ಚೆಂದುಳ್ಳಿ ಚೆಲುವೆ ನಟಿ ಶುಭ ಪುಂಜಾಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ್ರು (Govindegowda) ಕೇರ್ ಟೇಕರ್ ಅಂತೆ. ಕಾಂಪೌಂಡರ್ ಆಗಿ ವೃತ್ತಿ ಆರಂಭಿಸಿರುವ ಜಿಜಿ, ಆ ವ್ಯಕ್ತಿಯ ಆಜ್ಞೆಯ ಮೇರೆಗೆ ಶುಭ ಪುಂಜಾರನ್ನು ಆರೈಕೆ ಮಾಡುವ ಕೆಲಸ ಮಾಡಿದ್ದಾರಂತೆ. ಹೀಗಂತ ನಾವು ಹೇಳ್ತಿಲ್ಲ ಸ್ವತಃ ಜಿಜಿಯವ್ರೇ ಹೇಳಿಕೊಂಡಿದ್ದಾರೆ. ಕನ್ ಫ್ಯೂಸ್ ಆಗ್ಬೇಡಿ ಕೇರ್ ಟೇಕರ್ ಆಗಿದ್ದು, ರಿಯಲ್ ಲೈಫ್‍ನಲ್ಲಿ ಅಲ್ಲ ರೀಲ್ ಲೈಫ್‍ನಲ್ಲಿ ಅಂತಹದ್ದೊಂದು ಪಾತ್ರ ನನ್ನರಸಿಕೊಂಡು ಬಂತು. ಆ ಸಿನಿಮಾದ ಭಾಗವಾಗುವ, ಆ ಪಾತ್ರಕ್ಕೆ ಬಣ್ಣಹಚ್ಚುವ ಅವಕಾಶ ನನ್ನದಾಯ್ತು ಅಂತ ಹೇಳಿಕೊಳ್ತಾರೆ. ಅಷ್ಟಕ್ಕೂ, ಆ ಚಿತ್ರ ಬೇರಾವುದು ಅಲ್ಲ ಶ್ರೀನಿ ಹನುಮಂತರಾಜು (Srini Hanumantharaju) ನಿರ್ದೇಶನದ ಅಂಬುಜ.
ಗಾಂಧಿನಗರದಲ್ಲಿ ಸೌಂಡ್ ಮಾಡ್ತಿರುವ ಸಿನಿಮಾಗಳ ಪೈಕಿ ಅಂಬುಜ (Ambuja) ಚಿತ್ರ ಕೂಡ ಒಂದು. ಟೈಟಲ್‍ನಿಂದಲೇ ಒಂದಿಷ್ಟು ಕುತೂಹಲ ಮೂಡಿಸಿದ್ದ ಈ ಸಿನಿಮಾ, ಟೀಸರ್, ಟ್ರೈಲರ್, ಹಾಡುಗಳಿಂದ ನಿರೀಕ್ಷೆ ಹೆಚ್ಚಿಸಿದೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಟಿ ಶುಭ ಪೂಂಜಾ (Shubha Poonja), ಅಮೃತ ವರ್ಷಿಣಿ ಖ್ಯಾತಿಯ ರಜನಿ ಮುಖ್ಯಭೂಮಿಯಲ್ಲಿದ್ದಾರೆ. ದೀಪಕ್ ಸುಬ್ರಮಣ್ಯ, ಪದ್ಮಜ ರಾವ್, ಶರಣಯ್ಯ, ಬೇಬಿ ಆಕಾಂಕ್ಷ ,ಜಗದೀಶ್ ಹಲ್ಕುಡೆ, ನಿಶಾ ಹೆಗ್ಡೆ, ಗುರುದೇವ ನಾಗರಾಜ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದು, ಜಿಜಿ ಅಲಿಯಾಸ್ ಗೋವಿಂದೇಗೌಡ್ರು ಕಾಂಪೌಂಡರ್ ಆಗಿ, ನಟಿ ಶುಭ ಪೂಂಜಾರ ಕೇರ್ ಟೇಕರ್ ಆಗಿ ಗಮನ ಸೆಳೆಯಲಿದ್ದಾರೆ.
