ತಿರುಪತಿ: ಪ್ರತಿ ವರ್ಷ ವೈಕುಂಠ ಏಕಾದಶಿ (Vaikunta Ekadasi ) ಸಮಯದಲ್ಲಿ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನನಕ್ಕೆ (Tirupati Temple) ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇಶ ವಿದೇಶಗಳಲ್ಲಿ ಭಕ್ತರು ಆಗಮಿಸಿ ದೇವರನ್ನು ಸಂದರ್ಶಿಸಿ ಪುನೀತರಾಗುತ್ತಾರೆ.
ಸಾಧಾರಣವಾಗಿ ತಿರುಪತಿಯಲ್ಲಿ ಎರಡು ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಒಂದು ಒಂಬತ್ತು ದಿನಗಳ ಕಾಲ ನಡೆಯಲಿರುವ ಬ್ರಹ್ಮೋತ್ಸವ (Bsrahmotsavam) ಎರಡನೇಯದ್ದು ವೈಕುಂಠ ಏಕಾದಶಿ.
Advertisement
ಆರಂಭದಲ್ಲಿ ಒಂದೇ ದಿನ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿತ್ತು. ಆದರೆ 1980 ಮತ್ತು 1990 ರ ದಶಕದ ಬಳಿಕ ಭಾರೀ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಬರಲು ಆಗಮಿಸತೊಡಗಿದರು. ಹೀಗಾಗಿ ಟಿಟಿಡಿ ವೈಕುಂಠ ದ್ವಾದಶಿಯನ್ನು ಹೆಚ್ಚುವರಿ ಪವಿತ್ರ ದಿನವೆಂದು ಗುರುತಿಸುವ ಮೂಲಕ ಹಬ್ಬದ ಸಂಭ್ರಮವನ್ನು ವಿಸ್ತರಿಸಿತು.
Advertisement
Advertisement
ಮಕರ ಸಂಕ್ರಾಂತಿ ಹಬ್ಬದ ಹಿಂದಿನ ಎರಡೂ ದಿನಗಳನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ತಿರುಮಲದಲ್ಲಿ ವೆಂಕಟೇಶ್ವರನೆಂದು ಪೂಜಿಸಲ್ಪಡುವ ವಿಷ್ಣುವನ್ನು ಈ ಅವಧಿಯಲ್ಲಿ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
Advertisement
ಸಾಮಾನ್ಯ ಭಕ್ತರು ಅಲ್ಲದೇ ವೈಕುಂಠ ಏಕಾದಶಿಯ ಸಮಯದಲ್ಲಿ ಗೋವಿಂದನ ಮಾಲೆಯನ್ನು ಧರಿಸಿದ ಭಕ್ತರು ತಿರುಪತಿಗೆ ಬರುತ್ತಾರೆ. ವೈಕುಂಠ ಏಕಾದಶಿಗೆ 41 ದಿನಗಳ ಮುಂಚಿತವಾಗಿ ಗೋವಿಂದ ಮಾಲೆಯನ್ನು ಭಕ್ತರು ಧರಿಸಿ ವ್ರತಾಚರಣೆ ಮಾಡುತ್ತಾರೆ. ಭಕ್ತಿಯ ಸಂಕೇತವಾಗಿ ಭಕ್ತರು ನೂರಾರು ಕಿಲೋಮೀಟರ್ ದೂರದಿಂದ ಬರಿಗಾಲಿನಲ್ಲಿ ನಡೆದುಕೊಂಡು ತಿರುಪತಿಗೆ ಬರುತ್ತಾರೆ. ಇದನ್ನೂ ಓದಿ: ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್ ಗೇಟ್ ಓಪನ್ ಮಾಡಿದ್ದು ಯಾಕೆ?
ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ನಾಯಕರ ಜೊತೆ ಚರ್ಚಿಸಿದ ಬಳಿಕ ಟಿಟಿಡಿ 2021-2022 ರಲ್ಲಿ ವೈಕುಂಠ ಏಕಾದಶಿ ಮತ್ತು ದ್ವಾದಶಿಯನ್ನು ಹತ್ತು ದಿನಗಳವರೆಗೆ ವಿಸ್ತರಿಸಿತು. ಈ ನಿರ್ಧಾರದ ನಂತರ ವೆಂಕಟೇಶ್ವರನ ಗರ್ಭಗುಡಿಯ ಸುತ್ತಲಿನ ಉತ್ತರ ದ್ವಾರವನ್ನು ಹತ್ತು ದಿನಗಳವರೆಗೆ ತೆರೆದಿಡಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರು ಉತ್ತರ ದ್ವಾರದ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆದು ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥನೆ ಮಾಡುತ್ತಾರೆ.