ರಾಯಚೂರು: ರಾಜಕೀಯ ದುರುದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಸಿಬಿ ಮೂಲಕ ಯಡಿಯೂರಪ್ಪ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಅಂತ ವಿಪಕ್ಷ ನಾಯಕ ಜಗದೀಶ್ ಶಟ್ಟರ್ ಪುನರುಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಸಿಬಿಯಲ್ಲಿ 25 ಕ್ಕೂ ಹೆಚ್ಚು ದೂರುಗಳಿವೆ. ಎಸಿಬಿ ಅಧಿಕಾರಿಗಳಿಗೆ ಪ್ರಾಮಾಣಿಕತೆಯಿದ್ದರೆ ಎಷ್ಟು ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದ್ದೀರಿ. ಎಷ್ಟು ಪ್ರಕರಣಗಳ ತನಿಖೆ ನಡೆದಿದೆ. ಎಷ್ಟು ಕೇಸ್‍ಗಳಲ್ಲಿ ಸಿಎಂ ಮೇಲೆ ಸಮನ್ಸ್ ಜಾರಿ ಮಾಡಿದ್ದೀರಿ ಅನ್ನೋದು ಹೇಳಿ ಅಂತ ಪ್ರಶ್ನಿಸಿದರು.
ಸಿದ್ದರಾಮಯ್ಯ ಹಾಗೂ ಅವರ ಸಚಿವರ ಮೇಲೆ ಯಾವ ಪ್ರಕರಣ ದಾಖಲಾಗುತ್ತಿಲ್ಲ. ವಿರೋಧ ಪಕ್ಷದ ನಾಯಕರ ಮೇಲೆ ಕೇಸ್ ಹಾಕುತ್ತಿರುವುದು ರಾಜಕೀಯ ದೌರ್ಜನ್ಯ ಎಂದು ಶೆಟ್ಟರ್ ಕಿಡಿಕಾರಿದರು.
ಎಸಿಬಿಯನ್ನ ತಮ್ಮ ಕೈ ವಶ ಮಾಡಿಕೊಂಡು ವಿರೋಧ ಪಕ್ಷದ ನಾಯಕರ ಮೇಲೆ ಸಿದ್ದರಾಮಯ್ಯ ರಾಜಕೀಯ ಹಗೆ ಸಾಧಿಸುತ್ತಿದ್ದಾರೆ. 3,546 ಎಕರೆಯ ಶಿವರಾಮ ಕಾರಂತ್ ಬಡಾವಣೆ ಯೋಜನೆ 2015-16 ಹೈಕೋರ್ಟ್‍ನಲ್ಲಿ ರದ್ದಾಗಿದೆ. ಈಗ ಅಲ್ಲಿ ಯಾವ ಲೇಔಟ್ ಇಲ್ಲ, ಯೋಜನೆಯೇ ರದ್ದಾದ ಮೇಲೆ ಪ್ರಕರಣ ದಾಖಲಿಸುವುದು ರಾಜಕೀಯ ದ್ವೇಷವಲ್ಲದೆ ಮತ್ತಿನ್ನೇನು? ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಅಂತ ಜಗದೀಶ್ ಶಟ್ಟರ್ ಹೇಳಿದ್ದಾರೆ.