ಕಾಮಿಡಿ ಟೈಮಿಂಗ್‍ನಿಂದ, ತಮ್ಮ ಅಮೋಘ ಅಭಿನಯದಿಂದ ಕನ್ನಡಿಗರ ಮನಸ್ಸು ಗೆದ್ದಿರೋ ಜಿಜಿ, ಹಾಸ್ಯ ಪಾತ್ರಗಳಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ, ಗಂಭೀರ ಪಾತ್ರಗಳಿಗೂ ಸೈ ಎನ್ನುತ್ತಿದ್ದಾರೆ. ತಮ್ಮನ್ನ ಹುಡುಕಿಕೊಂಡು ಬರುವ ಯಾವ ಪಾತ್ರವನ್ನೂ ಕೈಬಿಡಲು ಒಪ್ಪದ ಗೋವಿಂದೇಗೌಡ್ರು, ನಿರ್ದೇಶಕನ ಅಣತಿಯಂತೆ ವರ್ಕ್‍ಶಾಪ್ ಮಾಡಿಯಾದ್ರೂ ಸರೀ, ದೇಹ ದಂಡಿಸಿಯಾದ್ರೂ ಸರೀ ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಸ್ಯಾಂಡಲ್‍ವುಡ್‍ನ ಆಲ್ಮೋಸ್ಟ್ ಆಲ್ ಎಲ್ಲಾ ಸ್ಟಾರ್ ಗಳ ಸಿನಿಮಾಗಳಲ್ಲಿ ಮಿಂಚಿರುವ ಜಿಜಿ ಈಗ ಪರಭಾಷೆಗೂ ಲಗ್ಗೆ ಇಟ್ಟಿದ್ದಾರೆ. ಇದನ್ನೂ ಓದಿ:ಕೊನೆಗೂ ಮಗುವಿನ ತಂದೆ ಯಾರೆಂದು ಗುಟ್ಟು ಬಿಟ್ಟು ಕೊಟ್ಟ ಇಲಿಯಾನಾ
ನಿಮಗೆಲ್ಲ ಗೊತ್ತಿರುವ ಹಾಗೇ ಕೆಜಿಎಫ್ ಸಿನಿಮಾದಿಂದ ಜಿಜಿಗೆ ಅದೃಷ್ಠ ಖುಲಾಯಿಸ್ತು. ಬಾಲಿವುಡ್‍ನಿಂದಲೂ ಬುಲಾವ್ ಬಂತು. ವೆಬ್‍ಸೀರಿಸ್ ತಂಡ ಕೂಡ ಜಿಜಿನಾ ಸಂಪರ್ಕ ಮಾಡಿದ್ದುಂಟು. ಆದರೆ, ಜಿಜಿ ಕನ್ನಡದಕ್ಕೆ ಮೊದಲ ಆದ್ಯತೆ ಕೊಟ್ಟರು. ಯಶ್, ಸುದೀಪ್, ಪುನೀತ್, ಶಿವಣ್ಣ, ದರ್ಶನ್ ಸೇರಿದಂತೆ ಹಲವು ಕನ್ನಡದ ನಟರುಗಳೊಟ್ಟಿಗೆ ಸ್ಕ್ರೀನ್ ಶೇರ್ ಮಾಡಿದರು. ಹೊಸಬರ ಸಿನಿಮಾದಲ್ಲೂ ಮಿಂಚಿದ್ರು. ಈಗ್ಲೂ ಗೋವಿಂದೇಗೌಡ್ರ ಕೈಯಲ್ಲಿ ಕಿಚ್ಚ-46, ಕರಟಕ ದಮನಕ, ಗ್ರಾಮಾಯಣ ಸೇರಿದಂತೆ ಇನ್ನೂ ಹಲವಾರು ಚಿತ್ರಗಳಿವೆ. ಈ ಮಧ್ಯೆ ಜಿಜಿ ಟಾಲಿವುಡ್‍ಗೆ ಲಗ್ಗೆ ಇಟ್ಟಿದ್ದು, ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜಾ ಜೊತೆ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅಂಬುಜ, ನಮೋ ಭೂತಾತ್ಮ-2, ಜೋಗ್ 101 ಚಿತ್ರದ ರಿಲೀಸ್‍ಗಾಗಿ ಎದುರುನೋಡ್ತಿದ್ದಾರೆ.
ಅಂಬುಜ ಇದೇ ಜುಲೈ 21 ರಂದು ತೆರೆಗೆ ಬರಲಿದೆ. ಮರ್ಡರ್ ಮಿಸ್ಟ್ರಿ ಹಾರರ್ ಥ್ರಿಲ್ಲರ್ ಎಲಿಮೆಂಟ್ಸ್ ಒಳಗೊಂಡಿರೋ ಚಿತ್ರ ಇದಾಗಿದ್ದು, ಕಾಶಿನಾಥ್ ಡಿ ಮಡಿವಾಳರ್ (Kashinath Madivalar) ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಒದಗಿಸುವುದರ ಜೊತೆಗೆ ಬಂಡವಾಳ ಕೂಡ ಹೂಡಿದ್ದಾರೆ.
ಎಸ್.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಲೋಕೇಶ್ ಭೈರವ, ಶಿವಪ್ರಕಾಶ್.ಎನ್ ಸಹಯೋಗದ ಜೊತೆ ಅಂಬುಜ ಚಿತ್ರವನ್ನ ಅದ್ದೂರಿಯಾಗಿ ತೆರೆಗೆ ತರುತ್ತಿದ್ದಾರೆ. ಪ್ರಸನ್ನ ಕುಮಾರ್ ಮ್ಯೂಸಿಕ್, ತ್ಯಾಗರಾಜ್ ಅವ್ರ ಹಿನ್ನಲೆ ಸಂಗೀತ ಚಿತ್ರಕ್ಕಿದೆ. ವಿಜಯ್ ಎಂ ಕುಮಾರ್ ಸಂಕಲನ, ಮುರುಳೀಧರ್ ಎಂ ಛಾಯಾಗ್ರಹಣ ಚಿತ್ರಕ್ಕಿದ್ದು, ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಇದೇ ಜುಲೈ 21ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]