ಧಾರವಾಡ: ಸದಾಶಿವ ಆಯೋಗದ ವರದಿ ಸಿದ್ಧವಾಗಿ 25 ವರ್ಷ ಕಳೆದು ಧೂಳು ಹಿಡಿದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಬಹಳ ಧೈರ್ಯದಿಂದ ಅದರ ಅನುಷ್ಠಾನಕ್ಕೆ ಹೊರಟಿದ್ದಾರೆ. ಮೀಸಲಾತಿ ಕೊಡಬಾರದು ಎಂದು ಈ ಹಿಂದಿನ ಸರ್ಕಾರಗಳಿಗೆ ಯಾರಾದರೂ ಹೇಳಿದ್ದಾರಾ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ (Halappa Achar) ಹೇಳಿದ್ದಾರೆ.
Advertisement
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಎನ್ನುವುದು ಹುಡುಗಾಟದ ವಿಚಾರವಾಗಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ (H. D. Kumaraswamy) ಹೇಳಿಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಅದಾನಿ ಕಂಪನಿ ವಿರುದ್ಧ JPC ತನಿಖೆಗೆ ಆಗ್ರಹ – ಸಂಸತ್‌ನಲ್ಲಿ ಕಪ್ಪು ಬಟ್ಟೆ ಧರಿಸಿ ವಿಪಕ್ಷಗಳ ಪ್ರತಿಭಟನೆ
Advertisement
ಮೀಸಲಾತಿಗೆ ಹೋರಾಟ ಮಾಡಿದವರೆಲ್ಲ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಹಿಂದಿನ ಸರ್ಕಾರಗಳು ವರದಿ ಅನುಷ್ಠಾನ ಮಾಡಲಿಲ್ಲ ಎಂದರೆ ಉಳಿದವರು ವರದಿ ಅನುಷ್ಠಾನ ಮಾಡಬಾರದಾ? ಸರ್ಕಾರ ಯಾರ ಮೀಸಲಾತಿಯನ್ನು ಕಸಿದುಕೊಂಡಿಲ್ಲ. ಸಂವಿಧಾನಾತ್ಮಕವಾಗಿ ಯಾರ ಮೀಸಲಾತಿಯನ್ನೂ ಕಸಿದುಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ.
Advertisement
Advertisement
ಕಾಂಗ್ರೆಸ್ (Congress) ಮೊದಲ ಪಟ್ಟಿ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮಲ್ಲಿ ಕಾಂಗ್ರೆಸ್‍ನವರ ಹಾಗೆ ಅಭ್ಯರ್ಥಿಗಳಲ್ಲಿ ಭಿನ್ನಾಭಿಪ್ರಾಯವಿಲ್ಲ. ಅವರಲ್ಲಿ ನಾಯಕರೇ ಬಡಿದಾಡುತ್ತಿದ್ದಾರೆ. ಸಿದ್ದರಾಮಯ್ಯ (Siddaramaiah) ಒಮ್ಮೆ ಬಾದಾಮಿ ಎನ್ನುತ್ತಾರೆ ಒಮ್ಮೆ ಮೈಸೂರು, ಕೊಪ್ಪಳ ಎನ್ನುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಕರ್ನಾಟಕದಲ್ಲಿ (Karnataka), ಗುಜರಾತ್ ಮಾದರಿಯ ಟಿಕೆಟ್ ಹಂಚಿಕೆ ನಡೆಯುವುದಿಲ್ಲ. ಸಹಜವಾಗಿ ಅಭ್ಯರ್ಥಿಗಳ ಮಧ್ಯೆ ಟಿಕೆಟ್‍ಗಾಗಿ ಪೈಪೋಟಿ ಇದೆ. ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಸರಿಯಾದ ಅಭ್ಯರ್ಥಿಗೆ ಟಿಕೆಟ್ ನೀಡಲಾಗುತ್ತದೆ ಎಂದರು. ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಸುಪ್ರೀಂ ನೋಟಿಸ್