ತಾರೆ. ಹೀಗಾಗಿ ಭಾರತದಲ್ಲಿ ಚಿನ್ನದ ಬೆಲೆ ಇದೀಗ ಗಲ್ಫ್, ಸಿಂಗಾಪುರಕ್ಕಿಂತ ಅಗ್ಗವಾಗಿದೆ.
ಭಾರತದಲ್ಲಿ ಕುಸಿಯುತ್ತಿರುವ ಚಿನ್ನದ ಬೆಲೆ ಹಾಗೂ ಗಲ್ಫ್ ರಾಷ್ಟ್ರಗಳು ಮತ್ತು ಸಿಂಗಾಪುರದಲ್ಲಿ ಏರುತ್ತಿರುವ ದರಗಳ ನಡುವಿನ ಹಲವಾರು ವ್ಯತ್ಯಾಸಗಳ ಪ್ರಭಾವವಿದೆ.
ಭಾರತದಲ್ಲಿ ಚಿನ್ನದ ಬೆಲೆ ಏಕೆ ಕುಸಿಯುತ್ತಿದೆ?
ಜಾಗತಿಕ ಚಿನ್ನದ ಪ್ರವೃತ್ತಿಗಳು:
ಜಾಗತಿಕವಾಗಿ, ಚಿನ್ನವು ಮೂರು ವರ್ಷಗಳಲ್ಲಿ ಅದರ ತೀಕ್ಷ್ಣವಾದ ಕುಸಿತವನ್ನು ಕಂಡಿದೆ. ಸಾಮಾನ್ಯವಾಗಿ ಡಾಲರ್ ಬೆಲೆಯಲ್ಲಿ ಕುಸಿತ ಕಂಡಾಗ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಹಾಗೆಯೇ ಡಾಲರ್ ಬೆಲೆಯಲ್ಲಿ ಏರಿಕೆ ಕಂಡಾಗ ಚಿನ್ನದ ಬೆಲೆ ಇಳಿಕೆಯಾಗುತ್ತದೆ.
ಭಾರತದಲ್ಲಿ ಬೇಡಿಕೆ
ಭಾರತದಲ್ಲಿ ಚಿನ್ನದ ಬೇಡಿಕೆಯು ಹೆಚ್ಚುತ್ತಿದೆ ಇದರಿಂದಾಗಿ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತದೆ. ಸದ್ಯ ಮದುವೆಯ ಸೀಸನ್ ಮತ್ತು ಹಬ್ಬ ಇರುವುದರಿಂದ ಖರೀದಿಸುವವರ ಸಂಖ್ಯೆ ಜಾಸ್ತಿಯಾಗಿದ್ದು, ಬೆಲೆ ಕಡಿಮೆಯಾಗಿದೆ.
ಜಾಗತಿಕ ಆರ್ಥಿಕ ಸೂಚಕಗಳು:
ಫೆಡರಲ್ ರಿಸರ್ವ್‌ನಿಂದ ಬಡ್ಡಿದರ ಕಡಿಗೊಂಡಾಗ ಬೆಲೆ ಏರಿಕೆಯಾಗುತ್ತದೆ. ಇನ್ನೂ ಬಡ್ಡಿದರ ಜಾಸ್ತಿಯಾದಾಗ ಬೆಲೆ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಬಡ್ಡಿದರ ಕಡಿಮೆಯಾದಾಗ ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಬಡ್ಡಿದರ ಜಾಸ್ತಿಯಾದಾಗ ಹೂಡಿಕೆ ಮಾಡುವವರ ಜಾಸ್ತಿಯಾಗುತ್ತದೆ. ಆಗ ಚಿನ್ನಕ್ಕೆ ಬೇಡಿಕೆ ಜಾಸ್ತಿಯಾಗುತ್ತದೆ. ಇದರಿಂದಾಗಿ ಸಿನ್ನದ ಬೆಲೆ ಇಳಿಕೆಯಾಗುತ್ತದೆ. ಸದ್ಯ ಬಡ್ಡಿದರ ಹೆಚ್ಚಾಗಿದ್ದು, ಚಿನ್ನದ ಬೆಲೆ ಕಡಿಮೆಯಾಗಿದೆ. ಇದರಿಂದ ಈ ಅಂಶ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತದೆ.
ಕರೆನ್ಸಿ ಮತ್ತು ಆಮದು ವೆಚ್ಚಗಳು:
ವಿನಿಮಯ ದರ ವ್ಯತ್ಯಾಸವಾದಾಗ ಆ ಪ್ರದೇಶದ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಾಣುತ್ತದೆ. ಸ್ಥಳೀಯ ಮಾರುಕಟ್ಟೆಯ ಪರಿಸ್ಥಿತಿ, ತೆರಿಗೆ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಬಹುದು